Advertisement

ಐ ಆ್ಯಮ್‌ ಬಾಯ್‌ಕಾಟಿಂಗ್‌ ಯು

02:07 AM Apr 29, 2019 | sudhir |

ಬೆಂಗಳೂರು: ‘ಐ ಆ್ಯಮ್‌ ಬಾಯ್‌ಕಾಟಿಂಗ್‌ ಯು’ ಹೀಗೆಂದು ಸಿಟ್ಟಿಗೆದ್ದದ್ದು ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ. ಕರ್ನಾಟಕದಲ್ಲಿ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜತೆಗೆ ಭಾನುವಾರ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮದವರು ಪ್ರತಿಕ್ರಿಯೆಗಾಗಿ ತೆರಳಿದರು. ಈ ಸಂದರ್ಭದಲ್ಲಿ ಕೋಪಗೊಂಡ ಮುಖ್ಯಮಂತ್ರಿ ‘ಐ ಆ್ಯಮ್‌ ಬಾಯ್‌ಕಾಟಿಂಗ್‌ ಯು. ಅದೇನು ಸ್ಟೋರಿನೋ, ಅದೇನೋ ಚರ್ಚೆ ಮಾಡುತ್ತೀರೋ ಮಾಡಿಕೊಳ್ಳಿ. ಆ ಮೂಲಕ ಮಜಾ ಮಾಡಿ. ನಾನು ನಿಮ್ಮ ಜತೆ ಮಾತನಾಡಬಾರದು ಎಂದು ತೀರ್ಮಾನ ಮಾಡಿದ್ದೇನೆ’ ಎಂದು ಹೇಳಿದರು.

Advertisement

‘ನಾನು ಏನೂ ಮಾತನಾಡಲ್ಲ. ನೀವೇ ಎಲ್ಲ ನಿರ್ಧಾರ ಮಾಡುತ್ತೀರಿ. ಮತ್ತೆ ನನ್ನನ್ನು ಯಾಕೆ ಕೇಳುತ್ತೀರಿ’ ಎಂದು ಪ್ರಶ್ನಿಸಿದರು. ಒಂದು ವಾರದ ಅವಧಿಯಲ್ಲಿ ಇದು ಎರಡನೇ ಘಟನೆಯಾಗಿದೆ. ಏ.18ರಂದು ಕೂಡ ಮುಖ್ಯಮಂತ್ರಿಯವರು ಮಾಧ್ಯಮಗಳ ವಿರುದ್ಧ ಸಿಟ್ಟಿಗೆದ್ದಿದ್ದರು. ಮೂಲಗಳ ಪ್ರಕಾರ ಮಂಡ್ಯದಲ್ಲಿ ಮತದಾನ ನಡೆದ ಬಳಿಕ ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿದೆ ಎಂದು ಹೇಳಲಾಗಿರುವ ವರದಿಗಳಿಗೆ ಸಿಎಂ ಕೋಪಗೊಂಡಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next