Advertisement

ಶೀಲ ಶಂಕಿಸಿ ಸೊಂಟದ ಬೆಲ್ಟ್ ನಿಂದ ಕತ್ತು ಬಿಗಿದು ಪತ್ನಿ ಕೊಲೆಗೈದ ಪತಿ ಬಂಧನ

11:35 AM Mar 10, 2022 | Team Udayavani |

ಬೆಂಗಳೂರು: ಶೀಲ ಶಂಕಿಸಿ ಸೊಂಟದ ಬೆಲ್ಟ್ ನಿಂದ ಪತ್ನಿಯ ಕತ್ತು ಬಿಗಿದು ಕೊಲೆಗೈದಿರುವ ಘಟನೆ ಎಚ್‌ಎಎಲ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿ ಪತಿಯನ್ನು ಬಂಧಿಸಲಾಗಿದೆ.

Advertisement

ಎಚ್‌ಎಎಲ್‌ನ ಕಾಳಪ್ಪ ಲೇಔಟ್‌ ನಿವಾಸಿ ನೀಲ ಕಂಠ(43) ಬಂಧಿತ. ಆರೋಪಿ ಮಾ.8ರಂದು ಪತ್ನಿ ನಾಗಮ್ಮ (36) ರನ್ನು ಕತ್ತು ಬಿಗಿದು ಕೊಲೆಗೈದಿದ್ದ.

ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ರಾಯಚೂರು ಮೂಲದ ನೀಲಕಂಠ ದಂಪತಿ, ಐದಾರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಎಚ್‌ಎಎಲ್‌ನ ಕಾಳಪ್ಪ ಲೇಔಟ್‌ನಲ್ಲಿ ವಾಸವಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ನೀಲಕಂಠ ಕ್ಯಾಬ್‌ ಚಾಲಕನಾಗಿದ್ದು, ನಾಗಮ್ಮ ಖಾಸಗಿ ಕಂಪನಿಯಲ್ಲಿ ಹೌಸ್‌ ಕಿಪಿಂಗ್‌ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: ಮೋಜಿನ ಜೀವನಕ್ಕೆ ವಿದ್ಯಾರ್ಥಿಗಳ ಬಲಿ ಕೊಡುತ್ತಿದ್ದ  ಪ್ರೇಮಿಗಳು!

ಈ ನಡುವೆ ನೀಲಕಂಠ ಪತ್ನಿ ಶೀಲ ಶಂಕಿಸಿ ನಿತ್ಯ ಗಲಾಟೆ ಮಾಡುತ್ತಿದ್ದ. ಅದರಿಂದ ಬೇಸತ್ತಿದ್ದ ನಾಗಮ್ಮ ಪತಿಗೆ ವಿಚ್ಛೇದನ ಕೊಡಲು ಮುಂದಾಗಿದ್ದರು. ಅದರಿಂದ ಆಕ್ರೋಶಗೊಂಡ ಆರೋಪಿ ಮಂಗಳವಾರ ರಾತ್ರಿ ಮದ್ಯದ ಅಮಲಿಲ್ಲಿ ಮನೆಗೆಬಂದು ಮತ್ತೆ ಜಗಳ ತೆಗೆದಿದ್ದಾನೆ. ಬಳಿಕ ಸೊಂಟದ ಬೆಲ್ಟ್ ನಿಂದ ಪತ್ನಿಯ ಕುತ್ತುಹಿಸುಕಿ ಕೊಲೆಗೈದಿದ್ದಾನೆ.

Advertisement

ಅದನ್ನು ಕಂಡ ಇಬ್ಬರು ಮಕ್ಕಳು ಮನೆ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಮಾಲೀಕರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಎಚ್‌ಎಎಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next