Advertisement

ನಾನು ಕಿತ್ತೂರಿನ ಹೆಣ್ಣು: ಲಕ್ಷ್ಮೀ ಹೆಬ್ಬಾಳ್ಕರ್‌

11:32 PM Jul 19, 2019 | Lakshmi GovindaRaj |

ಬೆಂಗಳೂರು: “ನಾನು ಕಿತ್ತೂರಿನ ಹೆಣ್ಣು, ಯಾರಿಗೂ ಹೆದರುವಳಲ್ಲ. ನನ್ನನ್ನು ಹೆದರಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದಾರೆ.

Advertisement

ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ವಿಶ್ವಾಸಮತ ಯಾಚನೆಯ ಪರವಾಗಿ ವಿಧಾನಸಭೆಯಲ್ಲಿ ಮಾತನಾಡಿದ ಅವರು, ತಾವು ರಾಜಕೀಯ ಪ್ರವೇಶ ಮಾಡಿರುವುದು, ಸಾಕಷ್ಟು ವಿರೋಧದ ನಡುವೆ ಜಯ ಗಳಿಸಿರುವ ಕಷ್ಟದ ಬಗ್ಗೆ ಸದನದ ಗಮನ ಸೆಳೆಯುವ ಪ್ರಯತ್ನ ಮಾಡಿದರು. ಮೊದಲ ಬಾರಿಗೆ ಶಾಸಕಿಯಾಗಿ ಪ್ರಮಾಣ ಪತ್ರ ಪಡೆದಾಗ ಸಂತೋಷದಿಂದ ಕಣ್ಣೀರು ಹಾಕಿದ್ದೇನೆ.

ಆದರೆ, ರಾಜ್ಯದ ರಾಜಕೀಯ ಬೆಳವಣಿಗೆಗಳು ಪ್ರಜಾಪ್ರಭುತ್ವವನ್ನು ಅಣಕಿಸುವಂತಿವೆ. ನಮ್ಮ ರಾಜ್ಯದ ಬಗ್ಗೆ ಬೇರೆ ರಾಜ್ಯದವರು ಅಣಕವಾಡುವಂತಾಗಿದೆ. ರಾಜಕಾರಣಿಗಳ ಬಗ್ಗೆ ಸಮಾಜದಲ್ಲಿ ಬೆಲೆ ಇಲ್ಲದಂತಾಗಿದೆ. ನಾನು ನನ್ನ ಮಗನಿಗೆ ಸಂಬಂಧ ಹುಡುಕಲು ಹೋದರೆ, ನನಗೆ ಗೌರವ ಸಿಗುತ್ತದೆಯಾ ಎಂದು ಪ್ರಶ್ನಿಸಿದರು.

ಪಶ್ಚಿಮ ಬಂಗಾಳ, ಗೋವಾ ಈಗ ಕರ್ನಾಟಕದಲ್ಲಿ ಶಾಸಕರ ರಾಜೀನಾಮೆ ಪರ್ವ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ ನಮ್ಮ ಪ್ರಧಾನಮಂತ್ರಿಗಳು ಭಾಷಣ ಮಾಡುತ್ತ ಮೂವತ್ತು, ನಲವತ್ತು ಟಿಎಂಸಿ ಶಾಸಕರು ಬಿಜೆಪಿ ಸೇರುತ್ತಾರೆ ಎನ್ನುತ್ತಾರೆ. ನಾನು ಅತೃಪ್ತರಿಗೆ ಮನವಿ ಮಾಡುತ್ತೇನೆ. ತಕ್ಷಣ ವಾಪಸ್‌ ಬನ್ನಿ. ದೇವರು ಒಳ್ಳೆಯ ಬುದ್ದಿ ಕೊಡಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next