Advertisement

ನಾನೂ ರಾಮ ಭಕ್ತ, ಆದರೆ ಅಯೋಧ್ಯೆಗೆ ಬರಲು ಆಹ್ವಾನ ನೀಡಿಲ್ಲ, ಹೋಗಲ್ಲ: ಶೆಟ್ಟರ್

02:39 PM Jan 19, 2024 | Team Udayavani |

ಕಲಬುರಗಿ: “ನೋಡಿ, ನಾನು ರಾಮಭಕ್ತ… ಹಿಂದೆ ಬಿಜೆಪಿಯಲ್ಲಿದ್ದಾಗ ರಾಮಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹ ಮಾಡುವಾಗ ಈ ಭಾಗದಿಂದ ಎರಡು ಕೋಟಿ ರೂಪಾಯಿಗಳನ್ನು ಸಂಗ್ರಹ ಮಾಡಿ ಕೊಟ್ಟಿದ್ದೇವೆ. ಆದರೆ ನಮಗೆ ಅಧಿಕೃತವಾಗಿ ಆಹ್ವಾನ ಬಂದಿಲ್ಲ. ಹೀಗಾಗಿ ಅಯೋಧ್ಯೆಗೆ ಹೋಗುವುದಿಲ್ಲ” ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಹೇಳಿದರು.

Advertisement

ನದರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷತ್ ನಿಧಿ ಸಂಗ್ರಹಕ್ಕೆ ನಮಗೆ ಸೂಚಿಸಿತ್ತು. ಆದರೆ ಇವತ್ತು ಆಹ್ವಾನ ಬಂದಿಲ್ಲ. ಬಂದಾಗ ನೋಡೋಣ ಎಂದರು.

ಕಾಂಗ್ರೆಸ್ ಹಿಂದೂ ವಿರೋಧಿ ಎನ್ನುತ್ತಾರಲ್ಲಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ಒಂದು ವೇಳೆ ಕಾಂಗ್ರೆಸ್ ಹಿಂದು ವಿರೋಧಿಯೇ ಆಗಿದ್ದರೆ ಕರ್ನಾಟಕದಲ್ಲಿ ಕಳೆದ ವಿಧಾನಸಭೆಯಲ್ಲಿ 136 ಸ್ಥಾನಗಳನ್ನು ಗೆಲ್ಲಲು ಹೇಗೆ ಸಾಧ್ಯವಾಗುತ್ತಿತ್ತು ಎಂದರು. ಅದರಲ್ಲಿ ಹಿಂದೂಗಳು ಮತ ಹಾಕಿಲ್ಲವೇ ಎಂದು ಪ್ರಶ್ನಿಸಿದರು.

ಹಿಂದಿನಿಂದಲೂ ಒಂದು ಮಾತಿದೆ, ಧರ್ಮದಲ್ಲಿ ರಾಜಕಾರಣ ಬೇಡ ಆದರೆ ರಾಜಕಾರಣದಲ್ಲಿ ಧರ್ಮ ಒಪ್ಪಿತವಾದದ್ದು, ಅದರೆ ಚರ್ಚೆ ಅನಗತ್ಯ. ಆದರೆ ರಾಮ ಮಂದಿರದ ವಿಚಾರದಲ್ಲಿ ಬಿಜೆಪಿ ಲೋಕಸಭೆಯ ಚುನಾವಣೆಯನ್ನು ಮುಂದಿಟ್ಟುಕೊಂಡು ಮಾಡುತ್ತಿರುವಂತಹ ಕಾರ್ಯ ಇದು ರಾಜಕಾರಣವಾಗುತ್ತದೆ ಎಂದರು.

ಕಾಂಗ್ರೆಸ್ ನಲ್ಲಿ ಅಮಾಧಾನದಿಂದ ಇದ್ದೇನೆ. ನಾನು ಯಾವುದೇ ಷರತ್ತುಗಳಿಲ್ಲದೆ ಕಾಂಗ್ರೆಸ್ ಗೆ ಬಂದಿದ್ದೇನೆ. ಹಾಗೂ ಕಾಂಗ್ರೆಸ್ ನಲ್ಲಿ ಸಮಾಧಾನದಿಂದ ಇದ್ದೇನೆಲ್ಲ ಎಂದ ಶೆಟ್ಟರ್…ನೀವೂ ಕಾಂಗ್ರೆಸ್ ನಲ್ಲಿ ಸಂತೋಷದಿಂದ ಇದ್ದಿರಾ? ಎಂದು‌ ಕೇಳಿದಾಗಲೂ ನಾನು ಸಮಾಧಾನದಿಂದ ಇದ್ದೇನಲ್ಲಾ ಎಂದು ಅರ್ಥಗರ್ಭಿತವಾಗಿ‌ ನುಡಿದರು.

Advertisement

ಧಾರವಾಡ ಲೋಕಸಭೆಯಿಂದ ಕಣಕ್ಕಿಳಿಯುತ್ತಿರಾ ಎಂದ ಪ್ರಶ್ನೆಗೆ ನಾನು ಆಕಾಂಕ್ಷಿಯೂ ಅಲ್ಲ. ನನಗೆ ಸ್ಪರ್ಧಿಸುವ ಮನಸ್ಸಿಲ್ಲ ಎಂದರು.

ಬಸವಣ್ಣನವರನ್ನು ಸಾಂಕ್ಕೃತಿಕ ನಾಯಕ ಮಾಡಿರುವುದು ಚುನಾವಣೆಯಲ್ಲಿ ಕಾಂಗ್ರೆಸ್ ಗಿಮಿಕ್ ಅಲ್ಲವೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಬಹಳ ದಿನಗಳಿಂದಲೂ ಬೇಡಿಕೆ ಇತ್ತು. ಹಿಂದೆ ಕಾಂಗ್ರಸ್ ಮತ್ತು ಬಿಜೆಪಿ ಘೋಷಣೆ ಮಾಡಿಲ್ಲ. ಈಗ ಸಿದ್ಧರಾಮಯ್ಯ ಸರಕಾರ ಘೋಷಣೆ ಮಾಡಿದೆ. ಅದನ್ನು ಸ್ವಾಗತಿಸೋಣ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next