ದೊಡ್ಡಬಳ್ಳಾಪುರ: ತಾನು ದೇವನಹಳ್ಳಿ ಶಾಸಕ ಸ್ಥಾನದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು ಬೇರೆಯವರಿಗೂ ಟಿಕೆಟ್ ನೀಡಿದರೆ ಪಕ್ಷ ಸಂಘಟನೆಯಲ್ಲಿ ನಿರತನಾಗುತ್ತೇನೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು. ತಾಲೂಕಿನ ಮೆಳೇಕೋಟೆ ಗ್ರಾಮದ ಪೋಸ್ಟ್ ರಾಜಣ್ಣ ಅವರ ಮನೆಯಲ್ಲಿ ಗ್ರಾಮ ವಾಸ್ತವ್ಯ ನಡೆಸಿ ಮಾತನಾಡಿದರು.
ಕಳೆದ 40 ವರ್ಷಗಳಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ವಿವಿಧ ಜವಾಬ್ದಾರಿ ವಹಿಸಿಕೊಂಡು ರಾಜ್ಯಾದ್ಯಂತ ಪಕ್ಷ ಕಟ್ಟುವ ಕೆಲಸ ಮಾಡಿದ್ದೇನೆ. ಶಾಸಕನಾಗಿ ಒಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡು ವಲ್ಲಿ ತನ್ನದೇ ಆದ ದೂರ ದೃಷ್ಟಿ ಹೊಂದಿದ್ದು ತಮ್ಮ ಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿ ಮಾಡುವುದೇ ಕನಸಾಗಿದೆ ಎಂದರು.
ಸಂಜೆ 6.30ಕ್ಕೆ ಮೆಳೇಕೋಟೆ ಗ್ರಾಮದ ಪೋಸ್ಟ್ ರಾಜಣ್ಣ ಅವರ ಮನೆಯಲ್ಲಿ ಗ್ರಾಮ ವಾಸ್ತವ್ಯಕ್ಕೂ ಮುನ್ನ ಕಾರ್ಯಕ್ರಮ ನಡೆಯಿತು. ಛಲವಾದಿ ನಾರಾಯಣಸ್ವಾಮಿ ಪಕ್ಷದ ಸಂಘಟನೆ ಮತ್ತು ಸ್ಥಳೀಯ ಸಮಸ್ಯೆಗಳ ಬಗ್ಗೆ ಮುಖಂಡರ ಜೊತೆ ಚರ್ಚೆ ನಡೆಸಿದರು. ನಂತರ ತಮ್ಮ ಕಾರ್ಯಕರ್ತರೊಂದಿಗೆ ರಾಜಣ್ಣನವರ ಮನೆಯಲ್ಲಿ ಭೋಜನ ಸವಿದರು. ರಾತ್ರಿ ಅವರ ಮನೆಯಲ್ಲಿ ವಾಸ್ತವ್ಯ ಹೂಡಿ ಮಂಗಳವಾರ ಬೆಳಗ್ಗೆ ಉಪಹಾರ ಸೇವಿಸಿ ನಿರ್ಗಮಿಸಿದರು.
ಈ ವೇಳೆ ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭುವನಹಳ್ಳಿ ಮುನಿರಾಜು, ಕೆಪಿಸಿಸಿ ಮಾಜಿ ಸದಸ್ಯ ಸಿ.ಕೆ.ರಾಮಚಂದ್ರಪ್ಪ, ತೂಬಗೆರೆ ಹೋಬ ಳಿ ಕಾಂಗ್ರೆಸ್ ಅಧ್ಯಕ್ಷ ಎಂ.ಜಿ.ಜಗನ್ನಾಥ್, ಪ್ರಧಾನ ಕಾರ್ಯ ದರ್ಶಿ ಎನ್.ಆಂಜಿ ನಪ್ಪ, ಕಾಂಗ್ರೆಸ್ ಹಿರಿಯ ಮುಖಂಡರಾದ ಕೆ.ಶ್ರೀನಿವಾಸಮೂರ್ತಿ, ಎಂ.ಎಸ್.ಜಗನ್ನಾಥ್, ವಿಜಯಪುರ ಬ್ಲಾಕ್ ಉಪಾಧ್ಯಕ್ಷ ಡೇವಿಡ್ ನಾರಾಯ ಣಸ್ವಾಮಿ, ಜಿಲ್ಲಾ
ಎಸ್ಸಿ ಘಟಕದ ಅಧ್ಯಕ್ಷ ಲೋಕೇಶ್, ಪ್ರಧಾನ ಕಾರ್ಯದರ್ಶಿ ಕಾಂತರಾಜು, ಎಂಪಿಸಿಎಸ್ ಅಧ್ಯಕ್ಷ ನಂಜೇಗೌಡ, ಗ್ರಾಪಂ ಸದಸ್ಯ ಸತೀಶ್ ಮತ್ತಿತರರಿದ್ದರು.