Advertisement

ಸಹಕಾರ ಸಂಘ ರೈತರಿಗೆ ಸಹಕಾರಿಯಾಗಲಿ

06:04 PM Mar 16, 2020 | Team Udayavani |

ಹೂವಿನಹಡಗಲಿ: ರೈತರ ಸಹಕಾರಕ್ಕಾಗಿ ಅಸ್ತಿತ್ವಗೊಂಡಿರುವ ಸಹಕಾರ ಸಂಘಗಳು ರೈತರಿಗೆ ಸಹಕಾರಿಯಾಗುವ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಲಿ ಎಂದು ಕ್ಷೇತ್ರದ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.

Advertisement

ಪಟ್ಟಣದಲ್ಲಿ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘವು ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದರು. ಸಹಕಾರ ಸಂಘಗಳು ಕೇವಲ ಲಾಭಗಳಿಕೆ ದೃಷ್ಟಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡದೇ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಕೈಗೊಳ್ಳಬೇಕು, ರೈತರಿಗೆ ಅವಶ್ಯಕವಾದ ಬೀಜ ಗೊಬ್ಬರೆ ಸರಿಯಾದ ಸಂದರ್ಭದಲ್ಲಿ ದಾಸ್ತಾನು ಮಾಡಿ ರೈತರಿಗೆ ಪೂರೈಕೆ ಮಾಡಬೇಕು. ಆಡಳಿತ ಮಂಡಳಿಗಳು ಪಾರದರ್ಶಕವಾಗಿ ಕಾರ್ಯ ನಿರ್ವಹಿಸುವ ಮೂಲಕವಾಗಿ ರೈತರ ವಿಶ್ವಾಸ ಗಳಿಸಿಕೊಳ್ಳಬೇಕು ಎಂದರು.

ಮೆಕ್ಕೆಜೋಳ ಖರೀದಿ ಕೇಂದ್ರ: ತಾಲೂಕಿನಲ್ಲಿ ಈಗಾಗಲೇ ರೈತರು ಬೆಳೆದಿರುವ ಮೆಕ್ಕೆ ಜೋಳಕ್ಕೆ ದರ ಕುಸಿತ ಕಂಡಿದ್ದು ಇದರಿಂದಾಗಿ ರೈತರಿಗೆ ತುಂಬಾ ತೊಂದರೆಯಾಗುತ್ತದೆ. ಕಾರಣ ಸಾಧ್ಯವಾದಷ್ಟು ಬೇಗನೆ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭ ಮಾಡಲು ಸರ್ಕಾರದ ಹಂತದಲ್ಲಿ ಒತ್ತಡ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಗವಿಮಠದ ಶ್ರೀಗಳಾದ ಡಾ| ಹಿರಿಶಾಂತ ವೀರಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಐಗೊಳ್‌ ಚಿದಾನಂದ್‌, ತಾಪಂ ಅಧ್ಯಕ್ಷ ಅಂಬ್ಲಿ ಮಲ್ಲಿಕಾರ್ಜುನ, ಅರವಳ್ಳಿ ವೀರಣ್ಣ ಬಿ. ಹನುಮಂತಪ್ಪ, ತಾಪಂ ಸದಸ್ಯ ನಾರಾಯಣ ಸ್ವಾಮಿ, ಟಿಎಪಿಸಿಎಂಎಸ್‌ ಅಧ್ಯಕ್ಷ ಡಾಕ್ಯಾನಾಯ್ಕ, ಆಟವಾಳಗಿ ಕೊಟ್ರೇಶ್‌, ಟಿಎಪಿಸಿಎಂಎಸ್‌ ವ್ಯವಸ್ಥಾಪಕ ಸೊಪ್ಪಿನ ವೀರಣ್ಣ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next