Advertisement

ತಡಕಲ್‌ ಗ್ರಾಮ ಪಂಚಾಯತ್‌ನಲ್ಲಿ ಪತಿ-ಪತ್ನಿಗೆ ಗೆಲುವು

03:14 PM Jan 02, 2021 | Team Udayavani |

ಆಳಂದ: ತಡಕಲ್‌ ಗ್ರಾಪಂ ವ್ಯಾಪ್ತಿಯ ಕಣಮಸ್‌ ಗ್ರಾಮದಲ್ಲಿ ಪತಿ-ಪತ್ನಿಯರು ಗೆಲುವು ಸಾಧಿಸಿದ್ದಾರೆ. ಕಣಮಸ್‌ ಗ್ರಾಮದ ವಾರ್ಡ್‌ ಸಾಮಾನ್ಯ ಸ್ಥಾನಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ನಾಗೇಂದ್ರ ಥಂಬೆ ಅವರು ಸ್ಪರ್ಧಿಸಿ 507 ಮತಗಳು ಪಡೆದು 2ನೇ ಬಾರಿಗೆ ಗೆಲವು ಸಾಧಿಸಿದ್ದಾರೆ. ಅವರ ಪತ್ನಿ ಪಾರ್ವತಿ ನಾಗೇಂದ್ರ ಥಂಬೆ ಮತ್ತೂಂದಡೆ ಸಾಮಾನ್ಯ ಮಹಿಳಾ ಸ್ಥಾನಕ್ಕೆ ಸ್ಪರ್ಧಿಸಿ 453 ಮತ ಪಡೆದು ವಿಜಯ ಸಾಧಿಸಿದ್ದಾರೆ.

Advertisement

ತಡಕಲ ಗ್ರಾಮದ ರೈತ, ಕಾರ್ಮಿಕ ಹೋರಾಟದಲ್ಲಿ ತೋಡಗುತ್ತಲೇ ಎರಡು ಬಾರಿ ಸೋಲನುಭವಿಸಿದ್ದಕಲ್ಯಾಣಿ ತುಕಾಣೆ ಅವರ ಪತ್ನಿ ಮಹಾನಂದ ತುಕಾಣೆಅವರು ಈ ಬಾರಿ 27 ಮತ ಗಳಿಂದ ಗೆಲುವು ಸಾಧಿ ಸಿದ್ದಾರೆ. ಇದೇ ಗ್ರಾಮದ ಔಷಧ  ವ್ಯಾಪಾರಿ ವಿಶ್ವನಾಥ ಬಸವರಾಜಪವಾಡಶೆಟ್ಟಿ ಗೆಲುವು ಸಾಧಿಸಿದ್ದಾರೆ. ಉದ್ಯೋಗ ಖಾತ್ರಿಕಾರ್ಮಿಕ ಬಂಧು ದಲಿತ ಬಡಾವಣೆಯ ಬಸವರಾಜ ಬೆಳಮಗಿಗೆ ಮತದಾರರು ಕೈಹಿಡಿದ್ದಾರೆ.

ಕಾರ್ಮಿಕ ಬಂದು ಗೆಲುವು: ಕಿಣ್ಣಿ ಸುಲ್ತಾನ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಸಾಲೇಗಾಂವ ಗ್ರಾಮದಲ್ಲಿ ಕಾರ್ಮಿಕ ಬಂದು ಶರಣಪ್ಪ ಕುಂಬಾರ ಎಂಬುವ ವ್ಯಕ್ತಿ ಪಕ್ಷೇತ್ರನ್ನಾಗಿ ಜಯಶಾಲಿಯಾಗಿ ದ್ದಾನೆ. ಇದೇ ಗ್ರಾಮದಕೃಷ್ಣಾ ಕಾಂಬಳೆ ಎಂಬುವ ವ್ಯಕ್ತಿ ಮೀಸಲು ಕ್ಷೇತ್ರದ ಬದಲು ಸಾಮಾನ್ಯ ಕ್ಷೇತ್ರದಲ್ಲಿ ಗೆಲುವು ಸಾ ಧಿಸಿದ್ದು,ಕಾಂಬಳೆಯವರ ಅದೃಷ್ಟದ ಬಾಗಿಲು ಮತ್ತೂಮ್ಮೆತೆರೆದುಕೊಂಡಿದೆ. ಕಳೆದ ಬಾರಿ ಸೋತ್ತಿದ್ದ ಸಾಲೇಗಾಂವ ಗ್ರಾಮದ ಕುಪೇಂದ್ರ ವಡಗಾಂವ ಅವರನ್ನು ಈ ಬಾರಿ ಮತದಾರರು ಕೈ ಹಿಡಿದಿದ್ದಾರೆ.

ಕೊರಳ್ಳಿ ಗ್ರಾಮದ ವಾರ್ಡ್‌ 2ರಲ್ಲಿ ಗುರುರಾಜ ಶಶಿಕಾಂತ ಪಾಟೀಲ ಅವರು 571 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಲಕ್ಷ್ಮಣ ಎಂಬುವರಿಗೆ ಕೇವಲ137 ಮತಗಳು ಪಡೆದಿದ್ದು, ಗುರುರಾಜ್‌ ಅವರು ತಾಲೂಕಿನಲ್ಲೇ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಪಡೆದಿರುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next