ಮೇಯರ್ ಎಂ.ಗೌತಮ್‌ಕುಮಾರ್ ಅವರು, ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ಪೌರಕಾರ್ಮಿಕರು, ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಆರೋಗ್ಯ ಕಾಪಾಡಿಕೊಳ್ಳಲು ಮೈಂಡ್ ಟ್ರೀ ಸಂಸ್ಥೆಯು 3.5 ಲಕ್ಷ ಹೈಜಿನಿಕ್ ಕಿಟ್ ಸಿದ್ಧಪಡಿಸಲು ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಗೆ 3 ಕೋಟಿ ರೂ. ನೀಡಿತ್ತು. ಈ ಕಿಟ್‌ನಲ್ಲಿ ಮೈಸೂರು ಸ್ಯಾಂಡಲ್ ಸೋಪು, ಡಿಟರ್ಜೆಂಟ್ ಸೋಪು, ಕೊಬ್ಬರಿ ಎಣ್ಣೆ, ಟೂತ್ ಪೇಸ್ಟ್ ಮತ್ತು ಬ್ರಷ್, ನ್ಯಾಪ್ ಕಿನ್ ಒಳಗೊಂಡಿದೆ. ಇದನ್ನು ಹಂತ ಹಂತವಾಗಿ ಫಲಾನುಭವಿಗಳಿಗೆ ತಲುಪಿಸಲಾಗುವುದು ಎಂದರು.
Advertisement
ಈ ವೇಳೆ ಉಪಮೇಯರ್ ರಾಮಮೋಹನ್ ರಾಜು, ಮೈಂಡ್ ಟ್ರೀ ಪ್ರಧಾನ ವ್ಯವಸ್ಥಾಪಕ ಅಬ್ರಹಾಂ ಮೋಸೆಸ್, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಕುಮಾರ್, ಕೆರೆಗಳ ವಿಭಾಗದ ಮುಖ್ಯ ಎಂಜಿನಿಯರ್ ಮೋಹನ್ ಕೃಷ್ಣ, ಘನತ್ಯಾಜ್ಯ ವಿಭಾಗದ ಮುಖ್ಯ ಎಂಜಿನಿಯರ್ ವಿಶ್ವನಾಥ್ ಮತ್ತಿತರರು ಹಾಜರಿದ್ದರು.