Advertisement
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ಚುನಾವಣೆಗೆ ಸ್ಪರ್ಧಿಸಬೇಕೆ? ಬೇಡವೇ ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ. ಆದರೆ, ನನ್ನ ಪತ್ನಿ ಮತ್ತು ಮಗ ಚುನಾವಣಾ ರಾಜಕೀಯಕ್ಕೆ ಬರುವುದಿಲ್ಲ’ ಎಂದರು. “ಕಾಂಗ್ರೆಸ್ ಟಿಕೆಟ್ಖಾತರಿಯಾಗದಿದ್ದರೆ ಜೆಡಿಎಸ್ ಅಥವಾ ಬಿಜೆಪಿ ಜತೆ ಹೋಗುತ್ತೀರಾ’ ಎಂಬ ಪ್ರಶ್ನೆಗೆ, “ಎರಡೂ ಪಕ್ಷಗಳಲ್ಲಿ ನನ್ನ ಸ್ನೇಹಿತರಿದ್ದು, ಒಟ್ಟಿಗೆ ಊಟ ಮಾಡುತ್ತೇವೆ ಮತ್ತು ಮಾತನಾಡುತ್ತೇವೆ. ನಾನು ಜೆಡಿಎಸ್‌ನಿಂದ ಸಂಸದನಾಗಿದ್ದವನು. ಹೀಗಾಗಿ ದೇವೇಗೌಡರ ಜತೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಜನ ಬಯಸಿದರೆ ಚುನಾವಣೆ ಯಲ್ಲಿ ಸ್ಪರ್ಧಿಸುತ್ತೇನೆ. ಅವರು ಬಯಸಿದರೆ ಮಾತ್ರ ರಾಜಕಾರಣದಲ್ಲಿರಲು ಸಾಧ್ಯ’ ಎಂದರಷ್ಟೇ ಹೊರತು ನೇರ ಉತ್ತರ ನೀಡಲಿಲ್ಲ.
●ಅಂಬರೀಶ್, ಕಾಂಗ್ರೆಸ್ ಶಾಸಕ