Advertisement

ಹೈದರಾಬಾದ್‌ಗೆ ಸೋಲುಣಿಸಿದ ಮುಂಬೈ

11:02 AM Apr 13, 2017 | |

ಮುಂಬೈ: ಐಪಿಎಲ್‌ 10ನೇ ಆವೃತ್ತಿಯಲ್ಲಿ ಸತತ ಎರಡು ಪಂದ್ಯದ ಗೆಲುವಿನ ಹುಮ್ಮಸ್ಸಿನಲ್ಲಿದ್ದ ಸನ್‌ ರೈಸರ್ ಹೈದರಾಬಾದ್‌ ತಂಡಕ್ಕೆ ಮುಂಬೈ ಇಂಡಿಯನ್ಸ್‌ 4 ವಿಕೆಟ್‌ ಸೋಲಿನ ಆಘಾತ ನೀಡಿದೆ. ಈ ಮೂಲಕ ಮುಂಬೈ ಟೂರ್ನಿಯಲ್ಲಿ 2ನೇ ಗೆಲುವು ದಾಖಲಿಸಿದರೆ, ಹೈದರಾಬಾದ್‌ಗೆ ಮೊದಲ ಸೋಲಾಗಿದೆ.

Advertisement

ಮೊದಲು ಬ್ಯಾಟಿಂಗ್‌ ಮಾಡಿದ್ದ ಹೈದರಾಬಾದ್‌ 8 ವಿಕೆಟ್‌ಗೆ 158 ರನ್‌ ಬಾರಿಸಿತ್ತು. ಗುರಿ ಬೆನ್ನು ಹತ್ತಿದ ಮುಂಬೈ ತಂಡಕ್ಕೆ ಆರಂಭಿಕರಾದ ಪಾರ್ಥಿವ್‌ ಪಟೇಲ್‌(39) ಮತ್ತು ಜೋಸ್‌ ಬಟ್ಲರ್‌(14) ಜೋಡಿ 28 ರನ್‌ ಜತೆಯಾಟ ನೀಡಿದರು. ಆದರೆ ಸ್ಫೋಟಕ ಬ್ಯಾಟ್ಸ್‌ಮನ್‌ಗಳಾದ ನಾಯಕ ರೋಹಿತ್‌ ಶರ್ಮಾ(4) ಮತ್ತು ಪೊಲಾರ್ಡ್‌ (11) ಅಲ್ಪ ಮೊತ್ತಕ್ಕೆ ವಿಕೆಟ್‌ ಕಳೆದು ಕೊಂಡರು. ಈ ಸಂದರ್ಭದಲ್ಲಿ ಮುಂಬೈ ಒತ್ತಡಕ್ಕೆ ಒಳಗಾಗಿತ್ತು.

ಆದರೆ ಮಧ್ಯಮ ಕ್ರಮಾಂಕದಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ನಿತೀಶ್‌ ರಾಣಾ ಮತ್ತು ಕೃಣಾಲ್‌ ಪಾಂಡ್ಯ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ನೀಡಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದು ವಿಕೆಟ್‌ ಕಳೆದುಕೊಂಡರು.ರಾಣಾ 36 ಎಸೆತದಲ್ಲಿ 45 ರನ್‌ ಬಾರಿಸಿ ಔಟಾದರು.ಅದರಲ್ಲಿ 3 ಬೌಂಡರಿ, 2 ಸಿಕ್ಸರ್‌ ಸೇರಿತ್ತು. ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಕೃಣಾಲ್‌ ಪಾಂಡ್ಯ 37 ರನ್‌ಗೆ ವಿಕೆಟ್‌ ಒಪ್ಪಿಸಿದರು. 20 ಎಸೆತ ಎದುರಿ ಸಿದ ಕೃಣಾಲ್‌ 3 ಬೌಂಡರಿ, 3 ಸಿಕ್ಸರ್‌ ಸಿಡಿಸಿದರು. ಅಂತಿಮವಾಗಿ ಹರ್ಭಜನ್‌ಸಿಂಗ್‌ ಮತ್ತು ಹಾರ್ದಿಕ್‌ ಪಾಂಡ್ಯ ಗೆಲುವಿನ ದಡ ಸೇರಿಸಿದರು.

