Advertisement

ಹಟ್ಟಿ ಚಿನ್ನದ ಗಣಿ: 700 ಅಡಿ ಆಳದಲ್ಲಿ ಮಣ್ಣು ಕುಸಿದು ಕಾರ್ಮಿಕ ಸಾವು

02:01 PM Feb 18, 2022 | Team Udayavani |

ರಾಯಚೂರು: ಹಟ್ಟಿಚಿನ್ನದಗಣಿಯ ಅಧೀನದಲ್ಲಿ ಬರುವ ಊಟಿ ಚಿನ್ನದ ಗಣಿಯಲ್ಲಿ ಮಣ್ಣು ಕುಸಿದು ಕಾರ್ಮಿಕ ಮೃತಪಟ್ಟ ಘಟನೆ ಗುರುವಾರ ತಡರಾತ್ರಿ ಸಂಭವಿಸಿದೆ.

Advertisement

ಮೂರನೆ ಪಾಳಿಯಲ್ಲಿ ಗಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯಲ್ಲಪ್ಪ(40) ಮೃತಪಟ್ಟ ಕಾರ್ಮಿಕ. 700 ಅಡಿ ಗಣಿ ಆಳದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಮಣ್ಣು ಕುಸಿದು ಬಿದ್ದಿದ್ದರಿಂದ 800 ಅಡಿ ಆಳಕ್ಕೆ ಬಿದ್ದು, ತಲೆಗೆ ತೀವ್ರ ಪೆಟ್ಟಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ಕಾರ್ಮಿಕ ಟೆಕ್ನೋ ಮೈನ್ ಕನ್ಸಸ್ಟ್ರಕ್ಷನ್ ನಲ್ಲಿ ಗುತ್ತಿಗೆ ಆಧಾರದಲ್ಲಿ ಗಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಇನ್ನೊಬ್ಬ ಕಾರ್ಮಿಕ ಹನುಮಂತನಿಗೂ ಗಂಭೀರ ಗಾಯಗಳಾಗಿದ್ದು, ಹಟ್ಟಿ ಚಿನ್ನದ ಗಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next