Advertisement

ಶಿವನಾಮ ಸ್ಮರಣೆಯಿಂದ ಜೀವನದಲ್ಲಿ ನೆಮ್ಮದಿ

11:49 AM Feb 24, 2020 | Naveen |

ಹೂವಿನಹಿಪ್ಪರಗಿ: ಸಮಾಜದಲ್ಲಿ ನಡೆಯುವ ಸಂತ ಸಂಘದಲ್ಲಿ ನಿಸ್ವಾರ್ಥದಿಂದ ಪಾಲ್ಗೊಂಡು ಶಿವನಾಮ ಜಪಿಸಿದರೆ ಜೀವನ ಮುಕ್ತಿ ಹೊಂದಿ ಈ ಭವವನ್ನು ಗೆಲ್ಲಲು ಸಾಧ್ಯ ಎಂದು ಶರಣ ಸಿದ್ದನಗೌಡ ಬಿರಾದಾರ ಹೇಳಿದರು.

Advertisement

ಬಸವನಬಾಗೇವಾಡಿ ತಾಲೂಕಿನ ಸುಕ್ಷೇತ್ರ ಬೂದಿಹಾಳ ಗ್ರಾಮದ ಸಿದ್ದಾರೂಢರ ಆಶ್ರಮದಲ್ಲಿ ಮಹಾಶಿವರಾತ್ರಿ ನಿಮಿತ್ತ ಹಮ್ಮಿಕೊಂಡಿದ್ದ ಶಿವನಾಮ ಸ್ಮರಣೆ ಕಾರ್ಯಕ್ರಮದಲ್ಲಿ ಶಿವರಾತ್ರಿಯ ಕಥೆ ಎಂಬ ಗ್ರಂಥ ಪಠಿಸಿ ಅವರು ಮಾತನಾಡಿದರು. ಸಮಾಜದ ಮೌಡ್ಯ ಕತ್ತಲಿನಲಿದ್ದ ಮುಗ್ಧ ಜನರು ಬೆಳಕಿನ ಕಡೆಗೆ ಭಕ್ತರನ್ನು ಕರೆದೊಯ್ದು ಶಾಂತಿ ಸಮೃದ್ಧಿ ದಯಪಾಲಿಸಿದ ಶ್ರೀಗಳಲ್ಲಿ ಸಿದ್ದಾರೂಢರು ಮೂದಲು ಸ್ಥಾನದಲ್ಲಿ ನಿಲ್ಲುತ್ತಾರೆ. ಅಂತ ಶರಣರ ಆಶ್ರಮದಲ್ಲಿ ಇಂದು ನಾವೆಲ್ಲರೂ ಶಿವರಾತ್ರಿ ನಡೆಸಿಕೊಂಡು ಬಂದಿದ್ದೇವೆ. ಇದರಿಂದ ಜೀವನದಲ್ಲಿ ವರ್ಷದ ಒಂದು ದಿವಾದರೂ ದೇವರ ನಾಮದಲ್ಲಿ ಶಿವರಾತ್ರಿ ದಿನವಿಡಿ ಉಪವಾಸದಿಂದ ಭಜನೆ, ಕಿರ್ತನೆ, ಪ್ರವಚನ, ದಿಂದ ದೇವರು ಪ್ರತ್ಯಕ್ಷನಾಗಿ ನಮಗೆ ದರ್ಶನ ಕೊಡುತ್ತಾನೆ ಎಂದು ಹೇಳಿದರು.

ಗುಳಬಾಳದ ಶರಣ ಹುಸೇನಸಾ ಬೋರಗಿ ಮಾತನಾಡಿ, ಶರಣರು, ಸಂತರು, ಮಹಾಂತರು, ನಡೆದಾಡಿದ ಪುಣ್ಯ ನೆಲದಲ್ಲಿ ನಾವು ಹುಟ್ಟಿದ್ದು ನಮ್ಮ ಪುಣ್ಯ. ಮತ್ತೂಬ್ಬರ ಜೀವನ ನೋಡಿ ಸಂತೋಷ ಪಡಬೇಕು ಹೊರತು ಅಪಹಾಸ್ಯ ಮಾಡಬಾರದು. ಶಿವನಾಮ ಜಪಿಸುವುದರಿಂದ ಪರಮಾತ್ಮ ಪ್ರತ್ಯಕ್ಷನಾಗಿ ಕರುಣೆಯಿಂದ ಭಕ್ತ ಸಮೂಹವನ್ನು ತನ್ನತ್ತ ಸೆಳೆಯುವ ಶಕ್ತಿ ಅವನಲ್ಲಿದೆ ಎಂದರು.

ಭಕ್ತರು ನಂತರ ಆಶ್ರಮದಲ್ಲಿ ಸಿಹಿ, ಹಣ್ಣು ಹಂಪಲು, ಅಲ್ಪೋಪಹಾರ ಸೇವಿಸಿ ಶಿವರಾತ್ರಿ ಉಪವಾಸ ಬಿಟ್ಟರು. ಗುರಣ್ಣಗೌಡ ತಾವರಖೇಡ, ದಯಾನಂದಗೌಡ ಬಿರಾದಾರ, ಸಿದ್ದನಗೌಡ ಬಿರಾದಾರ, ನಿಂಗನಗೌಡ ಬಿರಾದಾರ, ಗುರಪಾದಪ್ಪಗೌಡ ಬಿರಾದಾರ, ಶೇಖರಗೌಡ ಬಿರಾದಾರ, ಶಿವನಗೌಡ ಬಿರಾದಾರ, ಶರಣಪ್ಪ ತಳವಾರ, ಭಾಗಿರಥಿ ಬಿರಾದಾರ, ತಾರಾಬಾಯಿ ಬಿರಾದಾರ, ಶಂಕ್ರಮ ಬಿರಾದಾರ, ಕಾಶೀಬಾಯಿ ತಳವಾರ, ಯಲ್ಲಪ್ಪ ಹರಿಜನ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next