ಧವನ್‌-ವಾರ್ನರ್‌ ಉತ್ತಮ ಆರಂಭ: ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಹಾಲಿ ಚಾಂಪಿಯನ್‌ ಸನ್‌ರೈಸರ್ ಹೈದರಾಬಾದ್‌ ತಂಡ ಉತ್ತಮ ಆರಂಭದ ಹೊರಧಿತಾಗಿಯೂ ಕೇವಲ 158 ರನ್‌ಗಳಿಸಲಷ್ಟೇ ಶಕ್ತವಾಗಿದೆ. ಆರಂಭಿಕರಾದ ಶಿಖರ್‌ ಧವನ್‌ ಮತ್ತು ಡೇವಿಡ್‌ ವಾರ್ನರ್‌ ಭರ್ಜರಿ ಆಟವಾಡಿ 10.2 ಓವರ್‌ಗಳಲ್ಲಿ ಮೊದಲ ವಿಕೆಟಿಗೆ 81 ರನ್‌ ಪೇರಿಸಿದರು.

ವಾರ್ನರ್‌ 34 ಎಸೆತದಲ್ಲಿ 49 ರನ್‌ ಗಳಿಸಿ ಹರ್ಭಜನ್‌ ಸಿಂಗ್‌ಗೆ ವಿಕೆಟ್‌ ಒಪ್ಪಿಸಿದರು. ಅವರ ಆಟದಲ್ಲಿ 7 ಬೌಂಡರಿ, 2 ಸಿಕ್ಸರ್‌ ಸೇರಿತ್ತು. ವಾರ್ನರ್‌-ಧವನ್‌ ಜೋಡಿ ಮುರಿದ ಬಳಿಕ ಹೈದರಾಬಾದ್‌ ಕುಸಿಯತೊಡಗಿತಲ್ಲದೇ ರನ್‌ವೇಗಕ್ಕೂ ಕಡಿವಾಣ ಬಿತ್ತು. ಧವನ್‌ 43 ಎಸೆತದಲ್ಲಿ 5 ಬೌಂಡರಿ, 1 ಸಿಕ್ಸರ್‌ ಸೇರಿದಂತೆ 48 ರನ್‌ ಚಚ್ಚಿದರು. ಅವರಿಬ್ಬರನ್ನು ಬಿಟ್ಟರೆ ಬೆನ್‌ ಕಟ್ಟಿಂಗ್‌ ಮಾತ್ರ ಎರಡಂಕೆಯ ಮೊತ್ತ ತಲುಪಿದರು. ಸ್ಟಾರ್‌ ಬ್ಯಾಟ್ಸ್‌ಮನ್‌ ಯುವರಾಜ್‌ ಸಿಂಗ್‌ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದರು.

Advertisement

ಮುಂಬೈ ಪರ ಬಿಗು ದಾಳಿ ಸಂಘಟಿಸಿದ ವೇಗಿ ಜಸ್‌ಪ್ರೀತ್‌ ಬುಮ್ರಾ 24 ರನ್‌ಗೆ 3 ವಿಕೆಟ್‌ ಕಿತ್ತರೆ, ಹರ್ಭಜನ್‌ 23 ರನ್‌ಗೆ 2 ವಿಕೆಟ್‌ ಪಡೆದರು. ಕೋಲ್ಕತಾ ವಿರುದ್ಧ ಜಯ ಸಾಧಿಸಿದ ತಂಡವನ್ನೇ ಮುಂಬೈ ಇಂಡಿಯನ್ಸ್‌ ಈ ಪಂದ್ಯಕ್ಕೆ ಉಳಿಸಿಕೊಂಡಿದ್ದರೆ, ಸನ್‌ರೈಸರ್ ಹೈದರಾಬಾದ್‌ ತಂಡವು ಎರಡು ಬದಲಾವಣೆ ಮಾಡಿಕೊಂಡಿದೆ. ಈ ಹಿಂದಿನ ಎರಡು ಪಂದ್ಯಗಳಲ್ಲಿ ಅರ್ಧಶತಕ ಹೊಡೆದಿದ್ದ ಮೊಸಸ್‌ ಹೆನ್ರಿಕ್ಸ್‌ ಬದಲಿಗೆ ಮುಸ್ತಾಫಿಜುರ್‌ ರೆಹಮಾನ್‌ ಮತ್ತು ಬಿಪುಲ್‌ ಶರ್ಮ ಬದಲಿಗೆ ತಮಿಳುನಾಡಿನ ಏಕದಿನ ಪಂದ್ಯದ ನಾಯಕ ವಿಜಯ್‌ ಶಂಕರ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಸ್ಕೋರ್‌ ಪಟ್ಟಿ

