ಹೂವಿನಹಡಗಲಿ: ನಮ್ಮ ಕುರುಬರು ಕುಂತರೆ ಕುರುಬ ನಿಂತರೆ ಕಿರುಬ ಎನ್ನದೆ, ಕುಂತರೆ ಕನಕದಾಸ ನಿಂತರೆ ಸಂಗೊಳ್ಳಿ ರಾಯಣ್ಣ ಎಂದು ಗರ್ವದಿಂದ ಹೇಳಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವೈ.ಎನ್.ಗೌಡರ್ ಹೇಳಿದರು.
ಪಟ್ಟಣದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಜಾಗೃತ ಬಳಗವು ಸ್ಥಳೀಯ ಕನಕ ಭವನದಲ್ಲಿ ಹಮ್ಮಿಕೊಂಡಿದ್ದ ಸಂಗೊಳ್ಳಿ ರಾಯಣ್ಣನ 221ನೇ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಗೌರವ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸುಂದರವಾದ ಮಾತುಗಳು ಎಂದೂ ನಿಜವಲ್ಲ. ನಿಜವಾದ ಮಾತುಗಳು ಎಂದೂ ಸುಂದರವಲ್ಲ ಎನ್ನುವಂತೆ ಶ್ರಮ ಸಂಸ್ಕೃತಿ ಜೀವಾಳವಾಗಿದ್ದ ಕುಲದಲ್ಲಿ ಜನಿಸಿದ ರಾಯಣ್ಣ ಸ್ವಾಮಿನಿಷ್ಠೆ, ಸ್ವಾಭಿಮಾನಕ್ಕಾಗಿ ಹೋರಾಡಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ. ರಾಯಣ್ಣ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಪರಮವೀರ ಎಂದರು. ಇಂಥ ದೇಶ ಪ್ರೇಮಿಯ ಇತಿಹಾಸ ನವಪೀಳಿಗೆ ಅಭ್ಯಾಸಿಸಿ ಆದರ್ಶದ ಬದುಕನ್ನು ಕಟ್ಟಿಕೊಳ್ಳಬೇಕೆಂದು ಕರೆ ನೀಡಿದರು.
ಪ್ರದೇಶ ಕುರುಬ ಸಂಘದ ನಿರ್ದೇಶಕ ಬಿ.ಹನುಮಂತಪ್ಪ, ಮುಖ್ಯ ಗುರುಗಳ ಸಂಘದ ಅಧ್ಯಕ್ಷ ಪಿ.ಪ್ರಕಾಶ್, ಪ.ಪೂ.ಉ. ಸಂಘದ ಅಧ್ಯಕ್ಷ ಕೆ.ದ್ಯಾಮಜ್ಜ, ಕನಕದಾಸ ಕುರಿ ಉಣ್ಣೆ ನೇಕಾರರ ಕುರಿ ಸಾಕಾಣಿಕೆದಾರ ಸಹಕಾರ ಸಂಘದ ಅಧ್ಯಕ್ಷ ಕೆ.ಜಿ. ಹನುಮಪ್ಪ ಮಾತನಾಡಿದರು. ತಾಲೂಕು ಕುರುಬ ಸಂಘದ ಅಧ್ಯಕ್ಷ ಎಚ್.ಬೀರಪ್ಪ ಅಧ್ಯಕ್ಷತೆ ವಹಿಸಿದ್ದರು. ನೂತನ ಪುರಸಭಾ ಸದಸ್ಯರಾದ ಆರ್.ನಿರ್ಮಲಮ್ಮ, ಈಟಿ ಮಾಲತೇಶ್, ನಿವೃತ್ತ ನೌಕರರಾದ ಕೆ.ಹಾಲಪ್ಪ, ಕರಿಯಪ್ಪ, ಪರಮೇಶ್ವರಪ್ಪ ಇವರಿಗೆ ಗೌರವ ಸನ್ಮಾನ ನೆರವೇರಿತು. 2018-19ನೇ ಸಾಲಿನಲ್ಲಿ ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿ ವಿಭಾಗದಲ್ಲಿ ಶೇ. 85ಕ್ಕೂ ಅಧಿಕ ಅಂಕಗಳಿಸಿದ ಸುಮಾರು 42 ವಿದ್ಯಾರ್ಥಿಗಳಿಗೆ ಬಳಗದ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಹಿರೇಹಡಗಲಿ ಜಿಪಂ ಸದಸ್ಯೆ ವೀಣಾಪರಮೇಶ್ವರಪ್ಪ, ಎಪಿಎಂಸಿ ಅಧ್ಯಕ್ಷ ಎಸ್.ಹನುಮಂತಪ್ಪ, ತಾಪಂ ಸದಸ್ಯ ಈಟಿ ಲಿಂಗರಾಜ್, ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಶಿವಮೂರ್ತೆಪ್ಪ, ಕಾಳಿದಾಸ ಸಹಕಾರ ಸಂಘದ ಅಧ್ಯಕ್ಷ ಕೆ.ಎಚ್. ದುಷ್ಯಂತಪ್ಪ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಎಂ. ಬಸಪ್ಪ, ತಾಪಂ ಸದಸ್ಯ ಈಟಿ ಲಿಂಗರಾಜ್, ತಾಪಂ ಮಾಜಿ ಅಧ್ಯಕ್ಷ ಬಿ.ಹುಲುಗಪ್ಪ, ಕನಕ ಬ್ಯಾಂಕ್ ಮಾಜಿ ಅಧ್ಯಕ್ಷ ಗುರುವಿನ ರವೀಂದ್ರ, ಪ್ರೊಫೆಸರ್ ಬಸವರಾಜ್ ಚಿಗಣ್ಣನವರ್ ಉಪಸ್ಥಿತರಿದ್ದರು.
ಹಡಗಲಿ ಬಸವರಾಜ ಮತ್ತು ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಎಂ.ಚಿದಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ. ದೊಡ್ಡಬಸಪ್ಪ, ಬಾವಿಹಳ್ಳಿ ಮಲ್ಲಿಕಾರ್ಜುನ, ಆರ್.ಹನುಮಯ್ಯ, ಎಸ್.ಕೃಷ್ಣ, ಕೆ.ಎಚ್. ಗಣೇಶ್, ಬಿ.ಯಮನೂರು, ಬನ್ನಿಕಲ್ ರವಿ ನಿರ್ವಹಿಸಿದರು.