Advertisement

ಹೈಬ್ರಿಡ್‌ ಉಗ್ರವಾದಿಯನ್ನು ಸೆರೆಹಿಡಿದ ಭದ್ರತಾ ಪಡೆ

12:20 AM Sep 16, 2022 | Team Udayavani |

ಜಮ್ಮು: ಜಮ್ಮು – ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ “ಹೈಬ್ರಿಡ್‌ ಭಯೋತ್ಪಾದಕ’ ನೊಬ್ಬನನ್ನು ಭದ್ರತಾ ಪಡೆ ಗುರುವಾರ ಬಂಧಿಸಿದೆ.

Advertisement

ಬಂಧಿತನನ್ನು ಝಫ‌ರ್‌ ಇಕ್ಬಾಲ್‌ ಎಂದು ಗುರುತಿಸಲಾಗಿದ್ದು, ಇವನಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ 1.81 ಲಕ್ಷ ರೂ. ನಗದನ್ನು ವಶ ಪಡಿಸಿಕೊಳ್ಳಲಾಗಿದೆ. ಇಕ್ಬಾಲ್‌ನ ಸಹೋದರ, ಲಷ್ಕರ್‌ ಉಗ್ರ ಮೊಹಮ್ಮದ್‌ ಇಶಾಕ್‌ ಈ ಹಿಂದೆ ರಜೌರಿ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತನಾಗಿದ್ದ.

ತೀವ್ರಗಾಮಿ ತರಬೇತಿ ಪಡೆದು, ಏಕಾಏಕಿ ವಿಧ್ವಂಸಕ ಕೃತ್ಯವೆಸಗಿ ಯಾವುದೇ ಸುಳಿವು ಬಿಟ್ಟುಕೊಡದೆ ವಾಪಸಾಗಿ ಸಹಜ ಜೀವನ ನಡೆಸುವಂಥ ಉಗ್ರರನ್ನು “ಹೈಬ್ರಿಡ್‌ ಟೆರರಿಸ್ಟ್‌’ ಎನ್ನುತ್ತಾರೆ. ಝಫ‌ರ್‌ ಇಕ್ಬಾಲ್‌ನ ಅಡಗು ತಾಣದ ಮೇಲೆ ದಾಳಿ ನಡೆಸಿದ ಭದ್ರತಾ ಪಡೆಗಳು ಆತನನ್ನು ಬಂಧಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next