Advertisement
ನಮ್ಮ ದೇಹದಲ್ಲಿ ಕೊಬ್ಬಿನ ಅಂಶಗಳನ್ನು ಒಳಗೊಂಡಂತೆ ಕೆಲವು ಅಂಶಗಳು ಸೀಮಿತ ಪ್ರಮಾಣದಲ್ಲಿ ಇರಬೇಕಾಗುತ್ತದೆ. ಈ ಅಂಶಗಳು ನಿಗದಿತ ಪ್ರಮಾಣದಲ್ಲಿ ಇದ್ದಾಗ ಮಾತ್ರ ನಮ್ಮ ಆರೋಗ್ಯ ಸ್ಥಿಮಿತದಲ್ಲಿರಲು ಸಾಧ್ಯ. ಅಂತಹ ಅಂಶಗಳಲ್ಲಿ ದೇಹದಲ್ಲಿನ ಸಕ್ಕರೆ ಪ್ರಮಾಣವೂ ಒಂದು.
Related Articles
Advertisement
ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗುವುದು ಅನೇಕ ಬಾರಿ ರೋಗಿಗಾಗಲಿ ಇತರರಿಗಾಗಲಿ ಗೊತ್ತಾಗುವುದೇ ಇಲ್ಲ. ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಾಗುವುದಕ್ಕಿಂತ ಕಡಿಮೆಯಾಗುವುದು ಹೆಚ್ಚು ಅಪಾಯಕಾರಿಯಾದದ್ದು. ಸಾಮಾನ್ಯವಾಗಿ ಮಧುಮೇಹಿಗಳಲ್ಲಿ ಈ ಸಮಸ್ಯೆ ಕಂಡುಬರಲು ಕಾರಣ ಮಾತ್ರೆ ಅಥವಾ ಇನ್ಸುಲಿನ್ ಅನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳದೆ ಇರುವುದು , ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಸೇವಿಸುವುದು ಇತ್ಯಾದಿ.
ಇನ್ನು ಇದನ್ನು ಹೊರತುಪಡಿಸಿದರೆ ಇನ್ನೂ ಕೆಲವು ಕಾರಣಗಳಿಂದ ಈ ಸಮಸ್ಯೆ ಕಂಡುಬರಬಹುದಾಗಿದ್ದು, ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸದಿರುವುದು, ಉಪವಾಸ ಮಾಡುವುದು, ಇನ್ಸುಲಿನ್ ಸೇವಿಸಿದ ಬಳಿಕ ತುಂಬಾ ಸಮಯದವರೆಗೆ ಆಹಾರ ಸೇವಿಸದಿರುವುದು, ಅತಿಯಾದ ವ್ಯಾಯಾಮ ಮಾಡುವುದು, ಮದ್ಯಪಾನ ಮಾಡುವುದು ಕೂಡಾ ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಗಲು ಪ್ರಮುಖ ಕಾರಣಗಳಾಗಿರುತ್ತದೆ.
ಈ ಸಮಯದಲ್ಲಿ ಏನು ಮಾಡಬೇಕು?
ಶರೀರದಲ್ಲಿ ಸಕ್ಕರೆಯ ಅಂಶ ಕಡಿಮೆಯಾಗಿದೆ ಎಂದು ಅನ್ನಿಸಿದರೆ ಆ ವ್ಯಕ್ತಿಗೆ ಸುಮಾರು 15 ಗ್ರಾಂ ನಷ್ಟು ಸಕ್ಕರೆ ನೀಡಬೇಕು, ಇಲ್ಲವೇ 3 ಗ್ಲೂಕೋಸ್ ಬಿಸ್ಕತ್ ಅಥವಾ ಅರ್ಧ ಚಮಚದಷ್ಟು ಜೇನುತುಪ್ಪವನ್ನು ಸೇವಿಸಬೇಕು. ಈ ರೀತಿಯ ಕ್ರಮಗಳಿಂದ ಶರೀರದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಆ ಬಳಿಕ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಸಲಹೆಗಳನ್ನು ಪಡೆದುಕೊಳ್ಳಬೇಕು. ಸಕ್ಕರೆ ಅಂಶ ಕಡಿಮೆ ಇರುವ ಸಮಯದಲ್ಲಿ ವಾಹನಗಳ ಚಾಲನೆ ಮಾಡುವುದು ಅಪಾಯಕಾರಿ.