Advertisement

ಹಡಗಲಿ ತಾಲೂಕಿನಲ್ಲಿ ನೀರಿಗೆ ಹಾಹಾಕಾರ

12:46 PM May 13, 2019 | Naveen |

ಹೂವಿನಹಡಗಲಿ: ಜಿಲ್ಲೆಯ ಪಶ್ಚಿಮ ತಾಲೂಕಿನ ಕೊನೆಯ ಭಾಗದಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣೆ ಎದುರಿಸುವುದು ಸಹಜವಾಗಿದೆ.

Advertisement

ಈಗಾಗಲೇ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಜನರಿಗೆ ಕುಡಿಯಲು ನೀರಿಲ್ಲದೆ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿಗಾಗಿ ಬರಗಾಲ ಕಾಮಗಾರಿಯಲ್ಲಿ ಟಾಸ್ಕ್ಫೋರ್ಸ್‌ ಸಮಿತಿ ನಿರ್ಣಯದಂತೆ ಸುಮಾರು ಒಂದು ಕೋಟಿ ರೂ. ವ್ಯಯಿಸಲಾಗಿದೆ. ಜನತೆಗೆ ನೀರಿನ ಬವಣೆ ಮಾತ್ರ ತಪ್ಪಲಿಲ್ಲ ಎನ್ನುವಂತಹ ಸ್ಥಿತಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ನಿರ್ಮಾಣವಾಗಿದೆ.

ಗ್ರಾಮೀಣ ಭಾಗದಲ್ಲಂತೂ ಸರದಿ ಸಾಲಿನಲ್ಲಿ ನಿಂತು ನೀರನ್ನು ತಂದರೆ ಅಂದಿನ ಒಂದು ದೊಡ್ಡ ಕೆಲಸ ಮುಗಿದಂತೆ ಆಗುತ್ತದೆ. ಇಲ್ಲವೇ ದಿನದ ಕೆಲಸವೇ ಮುಗಿದಂತಾಗುತ್ತದೆ. ಇಂತಹ ಗ್ರಾಮಗಳು ತಾಲೂಕಿನಲ್ಲಿ ಸುಮಾರು 16 ಸಮಸ್ಯಾತ್ಮಕ ಗ್ರಾಮಗಳೆಂದು ತಾಲೂಕು ಆಡಳಿತ ಗುರುತಿಸಲಾಗಿದ್ದು, ಇನ್ನೂ 11 ಹಳ್ಳಿಗಳಿಗೆ ರೈತರ ಖಾಸಗಿ ಕೊಳವೆ ಬಾವಿಗಳಿಂದಲೂ ಬಾಡಿಗೆ ರೂಪದಲ್ಲಿ ಪಡೆದು ನೀರು ಪೂರೈಕೆ ಮಾಡುತ್ತಿದೆ. ಇದಕ್ಕಾಗಿ ಕೊಳವೆ ಬಾವಿ ಪಡೆದಿದ್ದ ರೈತರಿಗೆ ತಿಂಗಳಿಗೆ 9 ಸಾವಿರ ರೂ. ಪಾವತಿ ಮಾಡಲಾಗುತ್ತಿದೆ. ಕೆಂಚಮ್ಮನಹಳ್ಳಿಯಲ್ಲಿ ಎರಡು ಕೊಳವೆ ಬಾವಿ, ಕಲ್ಲಳ್ಳಿಯಲ್ಲಿ 2, ಕೆ.ಕೆ. ತಾಂಡಾದಲ್ಲಿ ಒಂದು, ಹಿರೇಮಲ್ಲನಕೇರಿಯಲ್ಲಿ ಮೂರು, ಉತ್ತಂಗಿಯಲ್ಲಿ ಒಂದು ಒಳಗೊಂಡಂತೆ ಇನ್ನೂ ಕೆಲ ಕಡೆಗಳಲ್ಲಿ ಬಾಡಿಗೆ ಕೊಳವೆ ಬಾವಿಗಳಿಂದ ರೈತರಿಗೆ ನೀರು ಪೂರೈಕೆ ಮಾಡಲಾಗುತ್ತಿದ್ದು, ಈಗಾಗಲೇ ಸುಮಾರು 3.50 ಲಕ್ಷ ರೂ. ಪಾವತಿ ಮಾಡಲಾಗಿದೆ. ತಾಲೂಕಿನ ಇಟಗಿ ಹೋಬಳಿಯಲ್ಲಿ ಹಿರೇಮಲ್ಲನಕೇರಿ, ಕೆಂಚಮ್ಮನಹಳ್ಳಿ, ತಳಕಲ್ಲು, ಮಹಾಜನದಹಳ್ಳಿ ಹಾಗೆಯೇ ಹಿರೇಹಡಗಲಿ ಹೋಬಳಿಯಲ್ಲಿನ ದಾಸನಹಳ್ಳಿ, ನಡುವಿನಹಳ್ಳಿ, ಕೆ.ವೀರಾಪುರ ಗ್ರಾಮಗಳಲ್ಲಿ ಇನ್ನು ದಾಸರಳ್ಳಿ, ಕಾಲ್ವಿತಾಂಡಾ, ಇತರೆ ಕೆಲ ಗ್ರಾಮಗಳಲ್ಲಿ ಜನತೆ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. 68 ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಸಿದರೂ ಸಹ ಆದರಲ್ಲಿ 40 ಕೊಳವೆ ಬಾವಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರಿದ್ದರೆ ಉಳಿದಂತೆ ಸುಮಾರು 28 ಗ್ರಾಮಗಳಲ್ಲಿ ಕೊರೆಸಿದ ಕೊಳವೆ ಬಾವಿಗಳಲ್ಲಿ ನೀರೇ ದೊರೆತ್ತಿಲ್ಲ.

