Advertisement

ಸಮಬಾಳು-ಸಮಪಾಲು ಕನಕಪೀಠದ ಉದ್ದೇಶ

05:27 PM May 08, 2019 | Naveen |

ಹೂವಿನಹಡಗಲಿ: ಸಮಾಜದಲ್ಲಿನ ಎಲ್ಲ ವರ್ಗದವರಿಗೂ ಸಮಬಾಳು- ಸಮಪಾಲು ದೊರಕಬೇಕು ಎನ್ನುವುದು ಶ್ರೀ ಮಠದ ಪ್ರಮುಖ ಉದ್ದೇಶವಾಗಿದೆ ಎಂದು ಕಾಗಿನಲೆ ಕನಕ ಗುರುಪೀಠದ ಶ್ರೀಗಳಾದ ನಿರಂಜನಾನಂದ ಪುರಿ ಸ್ವಾಮಿಗಳು ತಿಳಿಸಿದರು.

Advertisement

ತಾಲೂಕಿನ ಸುಕ್ಷೇತ್ರ ಮೈಲಾರದಲ್ಲಿ ಕಾಗಿನೆಲೆ ಕನಕ ಗುರು ಪೀಠ ಶಾಖಾ ಮಠದ ಸ್ಥಾಪನೆ ಹಿನ್ನೆಲೆಯಲ್ಲಿ ಮಂಗಳವಾರ ಧ್ವಜಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಬೆಂಗಳೂರು ಶ್ರೀ ರಾಮಾನುಜ ಮಠದ ಶ್ರೀಗಳಾದ ತ್ರಿದಂಡಿ ವೆಂಕಟರಾಮಾನುಜ ಜಿಯರ್‌ ಕಾರ್ಯಕ್ರಮ ಕುರಿತು ಮಾತನಾಡಿ, ಕಳೆದ 25 ವರ್ಷಗಳ ಹಿಂದೆ ಶೋಷಿತರ ಪರವಾಗಿ ನಿಲ್ಲುವಂತಹ ಮಠಗಳ ನಿರ್ಮಾಣದ ಬಗ್ಗೆ ಕನಸು ಕಾಣುತ್ತಿದ್ದೇವು. ಈಗ ಆ ಕನಸು ನನಸಾಗಿದೆ. ಹಾಲುಮತ ಸಮಾಜ ಒಳಗೊಂಡಂತೆ ಎಲ್ಲ ಶೋಷಿತ ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿದೆ. ಆ ನಿಟ್ಟಿನಲ್ಲಿ ಶ್ರೀಮಠ ಹೆಚ್ಚು ಹೆಚ್ಚು ಕೆಲಸ ಮಾಡುತ್ತಿದೆ ಎಂದರು. ಶಿವಮೊಗ್ಗಾದ ಕುರುಬರ ಜಡೇದೇವರ ಮಠದ ಶ್ರೀಗಳಾದ ಅಮೋಘ ಸಿದ್ದೇಶ್ವರಾನಂದರು. ಸಮಾಜದ ಮುಖಂಡರಾದ ಎಲ್. ಸಿದ್ದನಗೌಡ, ಎಂ. ಪರಮೇಶ್ವರಪ್ಪ ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಆಧ್ಯಕ್ಷ ಜಿ. ಕೃಷ್ಣ, ಕನಕ ಗುರು ಪೀಠದ ಧರ್ಮದರ್ಶಿ ಗಾಜಿ ಗೌಡ್ರು, ಎಂ. ಪರಮೇಶ್ವರಪ್ಪ, ಹೊಳಲು ಜಿಪಂ ಸದಸ್ಯ ಕೊಟ್ರೇಶ್‌, ಹಿರೇಹಡಗಲಿ ಜಿಪಂ ಸದಸ್ಯೆ ವೀಣಾ ಪರಮೇಶ್ವರಪ್ಪ, ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಎರೆಗೌಡ ಇತರರು ಮಾತನಾಡಿದರು. ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯುವ ಗೊರವಯ್ಯ ರಾಮಣ್ಣ ಧ್ವಜಾರೋಹಣ ನೆರವೇರಿಸಿದರು. ಕರ್ನಾಟಕ ಪ್ರದೇಶ ಕುರುಬ ಸಮಾಜದ ನಿರ್ದೇಶಕ ಬಿ. ಹನುಮಂತಪ್ಪ ಮಾತನಾಡಿದರು. ತಾಲೂಕು ಕುರುಬ ಸಮಾಜದ ಆಧ್ಯಕ್ಷ ಎಚ್. ಬೀರಪ್ಪ, ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಗುರುಗಳಾದ ಗುರುವಿನ ಕೊಟ್ರಯ್ಯ, ತಾಪಂ ಸದಸ್ಯ ಈಟಿ ಲಿಂಗರಾಜು, ಫಕ್ಕೀರಮ್ಮ, ಗ್ರಾಪಂ ಅಧ್ಯಕ್ಷೆ ಸರೋಜಮ್ಮ, ಎಪಿಎಂಸಿ ಅಧ್ಯಕ್ಷ ಹನುಮಂತಪ್ಪ, ಅರ್‌ಎಸ್‌ಎಸ್‌ಎನ್‌ ಅಧ್ಯಕ್ಷ ಪಕ್ಕೀರಪ್ಪ, ಕನಕ ಕೋ ಆಪರೇಟಿವ್‌ ಬ್ಯಾಂಕ್‌ ಅಧ್ಯಕ್ಷ ಶಿವಮೂರ್ತೆಪ್ಪ, ಜಿಲ್ಲಾ ಕುರುಬ ಸಮಾಜದ ಉಪಾಧ್ಯಕ್ಷ ಈಟಿ ಹನುಮೇಶ ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next