Advertisement

ತ್ರಿವಳಿ ತಲಾಖ್‌ ನೀಡಿ,ಪೊಲೀಸರಿಗೆ ಅತಿಥಿಯಾದ!

08:23 AM Aug 12, 2019 | Team Udayavani |

ಹೊಸದಿಲ್ಲಿ: ತ್ರಿವಳಿ ತಲಾಖ್‌ ವಿರೋಧಿ ವಿಧೇಯಕ ಅಂಗೀಕಾರವಾದ ಬೆನ್ನಲ್ಲೇ, ಪತ್ನಿಗೆ ತ್ರಿವಳಿ ತಲಾಖ್‌ ನೀಡಿದ ವ್ಯಕ್ತಿಯೊಬ್ಬನ ಬಂಧನವಾಗಿದೆ.

Advertisement

ಈ ಕುರಿತಂತೆ 29 ವರ್ಷದ ಮಹಿಳೆ ಶುಕ್ರವಾರ ಪೊಲೀಸರಿಗೆ ದೂರು ನೀಡಿದ್ದು ಆಕೆಯ ಪತಿ ಶಮೀನ್‌ ಎಂಬಾತನ ಬಂಧನವಾಗಿದೆ. ಅವರಿಬ್ಬರೂ 2011ರಲ್ಲಿ ವಿವಾಹವಾಗಿದ್ದರು.

ಕಳೆದ ಜೂ.23ರಂದು ತನ್ನ ಪತಿ ತ್ರಿವಳಿ ತಲಾಖ್‌ ನೀಡಿದ್ದು, ವಾಟ್ಸಪ್‌ ಮೂಲಕ ಘಟನೆ ಬಗ್ಗೆ ಫ‌ತ್ವಾ ಕೂಡ ನೀಡಿದ್ದ ಎಂದು ಮಹಿಳೆ ಹೇಳಿದ್ದಾಳೆ.

ಮಹಿಳೆಯ ದೂರಿನ ಮೇರೆಗೆ ಮುಸ್ಲಿಂ ಮಹಿಳೆ (ವೈವಾಹಿಕ ರಕ್ಷಣಾ ಹಕ್ಕು ಕಾಯ್ದೆ)ಯ ಸೆ.4 ರನ್ವಯ ಶಮೀನ್‌ ಮೇಲೆ ಕೇಸು ದಾಖಲಿಸಲಾಗಿದೆ. ಅನಂತರ ಆತನನ್ನು ಬಂಧಿಸಿಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next