Advertisement

ಕ್ರೀಡಾಂಗಣ ಸಮಸ್ಯೆಗಳ ತಾಣ

11:20 AM Jul 05, 2019 | Team Udayavani |

ಹೂವಿನಹಡಗಲಿ: ಜಿಪಿಜಿ ಸರ್ಕಾರಿ ಪಪೂ ಕಾಲೇಜ್‌ ಹಿಂದುಗಡೆಯಿರುವ ತಾಲೂಕು ಕ್ರೀಡಾಂಗಣ ಅವ್ಯವಸ್ಥೆಯ ಆಗರವಾಗಿದೆ.

Advertisement

ಪಟ್ಟಣ ಜನತೆಯ ಕ್ರೀಡಾ ಚಟುವಟಿಕೆ ಹಾಗೂ ವಾಯುವಿಹಾರಕ್ಕೆ ಇರೋದು ಇದೊಂದೆ ಕ್ರೀಡಾಂಗಣ. ಈ ಕ್ರೀಡಾಂಗಣಕ್ಕೆ ಈಗ ಗ್ರಹಣ ಬಡಿದಂತಾಗಿದೆ. ಕ್ರೀಡಾಂಗಣದ ಸುತ್ತಲೂ ಕಲ್ಲು ಮುಳ್ಳುಗಳು ಬಿದ್ದಿದ್ದು ಅರೆಬರೆ ಕಾಮಗಾರಿಯ ಅವಶೇಷಗಳು ಅಲ್ಲೆ ಇವೆ. ಸ್ವಚ್ಛತೆ ಇಲ್ಲದಿರುವುದು ಸಾರ್ವಜನಿಕರಿಗೆ ಇರುವ ಒಂದು ಕ್ರೀಡಾಂಗಣವೂ ಸಹ ನಿರುಪಯುಕ್ತವಾಗುವ ಹಂತ ತಲುಪಿದಂತಾಗಿದೆ.

ರಾತ್ರಿಯಾಗುತ್ತಲೇ ದ್ವಿಚಕ್ರ ವಾಹನ ಸವಾರರು ಕ್ರೀಡಾಂಗಣದ ಒಳಗಡೆಯೇ ಬೈಕ್‌ ತೆಗೆದುಕೊಂಡು ಹೋಗಿ ನಿಲ್ಲಿಸುವುದರಿಂದ ಕ್ರೀಡಾಂಗಣದ ಟ್ರ್ಯಾಕ್‌ಗಳೆಲ್ಲ ಹಾಳಾಗುತ್ತಿದೆ. ಸಾಲದೆಂಬಂತೆ ಮೈದಾನದ ತುಂಬೆಲ್ಲ ಗಿಡ ಗಂಟೆಗಳು ಬೆಳೆಯುತ್ತಿವೆ. ಯುವ ಜನ ಸೇವೆ ಹಾಗೂ ಕ್ರೀಡಾ ಇಲಾಖೆಗೆ ಇತ್ತ ಗಮನಹರಿಸಬೇಕಿದೆ.

ಆಗಸ್ಟ್‌ ತಿಂಗಳಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕ್ರೀಡಾಕೂಟಗಳು ಪ್ರಾರಂಭ ವಾಗುತ್ತಿದ್ದು ಮಕ್ಕಳಿಗೂ ಸಹ ತೊಂದರೆಯಾಗಬಹುದು. ಸುಮಾರು 1 ಕೋಟಿ ರೂಗಳ ಆನುದಾನದಲ್ಲಿ ಕೈಗೊಂಡ ತಾಲೂಕು ಕ್ರೀಡಾಂಗಣದಲ್ಲಿ ಫೆವಿಲಿಯನ್‌ ಹಾಗೂ ಟ್ಯ್ರಾಕ್‌ ಕಾಮಗಾರಿ ಜೂನ್‌ 30ರೊಳಗೆ ಪೂರ್ಣಗೊಳ್ಳಬೇಕಾಗಿದ್ದು ಇನ್ನೂ ಅರೆಬರೆಯಾಗಿದೆ.

ಸಾಧ್ಯವಾದಷ್ಟು ಬೇಗ ತಾಲೂಕು ಕ್ರೀಡಾಂಗಣವನ್ನು ಸುಸ್ಥಿಗೆ ತರಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕ್ರೀಡಾ ಪ್ರೇಮಿಗಳ ಅಗ್ರಹಿಸಿದ್ದಾರೆ.

Advertisement

ಕಾಮಗಾರಿ ಸ್ವಲ್ಪ ತಡವಾಗಿದೆ. ಜುಲೈ 30ರೊಳಗೆ ಎಲ್ಲಾ ಕಾಮಗಾರಿ ಮುಗಿಸಿಕೊಡಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ರಾತ್ರಿ ಸಮಯದಲ್ಲಿ ಕಾವಲು ಕಾಯಲು ಹೋಂಗಾರ್ಡ್‌ಗಳ ನೇಮಕಕ್ಕೆ ಟೆಂಡರ್‌ ಕರೆಯಲಾಗುವುದು. ಸರದಿ ಪ್ರಕಾರವಾಗಿ ಒಟ್ಟು 3 ಜನ ಹೋಂಗಾರ್ಡ್‌ಗಳನ್ನು ನೇಮಕ ಮಾಡಿಕೊಳ್ಳಲಾಗುವುದು.
ಸುರೇಶ್‌ ಬಾಬು
ಸಹಾಯಕ ನಿರ್ದೇಶಕರು, ಯುವ ಜನ ಸೇವೆ ಹಾಗೂ ಕ್ರೀಡಾ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next