Advertisement

ಮಾಹಿತಿಯೊಂದಿಗೆ ಸಭೆಗೆ ಬನ್ನಿ

03:40 PM Jan 08, 2020 | Naveen |

ಹೂವಿನಹಡಗಲಿ: ಅಧಿಕಾರಿಗಳು ಸಾಮಾನ್ಯ ಸಭೆಗೆ ಬರುವಾಗ ಇಲಾಖೆಗಳ ಸಮಗ್ರ ಮಾಹಿತಿಯೊಂದಿಗೆ ಬನ್ನಿರಿ, ಹಿರಿಯ ಅಧಿಕಾರಿಗಳನ್ನೇ ಸಭೆಗೆ ಕಳಿಸಿರಿ ಎಂದು ತಾಪಂ ಇಒ ಯು.ಎಚ್‌. ಸೋಮಶೇಖರ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

ತಾಪಂ ರಾಜೀವ್‌ ಗಾಂಧಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಸಂಬಂಧಿಸಿದ ಅಧಿ ಕಾರಿಗಳು ಸಮಗ್ರ ಮಾಹಿತಿಯೊಂದಿಗೆ ಸಭೆಗೆ ಬರಬೇಕು. ಕಿರಿಯ ಅಧಿಕಾರಿಗಳನ್ನು ಕಳಿಸಬಾರದೆಂದು ತಾಕೀತು ಮಾಡಿದರು.

ಸದಸ್ಯ ಜೆ. ಶಿವರಾಜ್‌ ಮಾತನಾಡಿ, ತಾಲೂಕಿನಲ್ಲಿ ಕೃಷಿ ಇಲಾಖೆಯಿಂದ ನಿರ್ವಹಿಸಿದ ಕೃಷಿ ಹೊಂಡಗಳು ಸಂಪೂರ್ಣ ಕಳಪೆಯಾಗಿವೆ. ಕೆಲವು ಕಡೆ ಕಾಮಗಾರಿ ಮಾಡದೇ ಬೋಗಸ್‌ ಬಿಲ್‌ ಪಡೆದಿದ್ದಾರೆ. ನಮಗೆ ಸಮಗ್ರ ತನಿಖೆಯ ಮಾಹಿತಿಯನ್ನು ಕೊಡಬೇಕೆಂದು ಹೇಳಿದರು.

ಸದಸ್ಯ ಬಸವರಾಜ್‌ ಮಾತನಾಡಿ, ಹೊಳಲು ಸಾರ್ವಜನಿಕ ಆಸ್ಪತ್ರೆಯಲ್ಲಿ ಕುಡಿಯುವ ನೀರು, ವಿದ್ಯುತ್‌ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲ ಎಂದು ಸಭೆ ಗಮನಕ್ಕೆ ತಂದರು.

ತಾಲೂಕು ವೈದ್ಯಾಧಿಕಾರಿ ಡಾ| ಬದ್ಯಾನಾಯ್ಕ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವ ಭರವಸೆ ನೀಡಿದರು. ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಜಲಾಶಯದ ಜಾಕ್‌ ವೆಲ್‌ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು. ಕಾಮಗಾರಿ ನಡೆಯುವ ಸ್ಥಳದಲ್ಲಿ ದಲಿತರ ರುದ್ರಭೂಮಿ ಇದೆ. 10 ಹಳ್ಳಿಗಳ ಕುಡಿಯುವ ನೀರಿನ ಪೈಪ್‌ಲೈನ್‌ ಗಳಿವೆ. ಕಾಮಗಾರಿ ಸ್ಥಳವನ್ನು ಬೇರೆ ಕಡೆ ಮಾಡಬೇಕೆಂದು ಸದಸ್ಯ ಜೆ.ಶಿವರಾಜ್‌ ಹೇಳಿದರು.

Advertisement

ಇಒ ಸೋಮಶೇಖರ್‌ ಮಾತನಾಡಿ, ಈಗಾಗಲೇ ತಾಲೂಕಿನಲ್ಲಿ ಸಂಘಟನೆಗಳು ಜಲಾಶಯದ ಕಾಮಗಾರಿ ವಿರುದ್ಧ ಪ್ರತಿಭಟನೆಯನ್ನು ಮಾಡಿವೆ. ಸದಸ್ಯರ ಮನವಿಯಂತೆ ಸಭೆಯಲ್ಲಿ ಅನುಮೋದಿಸಿ ಸಂಬಂಧಿಸಿದವರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.

ಈ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ 15 ಶಾಲೆಗಳಲ್ಲಿ
ವಿದ್ಯಾರ್ಥಿಗಳಿಗಾಗಿ ತೀವ್ರ ನಿಗಾ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಅದರಂತೆ ಓದುವ ಮನೆಗಳನ್ನು ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

ತಾಲೂಕಿನ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಇನ್ನುಮುಂದೆ ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗುತ್ತದೆ. ಅವುಗಳ ನಿರ್ವಹಣೆಯನ್ನು 14ನೇ ಹಣಕಾಸಿನ ಯೋಜನೆಯಲ್ಲಿ ನಿರ್ವಹಣೆ, ದುರಸ್ತಿ ಮಾಡಬೇಕೆಂದು ಜಿಪಂ ಸಿಇಒ ಸೂಚನೆ ನೀಡಿದ್ದಾರೆ ಎಂದು ಇಒ. ಸೋಮಶೇಖರ್‌ ಹೇಳಿದರು.

ತೋಟಗಾರಿಕೆ, ಅರಣ್ಯ ಇಲಾಖೆ, ಪಶು ಇಲಾಖೆ, ಸಮಾಜ
ಕಲ್ಯಾಣ ಇಲಾಖೆ, ಬಿ.ಸಿ.ಎಂ. ಇಲಾಖೆಗಳ ಅಧಿಕಾರಿಗಳು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ತಾಪಂ ಅಧ್ಯಕ್ಷ ಅಂಬ್ಲಿ ಮಲ್ಲಿಕಾರ್ಜುನ, ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next