ಹೂವಿನಹಡಗಲಿ: ಪ್ರಸ್ತುತ ಗ್ರಾಪಂಗಳಿಗೆ ವಿದ್ಯುತ್ ಬಿಲ್ ಹೊರೆಯಾಗುತ್ತಿದ್ದು ಮುಂದಿನ ಎಪ್ರಿಲ್ 1ನೇ ತಾರೀಖೀನಿಂದ ಯಾವ ಗ್ರಾಪಂ ಕುಡಿಯುವ ನೀರಿನ ಪ್ರಯುಕ್ತ ಗ್ರಾಪಂಗೆ ಮೀಟರ್ ಇರುತ್ತದೆಯೋ ಅಂತವುಗಳಿಗೆ ಮಾತ್ರ ಬಿಲ್ ಪಾವತಿ ಮಾಡಲಾಗುವುದು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಯು.ಎಚ್. ಸೋಮಶೇಖರ್ ತಿಳಿಸಿದರು.
ತಾಪಂ ರಾಜೀವ್ ಗಾಂಧಿ ಸಭಾಭವನದಲ್ಲಿ ಕರೆಯಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿಯೊಂದು ಇಲಾಖೆಯ ಪ್ರಗತಿ ಪರಶೀಲನೆ ಮಾಹಿತಿ ಪಡೆದುಕೊಂಡು ಮಾತನಾಡಿದರು.
ಗ್ರಾಪಂಗೆ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ವಿದ್ಯುತ್ ಬಿಲ್ ಪಾವತಿಗೆ ಅವಕಾಶವಿದ್ದು ಅದರೆ ಕೆಲವೊಂದು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿದ್ಯುತ್ ಮೀಟರ್ ಅಳವಡಿಕೆಯಲ್ಲಿ ವ್ಯತ್ಯಾಸಗಳಿದ್ದು ಅವುಗಳ ಬಿಲ್ ವಿನಾಕಾರಣ ಗ್ರಾಪಂ ಮೇಲೆ ಬೀಳುತ್ತಿರುವುದರಿಂದಾಗಿ ಹೊರೆಯಾಗುತ್ತಿದೆ. ಕಾರಣ ಬರುವ ಎಪ್ರಿಲ್ 1ನೇ ತಾರೀಖೀನಿಂದ ಯಾವ ಗ್ರಾಪಂ ವಿದ್ಯುತ್ ಮೀಟರ್ ಅವಳವಡಿಕೆ ಮಾಡಲಾಗಿದೆಯೋ ಅಂತವುಗಳ ಪಾವತಿ ಮಾಡಲಾಗುವುದು ಎಂದರು.
ಇನ್ನೂ ಮಾಗಳ ಗ್ರಾಮದಲ್ಲಿ ಸುಮಾರು ವರ್ಷಗಳಿಂದಲೂ 32 ವಿದ್ಯುತ್ ಕಂಬಗಳ ಸ್ಥಳಾಂತರಕ್ಕೆ ಅವಕಾಶ ನೀಡಲಾಗಿದ್ದು ಹೆಚ್ಚುವರಿಯಾಗಿ ವಿದ್ಯುತ್ ಕಂಬಗಳನ್ನು ತರಲಾಗಿದೆ. ಅದರೆ ಕಂಬಗಳನ್ನು ಹಾಕಲಾಗಿಲ್ಲ ಎಂದು ಗ್ರಾ.ಪಂ ಕಾರ್ಯದರ್ಶಿ ಸಭೆಯ ಗಮನ ಸೆಳೆದರು. ಜೆಸ್ಕಾಂ ಎಇಇ ಈ ಕೂಡಲೇ ಇನ್ನೂ 8-10 ದಿನಗಳಲ್ಲಿ ಹೊಸದಾಗಿ ಕಂಬಗಳನ್ನು ಹಾಕಲಾಗುವುದು ಎಂದರು.
