Advertisement

ಕೋವಿಡ್ ಮುಂಜಾಗ್ರತೆ ಅಗತ್ಯ

05:21 PM Jun 01, 2020 | Naveen |

ಹೂವಿನಹಿಪ್ಪರಗಿ: ಕೋವಿಡ್ ಸಾಂಕ್ರಾಮಿಕ ರೋಗವಾಗಿದ್ದು ಸಾರ್ವಜನಿಕರು ಜಾಗೃತಿ ವಹಿಸುವುದು ಅಗತ್ಯ ಎಂದು ಮುದ್ದೇಬಿಹಾಳ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಹೇಳಿದರು.

Advertisement

ದೇವರಹಿಪ್ಪರಗಿ ಮತಕ್ಷೇತ್ರದ ದಿಂಡವಾರ, ಕರಿಭಂಟನಾಳ, ಸಂಕನಾಳ ತಾಂಡೆ, ನರಸಲಗಿ ತಾಂಡೆ ಉತ್ನಾಳ, ಗ್ರಾಮಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ಅವಧಿ ಮುಗಿಸಿ ಮನೆಗೆ ತೆರಳುತ್ತಿರುವ ವಲಸೆ ಕಾರ್ಮಿಕರಿಗೆ ದಿನಸಿ ಕಿಟ್‌ ವಿತರಿಸಿ ಅವರು ಮಾತನಾಡಿದರು. ಸಾಂಸ್ಥಿಕ ಕ್ವಾರಂಟೈನ್‌ ಅವಧಿ ಮುಗಿಸಿ ಮನೆಗೆ ತೆರಳುತ್ತಿರುವ ಕಾರ್ಮಿಕರನ್ನು ಗ್ರಾಮಸ್ಥರು ಗೌರವದಿಂದ ಕಾಣುವ ಮನೋಭಾವ ಬೆಳಸಿಕೊಳ್ಳಬೇಕು. ಮನೆಗೆ ತೆರಳುತ್ತಿರುವ ಕಾರ್ಮಿಕರು ಮುಂದಿನ 14 ದಿನ ಮನೆಯಲ್ಲಿ ಇರುವುದರ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಆರೋಗ್ಯ ಇಲಾಖೆ ನಿರ್ದೇಶನಂದಂತೆ ನಡೆದುಕೊಳ್ಳಬೇಕು ಎಂದರು.

ಸೋಮನಗೌಡ ಪಾಟೀಲ, ಮಹಾದೇವಿ ಪಾಟೀಲ ನಡಹಳ್ಳಿ, ನಿಂಗಪ್ಪ ಚೌದ್ರಿ, ಶಿವನಗೌಡ ಬಿರಾದಾರ, ಬಸವರಾಜ ಈಳಗೇರ, ಸುನೀಲ ರಾಠೊಡ, ರಾಜುಗೌಡ ಬಿರಾದಾರ, ಧನಸಿಂಗ್‌ ರಾಠೋಡ , ಎಸ್‌.ಎಸ್‌. ತಾಳಿಕೋಟೆ ಸೇರಿದಂತೆ ಆಶಾ ಕಾರ್ಯಕರ್ತೆಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next