Advertisement

ಹಸ್ಮುಖ್ ಅಧಿಯಾ ಹೊಸ ವಿತ್ತ ಕಾರ್ಯದರ್ಶಿ

06:30 AM Nov 07, 2017 | Harsha Rao |

ಹೊಸದಿಲ್ಲಿ: ಕಂದಾಯ ಕಾರ್ಯದರ್ಶಿಯಾಗಿದ್ದ ಹಸ್ಮುಖ್ ಅಧಿಯಾ ಅವರನ್ನು ವಿತ್ತ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಸರಕಾರ ಸೋಮವಾರ ಆದೇಶ ಹೊರಡಿಸಿದೆ. ಅಧಿಯಾ ಗುಜರಾತ್‌ ಕೇಡರ್‌ನ 1981ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿ. ಕಳೆದ ತಿಂಗಳು ಅಶೋಕ್‌ ಲಾವಸಾ ನಿರ್ಗಮನದಿಂದ ತೆರವಾದ ಹುದ್ದೆಗೆ ಇದೀಗ ಅಧಿಯಾ ಅವರ ನೇಮಕವಾಗಿದೆ. ಸಂಪುಟ ನೇಮಕಾತಿ ಸಮಿತಿ ಅಧಿಯಾರನ್ನು ವಿತ್ತ ಕಾರ್ಯದರ್ಶಿಯನ್ನಾಗಿ ನೇಮಕ ಮಾಡುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ಸಿಬಂದಿ ಮತ್ತು ತರಬೇತಿ ಇಲಾಖೆ ಪ್ರಕಟಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next