ಈಗಾಗಲೇ ತಾಲೂಕಿನಲ್ಲಿರುವ ಸಮಸ್ಯಾತ್ಮಕ ಹಳ್ಳಿಗಳ ಕುರಿತು ಗಮನ ಹರಿಸಲಾಗಿದೆ. 23 ಗ್ರಾಪಂ ವ್ಯಾಪ್ತಿಯಲ್ಲಿನ 7 ಗ್ರಾಪಂ ವ್ಯಾಪ್ತಿಯಲ್ಲಿನ ಕೆಲ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಕಂಡು ಬಂದಿದೆ. ಸಮಸ್ಯೆಗಳಿರುವ ಗ್ರಾಮಗಳಲ್ಲಿ ರೈತರ ಕೊಳವೆಬಾವಿಗಳನ್ನು ಬಾಡಿಗೆ ರೂಪದಲ್ಲಿ ಪಡೆದು ಜನತೆ ನೀರಿನ ಸೌಕರ್ಯ ಮಾಡಲಾಗಿದೆ.
ಕೂಡಲಗಿ, ತಹಶೀಲ್ದಾರ್‌.

ಈಗಾಗಲೇ ಈ ಹಿಂದೆ ತಾಲೂಕಿನಲ್ಲಿದ್ದ ಬರ ಹಿನ್ನೆಲೆಯಲ್ಲಿ ಸುಮಾರು 1 ಕೋಟಿ ರೂ. ಕುಡಿಯುವ ನೀರಿಗಾಗಿ ಬಳಕೆ ಮಾಡಲಾಗಿದೆ. ಇನ್ನೂ 3 ನೇ ಹಂತದ ಟಾಸ್ಕ್ಫೋರ್ಸ್‌ ಸಮಿತಿಯಲ್ಲಿ ಶಿಫಾರಸಿನಂತೆ ತಾಲೂಕಿನ ಯಾವ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆಯೋ ಆದನ್ನು ಕ್ರಿಯಾ ಯೋಜನೆ ಮಾಡಲಾಗಿದೆ. ಸುಮಾರು 50 ಲಕ್ಷ ರೂ. ಕ್ರಿಯಾ ಯೋಜನೆ ಸಲ್ಲಿಸಲಾಗಿದೆ.
ಕಿರಣ್‌, ಸಹಾಯಕ ಅಭಿಯಂತರರು.

Advertisement
Advertisement

Udayavani is now on Telegram. Click here to join our channel and stay updated with the latest news.

Next