Advertisement

ನಾನು ಕೋಟಾ ಶ್ರೀನಿವಾಸ್‌ ಪೂಜಾರಿ ಅವರ ಅಭಿಮಾನಿ: ಡಿ.ಕೆ.ಶಿವಕುಮಾರ್

06:19 PM Jul 06, 2023 | Team Udayavani |

ವಿಧಾನಪರಿಷತ್ : ನಾನು ಕೋಟಾ ಶ್ರೀನಿವಾಸ್‌ ಪೂಜಾರಿ ಅವರ ಅಭಿಮಾನಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಗುರುವಾರ ವಿಧಾನ ಪರಿಷತ್ ಕಲಾಪದಲ್ಲಿ ಹೇಳಿದ್ದಾರೆ.

Advertisement

ಕಲಾಪದಲ್ಲಿ ಭಾಗಿಯಾಗಿ ಮಾತನಾಡಿದ ಡಿಸಿಎಂ, ಈ ಪರಿಷತ್ತಿನ ಘನತೆ ಹೇಗಿತ್ತು ಎಂದರೆ ಬಂಗಾರಪ್ಪ ಅವರ ಕಾಲದಲ್ಲಿ ಮಂತ್ರಿಯಾಗಿ ಬಂದವನು ನಾನು. ಎಚ್‌.ಕೆ.ಪಾಟೀಲ್‌, ಕಲ್ಮನ್‌ಕರ್‌, ಎಕೆ.ಸುಬ್ಬಯ್ಯ, ಎಂಸಿ ನಾಣಯ್ಯ ಇದ್ದರು.ಎರಡನೇ ಹಾಗೂ ಮೂರನೇ ದರ್ಜೆ ಲಿಕ್ಕರ್‌ ಕುರಿತು ಎಂಸಿ.ನಾಣಯ್ಯ ಅವರ ಮಾತನ್ನು ಕೇಳಿ, ಎಸ್‌.ಎಂ.ಕೃಷ್ಣ ಅವರು ಲಿಕ್ಕರ್‌ಗಳನ್ನ ಬ್ಯಾನ್‌ ಮಾಡುವುದಾಗಿ ಹೇಳಿದ್ದರು ಎಂದರು.

ಹಿರಿಯರ ಮನೆ ಇದು, 33 ವರ್ಷ ಆಯಿತು ಇಲ್ಲಿಗೆ ಬಂದು ಇದರ ಘನತೆಯನ್ನು ಕಾಪಾಡಬೇಕು. ನಮ್ಮ ಪಂಚ ಗ್ಯಾರಂಟಿಗಳನ್ನ ಮನತುಂಬಿ ಒಪ್ಪಿಕೊಂಡಿದ್ದೀರಿ ಧನ್ಯವಾದಗಳು. ನಾನು ಸಮಾಧಾನದಿಂದ ನಿಮ್ಮ ಮಾತನ್ನು ಆಲಿಸಿದ್ದೇನೆ. ಅರ್ಚಕಸ್ಯ ಪ್ರಭಾವೇನ ಶಿಲಾಭವತಿ ಶಂಕರಃ “ಅರ್ಚಕನ ಪ್ರಭಾವದಿಂದ ಶಿಲೆ ಕೂಡ ಶಂಕರನನ್ನು ಕಾಣಬಹುದು” ಎಂದರು.

ಅಧ್ಯಕ್ಷರೇ, ಈ ರಾಜ್ಯದ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಈ ಹಿಂದನ ಸರ್ಕಾರದ ಎಲ್ಲಾ ಆಚಾರ- ವಿಚಾರಗಳನ್ನ ನಾವು ಪ್ರಚಾರ ಮಾಡಿದ್ದೆವು, ಅದರ ಬಗ್ಗೆ ಮಾತನಾಡುವುದಿಲ್ಲ.ನಮ್ಮಪಂಚ ಗ್ಯಾರಂಟಿಗಳನ್ನ ರಾಜ್ಗಪಾಲರ ಭಾಷಣದ ಮೂಲಕ ನೀವುಗಳು ತಿಳಿದುಕೊಳ್ಳಬಹುದು. ಬೇರೆ ಚರ್ಚೆಗೆ ಸಂದರ್ಭವಲ್ಲ.ಯಾಕೆ ಈ ಯೋಜೆನಗಳನ್ನು ತಂದೆವು ಎಂದರೆ ಪ್ರತಿ ದಿನ ಪಿಕ್ ಪಾಕೆಟ್ ಆಗ್ತಾ ಇತ್ತು. 60 ರೂಪಾಯಿ ಇದ್ದ ಪೆಟ್ರೋಲ್‌ ಡಿಸೇಲ್‌ 100 ರೂಪಾಯಿ ಆಗಿ ಗ್ಯಾಸ್‌ 1 ಸಾವಿರ ರೂಪಾಯಿ ಆಗಿ, ಉಪ್ಪು, ಮೊಸರಿಗೂ ಜಿ ಎಸ್ ಟಿ ಹಾಕಿ ಸಾಕಷ್ಟು ಕಷ್ಟ ಆಗುತ್ತಿತ್ತು.ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದರು ಜನ. ಈ ಕಾರಣಕ್ಕೆ ಈ ಪಂಚ ಯೋಜನೆಗಳನ್ನು ಜಾರಿಗೆ ತರುವ ಆಲೋಚನೆ ಬಂದಿತು. ಯಾವುದೇ ಭ್ರಷ್ಟಾಚಾರ ಇಲ್ಲದೇ, ಯಾವುದೇ ಪೇ ಕಮಿಷನ್‌, ಪೇ ಮಿನಿಸ್ಟರ್‌, ಪೇ ಸಿಎಂ ಆಗದಂತೆ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.

ನಾವು ನೀವು ಯಾವುದೇ ಸಲಹೆ- ಸೂಚನೆಗಳನ್ನು ಕೊಟ್ಟರು ನಾವು ತೆಗೆದುಕೊಳುತ್ತೇವೆ. ಈಗ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಗೆ ಅವಕಾಶವಿದೆ, ಅದರ ಮೇಲೆ ಮೊದಲು ಚರ್ಚೆಯಾಗಲಿ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next