Advertisement

ಶಿವಮೊಗ್ಗ: ಪತ್ನಿ ಸೀಮಂತಕ್ಕೆ ಆಹ್ವಾನಿಸಿದ್ದಕ್ಕೆ ಮನೆ ಬಿಟ್ಟು ನಾಪತ್ತೆಯಾದ ಪತಿ!

10:20 PM Aug 04, 2022 | Suhan S |

ಶಿವಮೊಗ್ಗ: ಪತಿಯನ್ನು ನನ್ನ ಸೀಮಂತ ಕಾರ್ಯಕ್ಕೆ ಬನ್ನಿ ಎಂದು ಕರೆದದ್ದು ಪತ್ನಿ, ಆದರೆ ಅದನ್ನು ತಿರಸ್ಕರಿಸಿದ ಪತಿ ಮನೆಯನ್ನು ಬಿಟ್ಟು ನಾಪತ್ತೆಯಾದ ಘಟನೆ ಆರ್‌ಎಂಎಲ್‌ ನಗರದಲ್ಲಿ ಸಂಭವಿಸಿದೆ.

Advertisement

ಆರ್‌ಎಂಎಲ್‌ ನಗರದ ಯುವಕ ಗಾರ್ಡನ್‌ ಏರಿಯಾದ ಯುವತಿಯನ್ನು ಮದುವೆಯಾಗಿದ್ದು, ಪತ್ನಿ ಹೆರಿಗೆಗೆ ತವರು ಮನೆಗೆ ತೆರಳಿದ್ದರು. ಸಂಪ್ರದಾಯದಂತೆ ತವರು ಮನೆಯಲ್ಲಿ ಗರ್ಭಿಣಿಗೆ ಸೀಮಂತ ಶಾಸ್ತ್ರ ನಿಗದಿಯಾಗಿತ್ತು. ಪತ್ನಿಯೇ ಪತಿಗೆ ಕರೆ ಮಾಡಿ ಸೀಮಂತ ಶಾಸ್ತ್ರಕ್ಕೆ ಬನ್ನಿ ಎಂದು ಕರೆದಿದ್ದಳು. ಆದರೆ ಪತ್ನಿಯ ಅಹ್ವಾನವನ್ನು ತಿರಸ್ಕರಿಸಿದ್ದ ಯುವಕ ಅನಂತರ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿ ಮನೆಯನ್ನೇ ಬಿಟ್ಟು ಹೋಗಿದ್ದಾನೆ.

*****************************************************************************

ಕ್ಷುಲ್ಲಕ ಕಾರಣ: ತಮ್ಮನ ಮೇಲೆ ಗುಂಡೇಟು :

ಶಿವಮೊಗ್ಗ: ಭದ್ರಾವತಿ ತಾಲೂಕಿನ ಸಿದ್ಧರಮಟ್ಟಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಅಣ್ಣನೇ ನಾಡಬಂದೂಕಿನಿಂದ ತಮ್ಮನ ಮೇಲೆ ಗುಂಡು ಹಾರಿಸಿದ್ದು, ತೊಡೆಗೆ ಗುಂಡು ತಗಲಿದೆ.

Advertisement

ಸಿದ್ದರಮಟ್ಟಿಯ ಬ್ಲಾಕ್‌ ಗ್ರಾಮದ ಮುರುಗೇಶ್‌ (35) ಗಾಯಗೊಂಡವರು. ಆತನ ಅಣ್ಣ ಮುನಿಸ್ವಾಮಿ ಗುಂಡು ಹಾರಿಸಿದವ.

ಜಮೀನಿಗೆ ಹೋಗುವ ಮಾರ್ಗದಲ್ಲಿ ಹೂವಿನ ಗಿಡಗಳನ್ನು ನೆಡಲಾಗಿದೆ ಎಂದು ಆರೋಪಿಸಿ ಮುನಿಸ್ವಾಮಿ, ಸಹೋದರ ಮುರುಗೇಶ್‌ ಅವರ ಪತ್ನಿ ಮತ್ತು ಸಂಬಂಧಿ ಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಇದರಿಂದ ಸಿಟ್ಟಿಗೆದ್ದ ಮುನಿಸ್ವಾಮಿ ಮನೆಯಲ್ಲಿದ್ದ ನಾಡಬಂದೂಕು ತಂದು ತಮ್ಮನಿಗೇ ಗುಂಡು ಹಾರಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next