Advertisement
ಪ್ರತ್ಯಕ್ಷದರ್ಶಿಗಳು ಹೇಳುವಂತೆ, ಇವರು ಸರೋವರಕ್ಕಿಳಿದ ವೇಳೆ ಹಾರ್ವೆ ಚಂಡ ಮಾರುತದ ಸುಳಿವು ಇರಲಿಲ್ಲ. ಏಕಾಏಕಿ ಯಾಗಿ ಚಂಡಮಾರುತ ಅಪ್ಪಳಿಸಿದೆ. ಒಮ್ಮೆಲೇ ಸರೋವರದ ನೀರಿನಲ್ಲಿ ಉಂಟಾದ ಅಬ್ಬರ ಇಬ್ಬರನ್ನೂ ಸರೋವರದ ಆಳಕ್ಕೆ ಒಯ್ದಿದೆ. ಇಬ್ಬರೂ ಅಪಾಯದಲ್ಲಿರುವುದನ್ನು ಅರಿತು ಅಲ್ಲಿದ್ದವರು ಸಹಾಯಕ್ಕಾಗಿ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಪೊಲೀಸರು ಅವರನ್ನು ರಕ್ಷಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಮುಂದಿನ ಚಿಕಿತ್ಸೆ ಕೊಡಿಸಿದ್ದಾರೆ. 3 ದಿನಗಳ ಕಾಲ ಸಾವು ಬದುಕಿನ ಜತೆ ಹೋರಾಡಿದ ನಿಕಿಲ್ ಬುಧವಾರ ನಿಧನ ಹೊಂದಿದರು. ಶಾಲಿನಿ ಸ್ಥಿತಿ ಗಂಭೀರವಾಗಿದೆ . ಈಗಾಗಲೇ ಟೆಕ್ಸಾಸ್ ಅನ್ನು ಅರ್ಧ ಮುಳುಗಿಸಿರುವ ಹಾರ್ವೆ ಚಂಡಮಾರುತ ಇನ್ನೂ ಮುಂದುವರಿಯಲಿದೆ ಎಂದು ಅಲ್ಲಿಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. Advertisement
ಹಾರ್ವೆ ಚಂಡಮಾರುತ: ಭಾರತೀಯ ವಿದ್ಯಾರ್ಥಿ ಸಾವು
06:55 AM Aug 31, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.