ಹೂವಿನಹಿಪ್ಪರಗಿ: ಹೂವಿನಹಿಪ್ಪರಗಿ ಕೆರೆಗೆ ನೀರು ತುಂಬಿಸುವಂತೆ ಆಗ್ರಹಿಸಿ ಆರೇಳು ತಿಂಗಳುಗಳಿಂದ ಸತತವಾಗಿ ಮಾಡಿದ ಹೋರಾಟಕ್ಕೆ ಪ್ರತಿಫಲವಾಗಿ ಮುಳವಾಡ ಏತ ನೀರಾವರಿ ಮುಖ್ಯ ಕಾಲುವೆಯಿಂದ ಹೂವಿನಹಿಪ್ಪರಗಿ ಶಾಖಾ ಕಾಲುವೆಯಿಂದ ಹಳ್ಳದ ಮೂಲಕ ಹೂವಿನಹಿಪ್ಪರಗಿ ಕೆರೆಗೆ ಗುರುವಾರ ಬೆಳಗ್ಗೆ ನೀರು ಹರಿದು ಬಂದಿದ್ದು, ಇದರಿಂದ ಜನರು ಮತ್ತು ಜಾನುವಾರುಗಳಿಗೆ ಅನುಕೂಲವಾಗಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು.
ಅಖಂಡ ಕರ್ನಾಟಕ ರೈತ ಸಂಘ ಕರ್ನಾಟಕ ರಕ್ಷಣಾ ವೇದಿಕೆ, ಬಸವನ ಬಾಗೇವಾಡಿ ತಾಲೂಕಿನ ಯರನಾಳದ ಸಂಗನಬಸವ ಸ್ವಾಮೀಜಿ, ಕರಿಭಂಟನಾಳದ ಶಿವಕುಮಾರ ಸ್ವಾಮೀಸಿ, ಮಸಬಿನಾಳದ ಸಿದ್ದಮೇಶ್ವರ ಸ್ವಾಮೀಜಿ, ಬಾಗೇವಾಡಿಯ ಸಿದ್ದಲಿಂಗ ಸ್ವಾಮೀಜಿ ಹಾಗೂ ವಿವಿಧ ಮಠಾಧೀಶರ ಹೋರಾಟದ ಪ್ರತಿಫಲವಾಗಿ ಹೂವಿನ ಹಿಪ್ಪರಗಿ ಕೆರೆಗೆ ಗುರುವಾರ ಬೆಳಗ್ಗೆ ನೀರು ತುಂಬಿರುವುದು ಸಂತಸ ತಂದಿದೆ ಎಂದು ಹೇಳಿದರು.
ಹರಿದು ಬಂದ ಕೃಷ್ಣಾ ನದಿ ನೀರಿಗೆ ಪೂಜೆ ಸಲ್ಲಿಸಿ ಮಾತನಾಡಿದ ಬಸವನಬಾಗೇವಾಡಿ ವಿರಕ್ತ ಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು, ನೀರು ಬರಲು ಶ್ರಮಿಸಿದ ವಿವಿಧ ಸಂಘ ಸಂಸ್ಥಗಳ ಪದಾಧಿಕಾರಿಗಳು, ಮಠಾಧೀಶರ ಹೋರಾಟದ ಫಲದಿಂದ ಕಾಲುವೆಯಲ್ಲಿ ಹರಿಯುವ ನೀರು ನೋಡುವಂತಾಯಿತು. ನೀರು ಅತ್ಯಮೂಲ್ಯವಾದ ವಸ್ತು. ನೀರು ಜೀವ ಜಲವಾಗಿದ್ದರಿಂದ ಪ್ರತಿಯೊಬ್ಬರು ನೀರಿನ ಮಹತ್ವ ಅರಿತುಕೊಳ್ಳಬೇಕು. ಬಿರು ಬಿಸಿಲಿನಲ್ಲಿ ನೀರನ್ನು ಮಿತವಾಗಿ ಬಳಸಬೇಕು ಎಂದು ಹೇಳಿದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಭರಟಗಿ, ತಾಲೂಕು ಅಧ್ಯಕ್ಷ ಸಿದ್ರಾಮ ಅಂಗಡಗೇರಿ, ಮುಖಂಡರಾದ ರಮೇಶ ಕೋರಿ, ಅರ್ಜುನ ಹಾವಗೊಂಡ, ತಾಲೂಕು ಗೌರವಾದ್ಯಕ್ಷ ಈರಣ್ಣ ದೇವರಗುಡಿ, ಶಾಂತಗೌಡ ಬಿರಾದಾರ, ಬಸವರಾಜ ಬೈರವಾಡಗಿ, ಹಣಮಂತ್ರಾಯ ಗುಣಕಿ, ಹಣಮಂತ್ರಾಯ ತೋಟದ, ಸಿದ್ದಲಿಂಗಯ್ಯ ಹಿರೇಮಠ, ಮುದಕಣ್ಣ ಗುಣಕಿ, ಚಂದ್ರಕಾಂತ ಪಟ್ಟಣಶೆಟ್ಟಿ, ಶಬ್ಬೀರ್ ಮುಲ್ಲಾ, ಸಿದ್ದು ಪೂಜಾರಿ, ಶ್ರೀಶೈಲ ಶಿವಯೋಗಿ, ಸೋಮಶೇಖರ ಪೂಜಾರಿ, ಅಶೋಕ ಶಿವಯೋಗಿ, ಮೌನೇಶ ಪಲ್ಲೇದ, ಮುದಕಪ್ಪ ಸಾಸನೂರ, ರುದ್ರಪ್ಪ ಕುಂಬಾರ, ಸೋಮಣ್ಣ ಶಿವಯೋಗಿ, ಅನೀಲ ಕುಂಬಾರ, ಮುತ್ತಪ್ಪ ಪೂಜಾರಿ, ಪ್ರಭು ಕುಂಬಾರ, ಲಕ್ಷ್ಮಣ ಪೂಜಾರಿ ಇದ್ದರು.