Advertisement
ಶನಿವಾರ ಮಠಕ್ಕೆ ಭೇಟಿ ನೀಡಿದ ಶ್ರೀಶೈಲ ಮಠದ ಚೆನ್ನಸಿದ್ದರಾಮ ಪಂಡಿತಾರಾಧ್ಯ ಶ್ರೀಗಳು, ಮಠದ ಆಡಳಿತ ಮಂಡಳಿ ಮತ್ತು ಕೆಲ ಭಕ್ತಾದಿಗಳ ಜತೆ ಸಮಾಲೋಚನೆ ನಡೆಸಿದರು. ಬಳಿಕ ದಯಾನಂದ ಸ್ವಾಮೀಜಿಯನ್ನು ಮಠದ ಉತ್ತರಾಧಿಕಾರಿಯಾಗಿ ಮುಂದುವರಿಸಲು ಅವಕಾಶ ನೀಡುವುದಿಲ್ಲ. 15 ದಿನಗಳಲ್ಲಿ ಈ ಬಗ್ಗೆ ತನಿಖೆ ನಡೆಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
Related Articles
Advertisement
ಅಲ್ಲದೇ ಮುಂದಿನ ಅರ್ಹ ಉತ್ತರಾಧಿಕಾರಿ ಬಗ್ಗೆಯೂ ವರದಿಯಲ್ಲಿ ಉಲ್ಲೇಖೀಸುವಂತೆ ಆದೇಶಿಸಿದರು. ನೂತನ ಸಮಿತಿಯ 9 ಮಂದಿ ಸದಸ್ಯರು ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧ ಎಂದು ಮಠದ ಭಕ್ತರು, ಗ್ರಾಮಸ್ಥರು ಟ್ರಸ್ಟಿಗಳು ತಿಳಿಸಿದ್ದಾರೆ. ಅಲ್ಲದೇ ಆರೋಪಿತ ಸ್ವಾಮೀಜಿಯ ಇಡೀ ಕುಟುಂಬವನ್ನು ಮಠದಿಂದ ಹೊರಹಾಕುವಂತೆ ಒತ್ತಾಯಿಸಿದ್ದು,
ಈ ಮೂಲಕ ವೀರಶೈವ ಸಮಾಜ ಕುರಿತು ಸಮಾಜಕ್ಕೆ ಸೂಚನೆ ನೀಡಬೇಕು ಎಂದು ಭಕ್ತರು, ಗ್ರಾಮಸ್ಥರು ಆಗ್ರಹಿಸಿದರು. ಅಷ್ಟೇ ಅಲ್ಲದೇ 15 ದಿನಗಳಲ್ಲಿ ಮಠದಿಂದ ಹೊರಹೋಗುತ್ತೇವೆ ಎಂದು ರಾಸಲೀಲೆ ನಡೆಸಿದ ದಯಾನಂದಸ್ವಾಮೀಜಿ ಸೇರಿ ಇಡೀ ಕುಟಂಬ ಭಕ್ತರು, ಆಡಳಿತ ಮಂಡಳಿ ಮತ್ತು ಶ್ರೀಗಳ ಸಮ್ಮುಖದಲ್ಲಿ ಮುಚ್ಚಳಿಕೆ ಬರೆದುಕೊಟ್ಟರು.
ಶ್ರೀಗಳಿಗೆ ಪೊಲೀಸರ ಭದ್ರತೆ: ಕಳೆದ ಮೂರು ದಿನಗಳಿಂದ ಮಠದಲ್ಲಿ ನಡೆಯುತಿದ್ದ ಬೆಳವಣಿಗೆಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಶ್ರೀಶೈಲ ಮಠದ ಶ್ರೀಗಳು ಆಗಮಿಸುತ್ತಿದ್ದಂತೆ ಎರಡು ಬಣದ ಭಕ್ತರು ಏಕಾಏಕಿ ಶ್ರೀಗಳ ಜತೆ ಚರ್ಚೆಗೆ ಮುಂದಾದರು.
ಈ ವೇಳೆ ತಳ್ಳಾಟ, ನೂಕಾಟ ಕೂಡ ನಡೆಯಿತು. ಹೋರಾಟಗಾರರು ಮಾತಿನ ಚಕಮಕಿ ಜತೆಗೆ ಕೈ ಕೈ ಮೀಲಾಯಿಸಲು ಮುಂದಾದರು. ಕೂಡಲೇ ಎಚ್ಚೆತ್ತ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿ, ಲಘು ಲಾಠಿ ಪ್ರಹಾರ ನಡೆಸಿ ಬಿಗಿ ಭದ್ರತೆಯಲ್ಲಿ ಶ್ರೀಗಳನ್ನು ಮಠದ ಒಳಗೆ ಕರೆದೊಯ್ದರು.
