ಪಟ್ನಾ : ತಾನು ಲೋಕಸಭೆಗೆ ಸ್ಪರ್ಧಿಸುತ್ತಿರುವ ಉಜಿರಾಪುರ ಮತ್ತು ಕಾರಕಾಟ್ ಕ್ಷೇತ್ರದಲ್ಲಿ ತೀವ್ರ ಹಿನ್ನಡೆ ಕಂಡಿರುವ ರಾಷ್ಟ್ರೀಯ ಲೋಕ ಸಮತಾ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಅವರು ‘ಮತದಾರರು ಕೊಟ್ಟಿರುವ ತೀರ್ಪನ್ನು ತಾನು ವಿನಮೃತೆಯಿಂದ ಸ್ವೀಕರಿಸುತ್ತೇನೆ’ ಎಂದು ಹೇಳಿದ್ದಾರೆ.
‘ಅಂತೆಯೇ ತನ್ನ ಸೋಲಿನಿಂದ ಈಗಿನ್ನು ಮಹಾಘಟಬಂಧನ ಯಾರನ್ನೂ ದೂರದೇ ಆತ್ಮಾವಲೋಕನ ಮಾಡಬೇಕಿದೆ’ ಎಂದವರು ಹೇಳಿದರು.
‘ಇದು ಯಾವುದೇ ಅಭ್ಯರ್ಥಿಯ ಅಥವಾ ರಾಜ್ಯದಲ್ಲಿ ಅಧಿಕಾರದಲ್ಲಿರುವ ಸರಕಾರದ ವಿಜಯವಲ್ಲ; ಜನರ ಮನಸ್ಸು ಮತ್ತು ಹೃದಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿರುವ ವಿಪಕ್ಷ ನಾಯಕರ ಸೋಲು ಇದಾಗಿದೆ’ ಎಂದು ಕುಶ್ವಾಹ ಟ್ಟಿಟರ್ ನಲ್ಲಿ ಬರೆದಿದ್ದಾರೆ.
‘ನಮ್ಮ ಹೋರಾಟವನ್ನುಮುಂದಕ್ಕೆ ಒಯ್ಯಲು ನಾವಿನ್ನು ದೃಢ ಹಾಗೂ ಗಂಭೀರ ತಂತ್ರಗಾರಿಕೆಯನ್ನು ರೂಪಿಸಿಕೊಳ್ಳಬೇಕಿದೆ ; ಅಂತೆಯೇ ನಾವಿನ್ನೂ ಯಾವುದೇ ಸಮಯ ವ್ಯರ್ಥ ಮಾಡದೆ ಈ ದಿಶೆಯಲ್ಲಿ ಮುಂದುವರಿಯಬೇಕಿದೆ’ ಎಂದು ಕುಶ್ವಾಹ ಹೇಳಿದ್ದಾರೆ.
ಬಿಹಾರದ 40 ಲೋಕಸಭಾ ಸೀಟುಗಳ ಪೈಕಿ 38 ಸೀಟುಗಳನ್ನು ಎನ್‌ಡಿಎ ಗೆದ್ದುಕೊಂಡಿದೆ. ಆರ್‌ಜೆಡಿ ನೇತೃತ್ವದ ಐದು ಪಕ್ಷಗಳ ಮಹಾ ಘಟಬಂಧನ ಸಂಪೂರ್ಣವಾಗಿ ಸೋತಿದೆ.