Advertisement
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಉತ್ತರ ಪಿನಾಕಿನಿ ನದಿ ದಡದಲ್ಲಿರುವ ಪುಣ್ಯಕ್ಷೇತ್ರ “ವಿದುರಾಶ್ವತ್ಥ’ ವಿದುರ ನಾರಾಯಣ ಸ್ವಾಮಿ ದೇಗುಲದಿಂದ ಹೆಸರು ಪಡೆದ ಈ ಊರು ಹತ್ಯಾಕಾಂಡದ ಅನಂತರ ಸ್ವಾತಂತ್ರ್ಯ ಸಂಗ್ರಾ ಮದ ಕೇಂದ್ರ ಬಿಂದುವೂ ಆಗಿದೆ.
Related Articles
Advertisement
ಸಾರ್ವಜನಿಕ ಸಭೆಯಾಗಿ ಪರಿವರ್ತಿತವಾದ ಕಾಂಗ್ರೆಸ್ ಪಕ್ಷದ ಸಭೆ ಆರಂಭವಾಗುವ ಮುನ್ನವೇ ಶಸ್ತ್ರಸಜ್ಜಿತ ಪೊಲೀಸರು ವೇದಿಕೆಯನ್ನು ಸುತ್ತುವರಿದರು. ಯಾವುದೇ ಅಹಿತಕರ ಘಟನೆಗಳಿಗೂ ಅವಕಾಶ ನೀಡದೇ ಸಭೆ ನಡೆಸಲು ನಾಯಕರು ಮುಂದಾದರು.
ಆದರೆ ಸಭೆಗೆ ಅವಕಾಶ ನೀಡಬಾರದೆಂದು ಆಗಿನ ಅಮಲ್ದಾರ್ ರಾಜಶೇಖರ ಒಡೆಯರ್ ತೀರ್ಮಾನಿಸಿದರು. ಜನ ಕದಲಲಿಲ್ಲ. ಈ ಸಭೆಯ ನೇತೃತ್ವ ವಹಿಸಿದ್ದವರನ್ನೂ ಬಂಧಿಸಲಾಯಿತು. ಪೊಲೀಸರ ಆರ್ಭಟಕ್ಕೆ ಬೆಚ್ಚದೇ ಜನ ಅಲ್ಲೇ ಕುಳಿತರು, ಪೊಲೀಸರು ಮೊದಲು ಲಾಠಿ ಪ್ರಹಾರ ನಡೆಸಿದರು. ಬಳಿಕ 20 ನಿಮಿಷಗಳ ಕಾಲ ಜನರ ಮೇಲೆ ಗುಂಡು ಹಾರಿಸಲಾಯಿತು. ಒಟ್ಟು 92 ಸುತ್ತು ಗುಂಡು ಹಾರಿಸಲಾಯಿತು. ಆದರೆ ಮದ್ದು ಮುಗಿದದ್ದರಿಂದ ಈ ಹತ್ಯಾಕಾಂಡ 20 ನಿಮಿಷಗಳಲ್ಲೇ ಮುಗಿಯಿತು. ಆದರೆ ಈ ಹತ್ಯಾಕಾಂಡದಲ್ಲಿ ಮಡಿದರೆಷ್ಟು, ಗಾಯಗೊಂಡವರೆಷ್ಟು ಎಂಬ ಬಗ್ಗೆ ಲೆಕ್ಕವೇ ಸಿಗಲಿಲ್ಲ. ಆದರೂ, 32 ಮಂದಿ ಸಾವನ್ನಪ್ಪಿದರು, 148 ಮಂದಿ ತೀವ್ರವಾಗಿ ಗಾಯಗೊಂಡಿದ್ದರು ಎಂದು ಕೆಲವು ವರದಿಗಳು ಹೇಳುತ್ತವೆ.
ಇಡೀ ರಾಷ್ಟ್ರದ ಗಮನ ಸೆಳೆದ ವಿದುರಾಶ್ವತ್ಥದ ಹತ್ಯಾಕಾಂಡದ ವಿವರ ತಿಳಿಯಲು ಆಗಿನ ಅಖೀಲ ಕಾಂಗ್ರೆಸ್ ಕಾರ್ಯದರ್ಶಿ ಸರ್ದಾರ್ ವಲ್ಲಭಭಾಯಿ ಪಟೇಲ್, ಜೆ.ಬಿ.ಕೃಪಲಾನಿ ವಿದುರಾಶ್ವತ್ಥಕ್ಕೆ ಆಗಮಿಸಿ ದರು. ಈ ಬಗ್ಗೆ ಹಲವು ಪ್ರತಿಭಟನೆಗಳು ನಡೆದಿದ್ದರಿಂದ ಸರಕಾರವು ಪ್ರಕರಣದ ತನಿಖೆ ನಡೆಸಲು ಸಮಿತಿ ಯೊಂದನ್ನು ರಚಿಸಿತು.
ಮೈಸೂರು ಕಾಂಗ್ರೆಸ್ ಈ ದಾರುಣ ಘಟನೆಯ ಅನಂತರ ಸ್ವಾತಂತ್ರ್ಯ ಚಳವಳಿ ತೀವ್ರಗೊಳಿಸಿತು. ವಿದುರಾಶ್ವತ್ಥ ಘಟನೆಯ ಬಳಿಕ ಗಾಂಧಿ ಅವರು ಮೈಸೂರು ಕಾಂಗ್ರೆಸ್‌ನೊಂದಿಗೆ ಹೆಚ್ಚಿನ ಸಂಪರ್ಕ ಇಟ್ಟುಕೊಂಡರು. ಮುಂದಿನ ವರ್ಷ 1939ರಲ್ಲಿ ಅಖೀಲ ಮೈಸೂರು ಕಾಂಗ್ರೆಸ್ ಮಹಾ ಅಧಿವೇಶನವನ್ನು ಎಚ್.ಸಿ. ದಾಸಪ್ಪ ಅವರ ಅಧ್ಯಕ್ಷತೆಯಲ್ಲಿ ವಿದು ರಾಶ್ವತ್ಥದಲ್ಲೇ ನಡೆಸಲಾಯಿತು.
ಪ್ರೌಢಶಾಲೆ ಆರಂಭ :
ದೇಶದ ಸ್ವಾತಂತ್ರ್ಯಕ್ಕಾಗಿ ಆಂಗ್ಲರ ಕುಕೃತ್ಯ, ದಬ್ಬಾಳಿಕೆಯ ವಿರುದ್ಧ ಸೆಟೆದು ನಿಂತು ಪ್ರಾಣ ತೆತ್ತ ಯೋಧರ ಸ್ಮರಣಾರ್ಥ ವಿದುರಾಶ್ವತ್ಥದಲ್ಲಿ 1973ರ ಅ.2ರಂದು ಹುತಾತ್ಮರ ಸ್ಮಾರಕ ವನ್ನು ನಿರ್ಮಿಸಲಾಗಿದೆ. ಇದರ ನೆನಪಿ ನಲ್ಲಿ ಸತ್ಯಾಗ್ರಹ ಸ್ಮಾರಕ ಪ್ರೌಢಶಾಲೆ ಆರಂಭಿಸಲಾಯಿತು.
-ಗಣೇಶ್ ವಿ.ಡಿ.