Advertisement

ಪತ್ರಿಕೆಗಳಿಗಿದೆ ಸಾಮಾಜಿಕ ಬದ್ಧತೆ: ಪಿಟಿಪಿ

03:18 PM Jul 08, 2019 | Naveen |

ಹೂವಿನಹಡಗಲಿ: ಪ್ರಸ್ತುತ ದಿನಗಳಲ್ಲಿ ಪತ್ರಿಕಾ ಕ್ಷೇತ್ರ ಸಾಮಾಜಿಕ ಹಿನ್ನೆಲೆಯಲ್ಲಿ ಕೆಲಸ ಕಾರ್ಯವನ್ನು ಮಾಡುತ್ತ ತನ್ನ ಬದ್ಧತೆಯನ್ನು ಉಳಿಸಿಕೊಂಡಿದೆ ಎಂದು ರಾಜ್ಯ ಕೌಶಲಾಭಿವೃದ್ಧಿ, ಮುಜರಾಯಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಹೇಳಿದರು.

Advertisement

ತಾಲೂಕು ಪ್ರಸ್‌ ಕ್ಲಬ್‌ ವತಿಯಿಂದ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ. ವಾಸ್ತವಿಕತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಆದರೆ ಸುದ್ದಿ ಪ್ರಸಾರ ಮಾಡುವ ಧಾವಂತದಲ್ಲಿ ಇತ್ತಿಚಿಗೆ ವಿದ್ಯುನ್ಮಾನ ಮಾಧ್ಯಮಗಳು ವಸ್ತು ಸ್ಥಿತಿಯನ್ನು ತಿಳಿದುಕೊಳ್ಳದೇ ಸತ್ಯವನ್ನು ಮರೆ ಮಾಚುವ ಕೆಲಸ ಮಾಡುತ್ತಿರುವುದು ಬೇಸರದ ಸಂಗತಿ ಎಂದರು.

ಇನ್ನೂ ಪತ್ರಕರ್ತರಿಗೆ ಎಲ್ಲ ರಂಗದಲ್ಲಿ ನೈಪುಣ್ಯತೆ ಇರಬೇಕು. ಬರವಣಿಗೆ ಒಂದು ಕಲೆಯಾಗಿದೆ ಎಂದರು. ಹಡಗಲಿ ಕ್ಷೇತ್ರದಲ್ಲಿ ಕಳೆದ ಮೂರು ನಾಲ್ಕು ವರ್ಷಗಳಿಂದಲೂ ಬರ ಬಿದ್ದಿರಬಹುದು ಆದರೆ ಕಲೆ, ಸಾಂಸ್ಕೃತಿಕ, ಸಮಾಜಿಕ ಕಾಳಜಿ ಉಳ್ಳ ಕೆಲಸ ಕಾರ್ಯಗಳಿಗೆ ಬರವಿಲ್ಲ ಎಂದರು. ಇನ್ನೂ ಪಟ್ಟಣದಲ್ಲಿ ಪತ್ರಿಕಾ ಭವನ ನಿರ್ಮಿಸಲು ನಿವೇಶನ, ಇತರೆ ಬೇಡಿಕೆಗಳನ್ನು ಪತ್ರಕರ್ತರು ಸಲ್ಲಿಸಿದ್ದಾರೆ ಆವುಗಳನ್ನು ಪರಿಶೀಲನೆ ಮಾಡಲಾಗುವುದು ಎಂದರು.

ಹಿರಿಯರ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣನವರ್‌ ಕಾರ್ಯಕ್ರಮ ಕುರಿತು ವಿಶೇಷ ಉಪನ್ಯಾಸ ನೀಡಿ, ಸಮಾಜವನ್ನು ಪ್ರಶ್ನೆ ಮಾಡುವ ಪತ್ರಕರ್ತರಿಗೆ ಸಮಾಜವು ಸಹ ಒಬ್ಬ ಪತ್ರಕರ್ತನ ನಡುವಳಿಕೆಯನ್ನು ಪ್ರಶ್ನೆ ಮಾಡಬೇಕಾಗಿದೆ.ಪ್ರಸ್‌ನೋಟ್ ಕಳುಹಿಸಲು ಪತ್ರಕರ್ತರಿಗಿಂತ ಸಮಾಜಿಕ ಕಾಳಜಿ ಹಿನ್ನಲೆಯಲ್ಲಿ ಸಮಾಜದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂತಹ ಬರವಣಿಗೆ ಮಾಡುವ ಪತ್ರಕರ್ತರು ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯಬಲ್ಲರು ಎಂದರು.

ಸಾಹಿತಿ ಮೇಟಿ ಕೊಟ್ರಪ್ಪನವರು ಬರೆದ ನನ್ನೆದೆಯ ಹಾಡು ಕವನ ಸಂಕಲನವನ್ನು ಬಿಡಿಸಿಸಿ ಬ್ಯಾಂಕ್‌ ನಿರ್ದೆಶಕ ಐಗೊಳ್‌ ಚಿದಾನಂದ್‌ ಬಿಡುಗಡೆ ಮಾಡಿದರು. ವಿವಿಧ ಕ್ಷೇತ್ರದಲ್ಲಿ ಉತ್ತಮ ಸೇವೆಗೈದ ಸಾಧಕರಿಗೆ ಸನ್ಮಾನ ಮಾಡಲಾಯಿತು. ತಾಪಂ ಕಾರ್ಯನಿರ್ವಾಹಕ ಆಧಿಕಾರಿ ಯು.ಎಚ್. ಸೋಮಶೇಖರ, ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಎಚ್. ಹಾಲಪ್ಪ, ನಿವೃತ್ತ ಅಭಿಯಂತರ ಕೆ.ಎನ್‌ ಶಿವಕುಮಾರ್‌, ಗ್ರಾಪಂ ಆಭಿವೃದ್ಧಿ ಅಧಿಕಾರಿ ಶಶಿಕಲಾ ಎಂ. ಕೊಪ್ಪದ್‌ ಹಾಗು ಪ್ರಗತಿ ಪರ ರೈತ ಅಳವುಂಡಿ ಭರ್ಮಪ್ಪ, ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

Advertisement

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ತಹಶೀಲ್ದಾರ್‌ ರಾಘವೇಂದ್ರರಾವ್‌, ತಾಪಂ ಅಧ್ಯಕ್ಷೆ ಕೆ. ಶಾರದಮ್ಮ ಹಾಜರಿದ್ದರು.

ಪ್ರಸ್‌ ಕ್ಲಬ್‌ ಅಧ್ಯಕ್ಷ ಕೆ. ಆಯ್ಯನಗೌಡ್‌ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಪತ್ರಕರ್ತ ವಿಶ್ವನಾಥ ಹಳ್ಳಿಗುಡಿ ಮಾತನಾಡಿದರು. ಶಿವಕುಮಾರ್‌ ಪತ್ರಿಮs್ ಸ್ವಾಗತಿಸಿದರು. ಗುರುಬಸವಸ್ವಾಮಿ ನಿರೂಪಿಸಿದರು. ಕೆ. ಪರಶುರಾಮ್‌ ಮತ್ತು ತಂಡದವರು ಪ್ರಾರ್ಥಿಸಿದರು. ಎಚ್. ಚಂದ್ರಪ್ಪ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಪತ್ರಕರ್ತರ ಕಾಲೋನಿಯಲ್ಲಿ ರಾಜ್ಯ ಮುಜರಾಯಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಸಸಿ ನಡೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next