Advertisement

ವಾಟ್ಸಾಪ್‌ನಲ್ಲಿ ಗರ್ಲ್ ಫ್ರೆಂಡ್‌ ಮಾನ ಹರಾಜು ಹಾಕಿದ ಟೆಕ್ಕಿ ಸೆರೆ

12:16 PM Feb 26, 2018 | udayavani editorial |

ಹೈದರಾಬಾದ್‌ : ತನ್ನ ಗರ್ಲ್ ಫ್ರೆಂಡ್‌ ನ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ವಾಟ್ಸಾಪ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ಆಕೆಯ ಮಾನ ಹರಾಜು ಹಾಕಿದ ಆರೋಪದ ಮೇಲೆ  28ರ ಹರೆಯದ ಹೈದರಾಬಾದ್‌ ಟೆಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಬಂಧಿತ ಟೆಕ್ಕಿಯನ್ನು ನಾಗೇಶ್ವರ ರಾವ್‌ ಎಂದು ಗುರುತಿಸಲಾಗಿದೆ. ತನ್ನ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಈತ ವಾಟ್ಸಾಪ್‌ ನಲ್ಲಿ ಹಾಕಿ ತನ್ನ ಮರ್ಯಾದೆ ಕಳೆದಿದ್ದಾನೆ ಎಂದು ಆತನ ಗರ್ಲ್ ಫ್ರೆಂಡ್‌ ಕೊಟ್ಟಿರುವ ದೂರಿನ ಪ್ರಕಾರ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಟೆಕ್ಕಿಯ ಆಫೀಸಲ್ಲೇ ಕೆಲಸ ಮಾಡಿಕೊಂಡಿದ್ದು ಆತನ ಸಹೋದ್ಯೋಗಿಯಾಗಿರುವ “ಗರ್ಲ್ ಫ್ರೆಂಡ್‌”ಗೆ ಆಕೆಯ ಕೆಲವು ಸಂಬಂಧಿಕರು ವಾಟ್ಸಾಪ್‌ ಸಮೂಹದಲ್ಲಿ ಆಕೆಯ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಕಂಡು ದಿಗಿಲುಗೊಂಡು ಆಕೆಯ ಗಮನಕ್ಕೆ ವಿಷಯವನ್ನು ತಂದರು. ಒಡನೆಯೇ ಆಕೆ ಟೆಕ್ಕಿ ನಾಗೇಶ್ವರ ರಾವ್‌ ನನ್ನು ಸಂಪರ್ಕಿಸಿ ವಿವರಣೆ ಕೇಳಲು ಯತ್ನಿಸಿದಳು, ಆದರೆ ಆತ ತಪ್ಪಿಸಿಕೊಳ್ಳಲು ಯತ್ನಿಸಿದ. 

ತೀವ್ರ ಆಘಾತಕ್ಕೆ ಗುರಿಯಾದ ಗರ್ಲ್ ಫ್ರೆಂಡ್‌ ಸಾವರಿಸಿಕೊಂಡು ಕಳೆದ ಶನಿವಾರವೇ ಪೊಲೀಸರಿಗೆ ಟೆಕ್ಕಿಯ ಮಾನಹಾನಿ ಕೃತ್ಯದ ವಿರುದ್ಧ ದೂರು ನೀಡಿದಳು. 

Advertisement

Udayavani is now on Telegram. Click here to join our channel and stay updated with the latest news.

Next