Advertisement

ಕುರಿ ಬಲಿ ಕೊಟ್ಟವನ ವಿರುದ್ಧ ಎಫ್ಐಆರ್‌ ದಾಖಲಿಸಿದ ಪೊಲೀಸರು

07:06 PM Feb 13, 2022 | Team Udayavani |

ಹೈದರಾಬಾದ್‌: ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಅವರ ಕ್ಷೇಮಕ್ಕಾಗಿ ಹೈದರಾಬಾದ್‌ನಲ್ಲಿ 101 ಕುರಿಗಳನ್ನು ಬಲಿ ಕೊಟ್ಟಿದ್ದ ವ್ಯಕ್ತಿಯ ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ.

Advertisement

ಹೈದರಾಬಾದ್‌ನ ಸ್ಥಳೀಯ ಉದ್ಯಮಿ, ಫೆ.6ರಂದು ಮಂಡನ್‌ಪೇಟ್‌ ಕಾಲೋನಿಯಲ್ಲಿ ಕುರಿಗಳನ್ನು ಬಲಿ ಕೊಟ್ಟಿದ್ದ. ಸಾಲಾಗಿ ನಿಂತ ಕುರಿಗಳ ತಲೆ ಕತ್ತರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಇದನ್ನೂ ಓದಿ:ಅಮೆರಿಕಾ ಎಚ್ಚರಿಕೆಯ ನಡುವೆಯೂ ಉಕ್ರೇನ್ ಮೇಲೆ ರಷ್ಯಾ ದಾಳಿ?

ಅದರ ಆಧಾರದ ಮೇಲೆ ಪೀಪಲ್‌ ಫಾರ್‌ ದಿ ಎಥಿಕಲ್‌ ಟ್ರೀಟ್‌ಮೆಂಟ್‌ ಆಫ್ ಅನಿಮಲ್ಸ್‌(ಪಿಇಟಿಎ) ಈ ಬಗ್ಗೆ ದೂರು ನೀಡಿದ್ದು, ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next