ಸನ್‌ರೈಸರ್ ಹೈದರಾಬಾದ್‌
ಶಿಖರ್‌ ಧವನ್‌    ಬಿ ಮೆಕ್ಲೆನಗನ್‌    48
ಡೇವಿಡ್‌ ವಾರ್ನರ್‌    ಸಿ ಪಟೇಲ್‌ ಬಿ ಹರ್ಭಜನ್‌    49
ದೀಪಕ್‌ ಹೂಡ    ಸಿ ಪೋಲಾರ್ಡ್‌ ಬಿಹರ್ಭಜನ್‌    9
ಯುವರಾಜ್‌ ಸಿಂಗ್‌    ಬಿ ಹಾರ್ದಿಕ್‌ ಪಾಂಡ್ಯ    5
ಬೆನ್‌ ಕಟ್ಟಿಂಗ್‌    ಬಿ ಬುಮ್ರಾ    20
ನಮನ್‌ ಓಜಾ    ಸಿ ಪೋಲಾರ್ಡ್‌ ಬಿ ಬುಮ್ರಾ    9
ವಿಜಯ್‌ ಶಂಕರ್‌    ಸಿ ರಾಣ ಬಿ ಮಾಲಿಂಗ    1
ರಶೀದ್‌ ಖಾನ್‌    ಸಿ ಮತ್ತು ಬಿ ಬುಮ್ರಾ    2
ಭುವನೇಶ್ವರ್‌ ಕೆ.    ಔಟಾಗದೆ    4
ಆಶಿಷ್‌ ನೆಹ್ರ    ಔಟಾಗದೆ    0
ಇತರ:        11
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ)    158
ವಿಕೆಟ್‌ ಪತನ: 1-81, 2-105, 3-114, 4-123, 5-146, 6-147, 7-153, 8-155
ಬೌಲಿಂಗ್‌: ಹರ್ಭಜನ್‌ ಸಿಂಗ್‌    4-0-23-2
ಲಸಿತ ಮಾಲಿಂಗ        4-0-30-1
ಜಸ್‌ಪ್ರೀತ್‌ ಬುಮ್ರಾ        4-0-24-3
ಮಿಚೆಲ್‌ ಮೆಕ್ಲೆನಗನ್‌        4-0-42-1
ಹಾರ್ದಿಕ್‌ ಪಾಂಡ್ಯ        3-0-22-1
ಕೃಣಾಲ್‌ ಪಾಂಡ್ಯ        1-0-12-0

ಮುಂಬೈ ಇಂಡಿಯನ್ಸ್‌
ಪಾರ್ಥಿವ್‌ ಪಟೇಲ್‌    ಸಿ ಕುಮಾರ್‌ ಬಿ ಹೂಡ    39
ಜೋಸ್‌ ಬಟ್ಲರ್‌    ಬಿ ನೆಹ್ರ    14
ರೋಹಿತ್‌ ಶರ್ಮ    ಎಲ್‌ಬಿಡಬ್ಲ್ಯು ಬಿ ರಶೀದ್‌    4
ನಿತೀಶ್‌ ರಾಣ    ಬಿ ಕುಮಾರ್‌    45
ಕೈರನ್‌ ಪೋಲಾರ್ಡ್‌    ಸಿ ಧವನ್‌ ಬಿ ಕುಮಾರ್‌    11
ಕೃಣಾಲ್‌ ಪಾಂಡ್ಯ ಸಿ ಕಟ್ಟಿಂಗ್‌ ಬಿ ಕುಮಾರ್‌    37    ಹಾರ್ದಿಕ್‌ ಪಾಂಡ್ಯ    ಔಟಾಗದೆ    2
ಹರ್ಭಜನ್‌ ಸಿಂಗ್‌    ಔಟಾಗದೆ    3
ಇತರ:        4
ಒಟ್ಟು  (18.3 ಓವರ್‌ಗಳಲ್ಲಿ 6 ವಿಕೆಟಿಗೆ)    159
ವಿಕೆಟ್‌ ಪತನ: 1-28, 2-41, 3-79, 4-111, 5-149, 6-155
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌    4-0-21-3    
ಆಶಿಷ್‌ ನೆಹ್ರ        4-0-46-1
ರಶೀದ್‌ ಖಾನ್‌        4-0-19-1
ಮುಸ್ತಾಫಿಜುರ್‌ ರೆಹಮಾನ್‌    2.4-0-34-0    
ದೀಪಕ್‌ ಹೂಡ        2-0-18-1
ಬೆನ್‌ ಕಟ್ಟಿಂಗ್‌        2-0-18-0
 

Advertisement

Udayavani is now on Telegram. Click here to join our channel and stay updated with the latest news.

Next