ಸ್ವಚ್ಛಂದ ಪಕ್ಷಿಯಂತೆ ಆಡಿಕೊಂಡಿದ್ದ ಹುಡುಗಿಯರಿಗೆ ಮದುವೆ ಒಂದು ಬಂಧನವಾಗುತ್ತದೆ. ಆಗೆಲ್ಲಾ ಮದುವೆಗಿಂತ ಮುಂಚೆಯೇ ಲೈಫ್ ಚೆನ್ನಾಗಿತ್ತು ಎಂದು ಪದೇಪದೆ ತಮ್ಮ ಹಳೆಯ ಜೀವನವನ್ನು ನೆನಪಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಇಂಥ ಆಲೋಚನೆಗಳೇ ಬೆಳೆದು ದೊಡ್ಡದಾಗಿ, ದಾಂಪತ್ಯ ವಿರಸಕ್ಕೂ ಕಾರಣವಾಗುತ್ತದೆ. ಆ ವಿರಸವನ್ನು ತಡೆಯುವ ಎಲ್ಲ ಶಕ್ತಿಯೂ ಗಂಡನಿಗಿದೆ. ಹೇಗೆ ಗೊತ್ತಾ?
ಚಿಕ್ಕ ಚಿಕ್ಕ ವಿಷಯಕ್ಕೆ ಮುನಿಸಿಕೊಳ್ಳುವ ಮುನ್ನ ಸಂಬಂಧದ ಮಹತ್ವ ತಿಳಿಯಬೇಕು. “ನಾನು’ ಎನ್ನುವ ಅಹಂಕಾರದ ಬದಲು, “ನಾವು’ ಎಂಬ ಪ್ರೀತಿಯ ಭಾವನೆ ಮೂಡಬೇಕು.
ಪತ್ನಿಯ ಭಾವನೆಗಳಿಗೆ ಗಂಡಂದಿರು ಆದಷ್ಟು ಬೆಲೆ ಕೊಡಬೇಕು. ನೀವು ಕಿವಿಯಾದರಷ್ಟೇ, ಆಕೆಯ ಮನಸ್ಸು ಹಗುರವಾಗುವುದು.
ಮದುವೆಯ ನಂತರ ಹೆಣ್ಣು ಹೊಸದೊಂದು ಲೋಕವನ್ನು ಪ್ರವೇಶಿಸುತ್ತಾಳೆ. ಅಲ್ಲಿ ಆಕೆಗೆ ಎಲ್ಲವೂ ಹೊಸತು. ಅತ್ತೆ- ಮಾವ, ಗಂಡ ಎಲ್ಲರೂ ಒಂದರ್ಥದಲ್ಲಿ ಅಪರಿಚಿತರೇ. ಅದುವರೆಗೂ ಓದು, ಕೆಲಸ, ಫ್ರೆಂಡ್ಸ್, ಸುತ್ತಾಟ ಎನ್ನುತ್ತಿದ್ದ, ಸ್ವತ್ಛಂದ ಪಕ್ಷಿಯಂತೆ ಆಡಿಕೊಂಡಿದ್ದ ಹುಡುಗಿಯರಿಗೆ ಮದುವೆ ಒಂದು ಬಂಧನವಾಗುತ್ತದೆ. ಆಗೆಲ್ಲಾ ಮದುವೆಗಿಂತ ಮುಂಚೆಯೇ ಲೈಫ್ ಚೆನ್ನಾಗಿತ್ತು ಎಂದು ಪದೇಪದೆ ತಮ್ಮ ಹಳೆಯ ಜೀವನವನ್ನು ನೆನಪಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಇಂಥ ಆಲೋಚನೆಗಳೇ ಬೆಳೆದು ದೊಡ್ಡದಾಗಿ, ದಾಂಪತ್ಯ ವಿರಸಕ್ಕೆ, ವಿಚ್ಛೇದನಕ್ಕೆ ದಾರಿ ಮಾಡಿಕೊಡುತ್ತವೆ.
ಇದಕ್ಕೆ ಕಾರಣವೂ ಉಂಟು. ಅಲ್ಲಿ ಪತಿ ಒಬ್ಬ ಒಳ್ಳೆಯ ಫ್ರೆಂಡ್ ಅಗಿರುವುದಿಲ್ಲ. ಹೆಣ್ಣು ತನ್ನ ಪತಿಯಲ್ಲಿ ಉತ್ತಮ ಸ್ನೇಹಿತನನ್ನು ಬಯಸುತ್ತಾಳೆ. ಆದರೆ, ಎಲ್ಲ ಗಂಡಂದಿರೂ ತಮ್ಮ ಪತ್ನಿಯರೊಡನೆ ಮುಕ್ತವಾಗಿ ಮಾತಾಡುವುದಿಲ್ಲ. ಇಂಥ ಸಂದರ್ಭಗಳಲ್ಲಿ ಹೆಂಡತಿಗೆ ಒಂಟಿತನ ಕಾಡುತ್ತದೆ. ತವರು ಮನೆಯ ಮುಕ್ತ ವಾತಾವರಣ, ಸ್ನೇಹಿತರ ಸಾಂಗತ್ಯ ಬೇಕೆನಿಸುತ್ತದೆ. ಹೆಂಡತಿ ಮೇಲಿಂದ ಮೇಲೆ ತವರಿನ ಜಪ ಮಾಡುವುದು ಪತಿಗೆ ಕಿರಿಕಿರಿ ತರಿಸುತ್ತದೆ. ಮುಂದೆ ಈ ಕಿರಿಕಿರಿಗಳಿಂದಲೇ ಜಗಳ ಆರಂಭವಾಗಿ ವಿಚ್ಛೇದನದಲ್ಲಿ ಅಂತ್ಯ ಕಾಣುತ್ತದೆ. ಮದುವೆ ಹೀಗೆ ಅಂತ್ಯ ಕಾಣಬಾರದೆಂದರೆ ಪತಿಯಾದವನು ಏನು ಮಾಡಬೇಕು ಗೊತ್ತೇ?
