ಹೈದ್ರಾಬಾದ್ : ಇಲ್ಲಿನ ಸಿಕಂದರಾಬಾದ್‌ನ ಲಲ್ಲಾಗುಡ್ಡಾ ಎಂಬಲ್ಲಿ ಭಗ್ನ ಪ್ರೇಮಿಯೊಬ್ಬ 25 ವರ್ಷ ಪ್ರಾಯದ ಯುವತಿಯ ಮೇಲೆ ನಡು ರಸ್ತೆಯಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭಿಭತ್ಸ ಘಟನೆ ಗುರುವಾರ ನಡೆದಿದೆ.
ವರದಿಯಾದಂತೆ ಸಂಧ್ಯಾರಾಣಿ ಎಂಬ ಖಾಸಗಿ ಸಂಸ್ಥೆಯ ಉದ್ಯೋಗಿಯ ಪರಿಚಯಸ್ಥನೇ ಆಗಿದ್ದ ಕಾರ್ತಿಕ್ ಎಂಬ ಯುವಕ ಕಳೆದೊಂದು ವರ್ಷದಿಂದ ಪ್ರೀತಿಸುವಂತೆ ಬೆನ್ನು ಬಿದ್ದಿದ್ದ. ಸಂಧ್ಯಾ ಪ್ರೀತಿ ನಿರಾಕರಿಸಿ ನಾವಿಬ್ಬರು ಸ್ನೇಹಿತರಾಗಿ ಇರುವ ಎಂದಿದ್ದಳು ಎಂದು ಹೇಳಲಾಗಿದೆ.
ಪ್ರೀತಿ ನಿರಾಕರಿಸಿದ್ದರಿಂದ ಕುಪಿತನಾಗಿ ಕಾರ್ತಿಕ್ ರಾಕ್ಷಸೀ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ.
ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಸಾರ್ವಜನಿಕರು ದೌಡಾಯಿಸಿ ಬೆಂಕಿ ನಂದಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂಧ್ಯಾ ದೇಹದ 70 % ಚರ್ಮ ಸಂಪೂರ್ಣ ಸುಟ್ಟು ಹೋಗಿದ್ದು ಸದ್ಯ ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಲಲ್ಲಾಗುಡ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಪರಾರಿಯಾಗಿದ್ದ ಕಾರ್ತಿಕ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.