ವಿಜಯಪುರ: ಅಧಿಕಾರಿಗಳು, ಸಿಬ್ಬಂದಿಯ ಗಂಭೀರ ಕೊರತೆ ಇರುವ ಪ್ರವಾಸೋದ್ಯಮ, ಕನ್ನಡ ಸಂಸ್ಕೃತಿ ಹಾಗೂ ಸಕ್ಕರೆ ಖಾತೆಗಳಿಗೆ ನಾನು ಸಚಿವನಾಗಿದ್ದೇನೆ. ಹಾಗಂತ ನಾನೇನು ಪಲಾಯನ ಮಾಡುವುದಿಲ್ಲ. ಇರುವ ಸಿಬ್ಬಂದಿಯನ್ನೇ ಬಳಸಿಕೊಂಡು ಅಭಿವೃದ್ಧಿ ಮಾಡುವ ಸಂಕಲ್ಪ ಮಾಡಿದ್ದೇನೆ ಎಂದು ಸಚಿವ ಸಿ.ಟಿ.ರವಿ ಹೇಳಿದರು.
ಸೋಮವಾರ ತಾವು ನಿರ್ವಹಿಸುತ್ತಿರುವ ಮೂರು ಖಾತೆಗಳ ಇಲಾಖೆಗಳ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ಪ್ರವಾಸೋದ್ಯಮ ಇಲಾಖೆಯಲ್ಲಿ ಶೇಕಡಾ ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಶೇ. ಹಾಗೂ ಸಕ್ಕರೆ ಇಲಾಖೆಯಲ್ಲಿ ಕೇವಲ ಸಿಬ್ಬಂದಿ ಇದ್ದಾರೆ.
ಸಕ್ಕರೆ ಇಲಾಖೆಯಲ್ಲಿ ಇರುವ ಅಧಿಕಾರಿ ಸಿಬ್ಬಂದಿಯಲ್ಲಿ ಎರವಲು ಸೇವೆಯಲ್ಲಿದ್ದಾರೆ ಎಂದು ಮೂರು ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆಯ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟರು.
ನನ್ನ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಇದ್ದಾರೆ ಎಂಬ ಕಾರಣಕ್ಕೆ ಬೆನ್ನು ತೋರಿಸುವ ಜಾಯಮಾನ ನನ್ನದಲ್ಲ. ಇರುವುದನ್ನೇ ಬಳಸಿಕೊಂಡು ಅಭಿವೃದ್ಧಿ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.