ಪತಿಯಲ್ಲೊಬ್ಬ ಗೆಳೆಯನಿದ್ದರೆ…
ಒಬ್ಬ ಉತ್ತಮ ಪತಿಯಾಗುವ ಮುನ್ನ ನೀವು ಆಕೆಗೆ ಒಳ್ಳೆಯ ಫ್ರೆಂಡ್ ಆಗಿ. ತವರಿನಿಂದ ಬಂದ ಆಕೆಗೆ ನಿಮ್ಮ ಮನೆಯಲ್ಲಿ ಮುಕ್ತ ವಾತಾವರಣ ನಿರ್ಮಿಸಿ. ನಿಮ್ಮ ತಾಯಿ- ತಂದೆಯೊಂದಿಗೆ ಆಕೆ ಹೊಂದಿಕೊಳ್ಳುವವರೆಗೆ ಅವಳ ಬೆನ್ನೆಲುಬಾಗಿ ನಿಲ್ಲಿ. ಒಬ್ಬ ಫ್ರೆಂಡ್‌ನಂತೆ ಆಕೆಯ ಇಷ್ಟ- ಕಷ್ಟಗಳನ್ನು ಕೇಳಿ ತಿಳಿಯಿರಿ. ಕೆಲಸದ ಒತ್ತಡ ಎಷ್ಟಿದ್ದರೂ ಪತ್ನಿಗಾಗಿ ಒಂದು ಗಂಟೆಯನ್ನಾದರೂ ಮೀಸಲಿಡಿ.
ಕಿರು ಪ್ರವಾಸ ಕೈಗೊಳ್ಳಿ
ನಿಮ್ಮ ಮನೆ- ಮನಕ್ಕೆ ಹೊಸ ಅತಿಥಿಯಾಗಿ ಬಂದ ನಿಮ್ಮ ಮಡದಿಗಾಗಿ ಆಗಾಗ ಕಿರು ಪ್ರವಾಸ ಕೈಗೊಳ್ಳಿ. ಇದರಿಂದಾಗಿ ಸ್ಥಳದ ಬದಲಾವಣೆಯ ಜೊತೆಗೆ ನಿಮಗೂ ಏಕಾಂತದ ವಾತಾವರಣ ಸಿಗುತ್ತದೆ. ಆಕೆಯ ಅಭಿಪ್ರಾಯಗಳಿಗೂ ಮನ್ನಣೆ ಕೊಡಿ. ಪತ್ನಿಯ ಭಾವನೆಗಳಿಗೆ ಗಂಡಂದಿರು ಆದಷ್ಟು ಬೆಲೆ ಕೊಡಬೇಕು. ನೀವು ಕಿವಿಯಾದರಷ್ಟೇ, ಆಕೆಯ ಮನಸ್ಸು ಹಗುರವಾಗುವುದು.
ಪತಿ- ಪತ್ನಿ ಎಂಬ ಸುಂದರ ಸಂಬಂಧ ಬಹಳ ಅಮೂಲ್ಯವಾದದ್ದು. ಇಲ್ಲಿ ಸ್ನೇಹದ ಸೆಳೆತದ ಜೊತೆಗೆ ಪ್ರೀತಿಯ ಮಿಡಿತವೂ ಇರಬೇಕು. ಚಿಕ್ಕ ಚಿಕ್ಕ ವಿಷಯಕ್ಕೆ ಮುನಿಸಿಕೊಳ್ಳುವ ಮುನ್ನ ಸಂಬಂಧದ ಮಹತ್ವ ತಿಳಿಯಬೇಕು. “ನಾನು’ ಎನ್ನುವ ಅಹಂಕಾರದ ಬದಲು, “ನಾವು’ ಎಂಬ ಪ್ರೀತಿಯ ಭಾವನೆ ಮೂಡಬೇಕು. ಆಗ ಖಂಡಿತವಾಗಿಯೂ ಬದುಕು ಸುಂದರವಾಗುತ್ತದೆ.
ಕಾವ್ಯ ಎಚ್.ಎನ್., ದಾವಣಗೆರೆ