ತುಮಕೂರು: ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳು ನೀತಿಗೆಟ್ಟ ರಾಜಕಾರಣ ಮಾಡಿ ಸಮಾಜ ಹಾಳು ಮಾಡುತ್ತಿವೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಶುಕ್ರವಾರ ಕಿಡಿ ಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೊಗಡು ಶಿವಣ್ಣ ರಾಜ್ಯದಲ್ಲಿ ನೀತಿ ಗೆಟ್ಟ ರಾಜಕಾರಣ ನಡೆಯುತ್ತಿದೆ.ಸಮಾಜ ಉಳಿಯಬೇಕು ಹಾಗಾಗಿ ರಾಜ್ಯಪಾಲರು ರಾಷ್ಟ್ರಪತಿ ಆಡಳಿತ ಹೇರಲು ಶಿಫಾರಸು ಮಾಡಬೇಕು ಎಂದರು.
ದೇಶಕ್ಕಾಗಿ ತ್ಯಾಗ ಬಲಿದಾನ ಮಾಡದೇ ಇದ್ದವರು ಇಂದು ಅಧಿಕಾರಕ್ಕಾಗಿ ಕಚ್ಚಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿ ಕಾರಿದರು. ಇದೇ ವೇಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತ್ಯಾಗ ಬಲಿದಾನ ಮಾಡಿದ್ದಾರೆ.ಅವರ ಬಗ್ಗೆ ಮಾತನಾಡುವುದಿಲ್ಲ ಎಂದು ಕಿಡಿ ಕಾರಿದರು.
ಆಪರೇಷನ್ ಕಮಲ ಮಾಡುವ ಅಗತ್ಯ ಏನಿದೆ. ನಾನು ಆಪರೇಷನ್ ಕಮಲದ ವಿರೋಧಿ. ವಾಜಪೇಯಿ ಅವರು ನಮಗೆ ಆದರ್ಶ , ಅವರು ಅಧಿಕಾರ ಉಳಿಸಿಕೊಳ್ಳಲು ಆಪರೇಷನ್ ಕಮಲ ಮಾಡಬಹುದಿತ್ತು, ಆದರೆ ಅವರು ನೀತಿಗೆಟ್ಟ ರಾಜಕಾರಣ ಮಾಡಲಿಲ್ಲ ಎಂದರು.
ನಾನು ಯಾರಿಗೂ ಹೆದರುವುದಿಲ್ಲ. ನನಗೆ ಶೂಟ್ ಮಾಡಿದರೂ ಎದೆಯೊಡ್ಡುತ್ತೇನೆ ಎಂದು ಸ್ವಪಕ್ಷೀಯರ ವಿರುದ್ಧ ತೀವ್ರ ಅಸಮಾಧಾನ ಹೊರ ಹಾಕಿದರು.