Advertisement

ನವಜಾತ ಶಿಶುವನ್ನು ಸುಡಲು ಯತ್ನಿಸಿದವರು ಪೊಲೀಸ್ ವಶಕ್ಕೆ

09:37 AM Nov 01, 2019 | Team Udayavani |

ಹೈದ್ರಾಬಾದ್: ನವಜಾತ ಶಿಶುವೊಂದನ್ನು ಬಯಲಿನಲ್ಲಿ ಸುಡಲು ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಹೈದ್ರಾಬಾದ್ ನಿಂದ ವರದಿಯಾಗಿದೆ. ನಗರದ ಜುಬ್ಲೀ ಬಸ್ ನಿಲ್ದಾಣದ ಸಮೀಪ ಈ ಘಟನೆ ನಡೆದಿದೆ.

Advertisement

ಇಬ್ಬರು ವ್ಯಕ್ತಿಗಳು ಬ್ಯಾಗ್ ಒಂದನ್ನು ಹಿಡಿದುಕೊಂಡು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದುದನ್ನು ಗಮನಿಸಿದ ಆಟೋ ರಿಕ್ಷಾ ಚಾಲಕರೊಬ್ಬರು ಇವರಿಬ್ಬರ ವರ್ತನೆಯಿಂದ ಅನುಮಾನಗೊಂಡು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುತ್ತಾರೆ.

ಪೊಲೀಸರು ಸ್ಥಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಹೊಂಡ ತೆಗೆಯುತ್ತಿದ್ದ ಈ ವ್ಯಕ್ತಿಗಳಿಬ್ಬರುನ್ನು ವಿಚಾರಿಸಿದಾಗ ಮೃತಪಟ್ಟಿರುವ ತಮ್ಮ ಮೊಮ್ಮಗುವನ್ನು ಹೂಳಲು ಹೊಂಡ ತೆಗೆಯುತ್ತಿರುವುದಾಗಿ ಮಾಹಿತಿ ನೀಡುತ್ತಾರೆ.

ಆದರೆ ಪೊಲೀಸರಿಗೆ ಅನುಮಾನ ಬಲವಾಗಿ ಅವರಲ್ಲಿದ್ದ ಬ್ಯಾಗನ್ನು ಪರೀಕ್ಷಿಸಿದಾಗ ಅದರಲ್ಲಿ ಜೀವಂತವಾಗಿದ್ದ ನವಜಾತ ಮಗು ಇರುವುದು ಗೊತ್ತಾಗುತ್ತದೆ. ತಕ್ಷಣವೇ ಪೊಲೀಸರು ಆ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡು ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸುತ್ತಾರೆ.

ಮೆಲ್ನೋಟಕ್ಕೆ ಇದೊಂದು ಹೆಣ್ಣು ಶಿಶುವಿನ ಹತ್ಯಾ ಯತ್ನ ಪ್ರಕರಣದಂತೆ ಗೋಚರವಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಶಕ್ಕೆ ಪಡೆದುಕೊಂಡಿರುವ ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next