Advertisement

ಪೋರ್ನ್ ನೋಡುತ್ತಿದ್ದ ಮಗನ ಕೈಯನ್ನೇ ಕತ್ತರಿಸಿ ಹಾಕಿದ ತಂದೆ!

03:10 PM Mar 06, 2018 | Team Udayavani |

ಹೈದರಾಬಾದ್‌: ಅಶ್ಲೀಲ ಚಿತ್ರ ನೋಡಬೇಡ ಎಂಬ ಮಾತು ಕೇಳದ ಮಗನೊಬ್ಬನ ಕೈಯನ್ನು ತಂದೆಯೇ ಕತ್ತರಿಸಿ ಹಾಕಿದ ಘಟನೆ ಜಲೆಪಲ್ಲಿ ಎಂಬಲ್ಲಿ ನಡೆದಿದೆ.

Advertisement

ವರದಿಯಾದಂತೆ ಮಹಮದ್‌ ಖಾಲಿದ್‌ ಖುರೇಷಿ ಎಂಬ ಯುವಕ ಸೆಕ್ಸ್‌ ಚಿತ್ರಗಳನ್ನು ನೋಡುವುದನ್ನೇ ಚಟವಾಗಿಸಿಕೊಂಡಿದ್ದ. ಈ ಕುರಿತು ಖಯ್ಯಂ ಖುರೇಷಿ ಹಲವು ಬಾರಿ ಎಚ್ಚರಿಕೆಯನ್ನೂ ನೀಡಿದ್ದರು ಎನ್ನಲಾಗಿದೆ. 

ಚಟ ಬಿಡದ ಮಹಮದ್‌ ಮೊಬೈಲ್‌ನಲ್ಲಿ ಸೆಕ್ಸ್‌ ಚಿತ್ರ ವೀಕ್ಷಿಸುತ್ತಾ ಮೈಮರೆತಿದ್ದ ವೇಳೆ ರೋಷಾವೇಶ ತೋರಿದ ಖಯ್ಯಂ ಕತ್ತಿಯಿಂದ ಕೈಯನ್ನೇ ಕತ್ತರಿಸಿ ಹಾಕಿದ್ದಾನೆ. 

ಗಾಯಾಳು ಮಹಮದ್‌ನನ್ನು ಉಸ್ಮಾನಿಯಾ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಲಕೈಯ ಎಲ್ಲಾ ಬೆರಳುಗಳು ತುಂಡಾಗಿವೆ. 

ಈ ಬಗ್ಗೆ  ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಖಯ್ಯಂ ಖುರೇಷಿಯನ್ನು ವಶಕ್ಕೆ ಪಡೆದಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next