ತಾಲೂಕಿನ ಹರವಿ ಗ್ರಾಮದಲ್ಲಿ ಹೊಸದಾಗಿ ಶಾಲಾ ಕಟ್ಟಡದ ಒಂದು ಕೊಠಡಿಗೆ ರೂ 8.70 ಲಕ್ಷ ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು ಕಳೆದ 4-5 ತಿಂಗಳುಗಳಿಂದಲೂ ಯಾವ ಕೆಲಸ ನಡೆಯದೇ ಕೇವಲ ಪುಸ್ತಕದಲ್ಲಿ ಮಾತ್ರ ಪ್ರಗತಿಯಲ್ಲಿದೇ ಎಂದು ಮಾಹಿತಿ ನೀಡುತ್ತಿದ್ದಿರಲ್ಲ ಸಭೆಗೆ ತಪ್ಪು ಮಾಹಿತಿ ನೀಡಿದಂತಾಗುವುದಿಲ್ಲವೇ ಎಂದು ತಾಪಂ ಅಧ್ಯಕ್ಷ ಅಂಬ್ಲಿ ಮಲ್ಲಿಕಾರ್ಜುನ ಸಂಬಂಧ ಪಟ್ಟ ಇಲಾಖೆಯ ಅಭಿಯಂತರ ಈಶಣ್ಣ ಇವರನ್ನು ಪ್ರಶ್ನಿಸಿದರೂ ಅದಕ್ಕೆ ಪ್ರತಿಕ್ರಿಯಿಸಿದ ಅಭಿಯಂತರ ಈಗಾಗಲೇ ಸಂಬಂಧಪಟ್ಟ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭ ಮಾಡಲಾಗುವುದು ಎಂದರು.
ಎಪ್ರಿಲ್ ತಿಂಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಪ್ರಾರಂಭವಾಗಲಿದ್ದು ಅದಕ್ಕಾಗಿ ಈ ಭಾರಿ ತಾಲೂಕಿನಲ್ಲಿ 9 ಕೇಂದ್ರಗಳನ್ನು ತೆರೆಯಲಾಗಿದೆ. ಹೊಸದಾಗಿ ಬೂದನೂರು ಪ್ರೌಢಶಾಲೆಯಲ್ಲಿ ಕೇಂದ್ರ ತೆರೆಯಲಾಗಿದೆ. ಪರೀಕ್ಷೆ ಸುಲಲಿತವಾಗಿ ನಡೆಯಲು ಅಗತ್ಯ ಸಿಬ್ಬಂದಿ ನೇಮಕ ಮಾಡಲಾಗಿದೆ. ಈ ಭಾರಿ ಫಲಿಂತಾಂಶ ಹೆಚ್ಚಾಗಲು ಸೂಕ್ತವಾಗಿ ತರಗತಿಗಳನ್ನು ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ನಾಗರಾಜ ಸಭೆಗೆ ಮಾಹಿತಿ ನೀಡಿದರು.
ತಾಲೂಕಿನ ಕಾಗನೂರು, ಗೊವಿಂದ ಪುರ ತಾಂಡ-1, 2ರಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಸೂಕ್ತ ಕ್ರಮ ಕೈಗೊಳ್ಳಲು ಇಒ ಅಧಿಕಾರಿಗಳಿಗೆ ಸೂಚಿಸಿದರು. ಇನ್ನೂ ಅರೋಗ್ಯ ಇಲಾಖೆ ಮಾಹಿತಿ ಪಡೆದು ಯಾವುದೇ ಕಾರಣಕ್ಕೂ ಕೊರೊನಾ ಬಗ್ಗೆ ಸಾರ್ವಜನಿಕರು ಭಯ ಪಡುವ ಅವಶ್ಯಕತೆ ಇಲ್ಲ. ಜಿಲ್ಲಾ ಕೇಂದ್ರದಿಂದ ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಸಭೆಯಲ್ಲಿ ತಾಪಂ ಅಧ್ಯಕ್ಷ ಅಂಬ್ಲಿ ಮಲ್ಲಿಕಾರ್ಜುನ, ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣ ಸ್ವಾಮಿ, ಕಾರ್ಯನಿರ್ವಾಹಕ ಅಧಿಕಾರಿ ಯು.ಎಚ್. ಸೋಮಶೇಖರ್ ಹಾಜರಿದ್ದರು.