ಮಾಸ್ಟರ್‌ಮೈಂಡ್ ಪ್ರವೀಣ್?ಇಡೀ ರಾಸಲೀಲೆಯ ಮಾಸ್ಟರ್ ಮೈಂಡ್ ಚನ್ನಪಟ್ಟಣ ಮೂಲದ ಪ್ರವೀಣ್ ಎಂಬಾತ ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಹುಣಸಮಾರನಹಳ್ಳಿಯಲ್ಲಿ ಹೋಟೆಲ್ ನಡೆಸುತ್ತಿರುವ ಈತ, ಟ್ರಸ್ಟಿಯ ಸದಸ್ಯ ಹಿಮಾಚಲಪತಿಯ ಸ್ನೇಹ ಬೆಳೆಸಿದ್ದ. ಈ ಇಬ್ಬರೂ ದಯಾನಂದಸ್ವಾಮೀಜಿಯ ಪರಸ್ತ್ರೀ ವ್ಯಾಮೋಹವನ್ನೇ ಅಸ್ತ್ರವನ್ನಾಗಿಟ್ಟುಕೊಂಡು ಬ್ಲಾಕ್‌ವೆುಲ್ ಮಾಡಲು ಸಂಚು ರೂಪಿಸಿದ್ದರು. ಅದರಂತೆ ಸ್ವಾಮೀಜಿಗೆ ಪರಿಚಯವಿರುವ ಸಿನಿಮಾ ನಟಿ ಎನ್ನಲಾದ ಯುವತಿಯನ್ನು ಮೈಸೂರಿನಿಂದ ಕರೆಸಿ ಸ್ವಾಮೀಜಿ ಜತೆ ರಾಸಲೀಲೆ ನಡೆಸುವುದನ್ನು ರಹಸ್ಯವಾಗಿ ಚಿತ್ರೀಕರಿಸಿಕೊಂಡಿದ್ದರು. ತನ್ಮೂಲಕ ಸ್ವಾಮೀಜಿಯಿಂತ ಕನಿಷ್ಠ 20 ಲಕ್ಷ ರೂ.ಗೆ ಬೇಡಿಕೆ ಇಡಲು ಪ್ರವೀಣ್‌ಗೆ ಹಿಮಾಚಲಪತಿ ಸೂಚಿಸಿದ್ದ. ಆದರೆ, ಸ್ವಾಮೀಜಿಯಿಂದ 35 ಲಕ್ಷಕ್ಕೂ ಅಧಿಕ ಹಣ ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ. ಇದೇ ಹಣದಿಂದ ಪ್ರವೀಣ್ ಮನೆ ಮತ್ತು ಕಾರು ಖರೀದಿಸಿದ್ದಾನೆಂದು ಮೂಲಗಳು ತಿಳಿಸಿವೆ. ಪ್ರವೀಣ್ ಬಳಿಯಿದ್ದ ವಿಡಿಯೋ ಪಡೆದ ಹಿಮಾಚಲಪತಿ ಕಳೆದ ಎರಡು ವರ್ಷಗಳಿಂದ ಸ್ವಾಮೀಜಿಯನ್ನು ಬ್ಲಾಕ್‌ವೆುàಲ್ ಮಾಡುತ್ತಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲ ಇದುವರೆಗೆ ಈ ವಿಡಿಯೋ ತೋರಿಸಿ ಸ್ವಾಮೀಜಿಯಿಂದ ಇನ್ನಷ್ಟು ಹಣವನ್ನು ಪಡೆಯುವಂತೆ ಆರೋಪಿತ ಸ್ವಾಮೀಜಿಯ ಆಪ್ತ ಹರೀಶ್ ಎಂಬಾತನಿಗೆ ಹಿಮಾಚಲಪತಿ ಸೂಚಿಸಿದ್ದರೆಂಬ ಆರೋಪ ಕೇಳಿಬಂದಿದೆ. ಆದರೆ, ಮಠದ ಬಳಿಯಲ್ಲಿ ಟೀ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಹರೀಶ್, ದಯಾನಂದ ಸ್ವಾಮೀಜಿಗೆ ಆಪ್ತನಾಗಿದ್ದ. ಹೀಗಾಗಿ ಪ್ರವೀಣ್ ಮತ್ತು ಹಿಮಾಚಲಪತಿ ಆಮಿಷಕ್ಕೆ ಒಳಗಾಗಿಲ್ಲ ಎಂದು ತಿಳಿದು ಬಂದಿದೆ. ಸಮಸೈ ಬಗೆಹರಿಸಲು ನಾವು ಬಂದಿದ್ದೇವೆ. ಮಠದಲ್ಲಿ ನಡೆದಿರುವ ಬೆಳವಣಿಗೆಗಳಿಂದ ತುಂಬಾ ಬೇಸರವಾಗಿದೆ. ಮುಂದಿನ ಉತ್ತರಾಧಿಕಾರಿಯನ್ನು ಇನ್ನು 15 ದಿನಗಳಲ್ಲಿ ತಿಳಿಸಲಾಗುವುದು. ಉತ್ತರಾಧಿಕಾರಿ ನೇಮಕ ಮಾಡಲು 9 ಜನ ಸದಸ್ಯರ ಕಮಿಟಿ ರಚನೆ ಮಾಡಿದ್ದೇನೆ. ಹಗರಣ ಬಗ್ಗೆಯೂ ವರದಿ ನೀಡುವಂತೆ ಸೂಚಿಸಲಾಗಿದೆ.
-ಶ್ರೀಶೈಲ ಚೆನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ, ಶ್ರೀಶೈಲ ಮಠ