Advertisement

ಆಸಿಡ್ ದಾಳಿಯಲ್ಲಿ ಅಂತ್ಯವಾಯಿತು ದಂಪತಿ ಕಲಹ

10:14 AM Oct 30, 2019 | Team Udayavani |

ಅಗರ್ ಮಾಲ್ವಾ: ದಂಪತಿಗಳಿಬ್ಬರ ಜಗಳ ಪತ್ನಿಯ ಮೇಲೆ ಆಸಿಡ್ ಎರಚುವುದರ ಮೂಲಕ ಅಂತ್ಯ ಕಂಡ ಘಟನೆ ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯ ಮೆಹ್ತಾಪುರ್ ನಲ್ಲಿ ನಡೆದಿದೆ.

Advertisement

ಆಸಿಡ್ ದಾಳಿಯಿಂದಾಗಿ 25 ವರ್ಷದ ಮಹಿಳೆಯ ಮುಖದ ಬಹಳಷ್ಟು ಭಾಗ ಕರಟಿ ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಮನು ಸಿಂಗ್ ಎಂಬಾತ ಆಸಿಡ್ ಎರಚಿದ ಆರೋಪಿ. ಆತನ ಪತ್ನಿ ಮಲಗಿದ್ದ ವೇಳೆ ಈ ಕೃತ್ಯ ನಡೆಸಿದ್ದಾನೆ.

ದಂಪತಿಗಳ ಜಗಳವೇ ಇದಕ್ಕೆ ಕಾರಣ ಎಂದು ತಿಳಿದುಬಂದಿದ್ದು, ಆರೋಪಿ ಮನು ಸಿಂಗ್ ಪರಾರಿಯಾಗಿದ್ದಾನೆ.

ಆರೋಪಿಯ ವಿರುದ್ಧ ಸೆಕ್ಷನ್ 307 ಮತ್ತು 326 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next