Advertisement

Leader ಬೇಸ್ ರಾಜಕಾರಣಿಯಲ್ಲ, ಕೇಡರ್ ಬೇಸ್ ನಾನು: ಶಿವರಾಮ ಹೆಬ್ಬಾರ್

05:34 PM Nov 11, 2023 | Team Udayavani |

ಶಿರಸಿ: ನಾನು ಲೀಡರ್ ಬೇಸ್‌ ರಾಜಕಾರಣಿ ಅಲ್ಲ. ಕೇಡರ್ ಬೇಸ್ ರಾಜಕಾರಣಿ ಎಂದು ಮಾಜಿ ಸಚಿವ, ಶಾಸಕ ಶಿವರಾಮ ಹೆಬ್ಬಾರ್ ಪ್ರತಿಕ್ರಿಯೆ ನೀಡಿದರು.

Advertisement

ನಗರದಲ್ಲಿ ಶುಕ್ರವಾರ ಪ್ರತಿಕ್ರಿಯೆ ‌ನೀಡಿ, ಜನರ ಪರ, ಜನರಿಗೋಸ್ಕರ ಇರುವ ರಾಜಕಾರಣಿ. ಯಾರು ಕಡೆಗಣನೆ ಮಾಡಿದರೂ ನನಗೆ ಸಂಬಂಧ ಇಲ್ಲ. ಅತೃಪ್ತಿ ಭಾವವೂ ಇಲ್ಲ. ಜನರಿಗೆ ಸಮಸ್ಯೆ ಆದರೆ ನಾನು ಸುಮ್ಮನಿರುವದಿಲ್ಲ. ನಾನು ಜನಪರ ರಾಜಕಾರಣಿ ಎಂದರು.

ನಾಲ್ಕು ದಶಕದಿಂದ ರಾಜಕಾರಣಿ ಆಗಿದ್ದೇನೆ.‌ ಕಡೆಗಣನೆ ನೋಡಿದ್ದೇನೆ ಎಂದ ಅವರು, ನಾನು ಯಾವುದೇ ಕಾರಣಕ್ಕೂ ಲೋಕಸಭೆ ಅಭ್ಯರ್ಥಿ ಅಲ್ಲ ಎಂದೂ ಹೇಳಿದರು.

ಬರ ಅಧ್ಯಯನ ತಂಡ ಬರುವ ಮಾಹಿತಿ ಇದ್ದಾಗ ಪೂರ್ವ ನಿಯೋಜಿತ ಕಾರ್ಯಕ್ರಮ ದೆಹಲಿಯಲ್ಲಿ ನಿಗದಿಯಾಗಿತ್ತು‌. ಹಾಗಾಗಿ ಅವರು ಬಂದಾಗ ಹೋಗಲು ಆಗಿಲ್ಲ. ಅಧ್ಯಯನ‌ ತಂಡದಿಂದ ಸಂಕಷ್ಟದಲ್ಲಿ ಇರುವ ತಾಲೂಕಿಗೆ ನೆರವಾಗಬೇಕು. ಜನವರಿ ವೇಳೆಗೆ ಕುಡಿಯುವ ನೀರಿಗೂ ತೊಂದರೆ ಆಗಬಹುದು ಎಂದರು. ಜನರು ಕಷ್ಟದಲ್ಲಿ ಇದ್ದಾಗ ಉತ್ಸವ ಸರಿಯಲ್ಲ ಎಂಬ ಭಾವನೆ ಸದ್ಯಕ್ಕೆ ನನ್ನದು. ಕದಂಬೋತ್ಸವ‌ ಕೂಡ ಈಗಲೇ ಹೇಳಲು ಸಾಧ್ಯವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next