Advertisement

ಪತಿ ಡೈನಿಂಗ್‌ ಟೇಬಲ್‌ ತರಲಿಲ್ಲ ಎಂದು ಪತ್ನಿ ಆತ್ಮಹತ್ಯೆ

12:51 PM Nov 09, 2021 | Team Udayavani |

ನಾಗಪುರ: ದೀಪಾವಳಿಯಂದು ಪತಿ ಡೈನಿಂಗ್‌ ಟೇಬಲ್‌ ತರಲಿಲ್ಲ ಎಂದು ಪತ್ನಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಡ್ಕೇಶ್ವರ ಪೊಲೀಸ್‌ ಠಾಣೆ ವ್ಯಾಪ್ತಿಯ ಟೇಕ್‌ ಆಫ್‌ ಸಿಟಿ ಪರಿಸರದಲ್ಲಿ  ಸಂಭವಿಸಿದೆ. ಮೃತ ಮಹಿಳೆಯನ್ನು ಸಂಗೀತಾ ರಾಜನ್‌ ಪಾಟೀಲ್‌ ಎಂದು ಗುರುತಿಸಲಾಗಿದೆ.

Advertisement

ಸಂಗೀತಾ ಅವರ ಪತಿ ರಾಜನ್‌ ಖಾಸಗಿಯಾಗಿ ಕೆಲಸ ಮಾಡುತ್ತಿದ್ದಾರೆ. ದೀಪಾವಳಿಯಂದು ಡೈನಿಂಗ್‌ ಟೇಬಲ್‌ ತರುವಂತೆ ಸಂಗೀತಾ ಪತಿಗೆ ಪದೇ ಪದೇ ಒತ್ತಾಯಿಸುತ್ತಿದ್ದಳು. ಆದರೆ ಬಜೆಟ್‌ ಕೊರತೆಯಿಂದ ಕೆಲವು ದಿನಗಳ ಬಳಿಕ ಡೈನಿಂಗ್‌ ಟೇಬಲ್‌ ತರುತ್ತೇನೆ ಎಂದು ಸಂಗೀತಾಗೆ ರಾಜನ್‌ ಹೇಳಿದ್ದ. ಆದರೆ ಅಸಮಾಧಾನಗೊಂಡ ಸಂಗೀತಾ ಶನಿವಾರ ಅಪರಾಹ್ನ 4 ಗಂಟೆ ಸುಮಾರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಜೇಂದ್ರ ಶಂಕರ ಪಾಟೀಲ್‌ ನೀಡಿದ ಮಾಹಿತಿ ಮೇರೆಗೆ ಹುಕ್ಕೇಕೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next