Advertisement

200 ಭಾರತೀಯ ವಿದ್ಯಾರ್ಥಿಗಳು ಸಂಕಷ್ಟದಲ್ಲಿ

06:55 AM Aug 29, 2017 | Team Udayavani |

ಹೊಸದಿಲ್ಲಿ /ಹ್ಯೂಸ್ಟನ್‌: ಕಳೆದ 13 ವರ್ಷಗಳಲ್ಲೇ ಅತಿ ಭೀಕರ ಚಂಡಮಾರುತವು ಅಮೆರಿಕಕ್ಕೆ ಅಪ್ಪಳಿಸಿದ್ದು, ಈಗಾಗಲೇ ಐವರನ್ನು ಬಲಿಪಡೆದಿದೆ. “ಹಾರ್ವೆ’  ಚಂಡಮಾರುತದ ಅಬ್ಬರದಿಂದಾಗಿ ಟೆಕ್ಸಾಸ್‌ ನಗರವು ಜಲಾವೃತ ವಾಗಿದ್ದು, ಹೂಸ್ಟನ್‌ ವಿಶ್ವವಿದ್ಯಾಲಯದಲ್ಲಿ ಸುಮಾರು 200 ಮಂದಿ ಭಾರತೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ.

Advertisement

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರೇ ಟ್ವಿಟರ್‌ ಮೂಲಕ ಈ ಮಾಹಿತಿ ನೀಡಿದ್ದಾರೆ. ಶಾಲಿನಿ ಮತ್ತು ನಿಖೀಲ್‌ ಭಾಟಿಯಾ ಎಂಬ ಇಬ್ಬರು ವಿದ್ಯಾರ್ಥಿಗಳಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ನೆರವಿಗೆ ಧಾವಿಸಿದ್ದಾರೆ ಎಂದು ಸುಷ್ಮಾ ಮಾಹಿತಿ ನೀಡಿದ್ದಾರೆ. 200ರಷ್ಟು ಭಾರತೀಯ ವಿದ್ಯಾರ್ಥಿಗಳ ನೀರಲ್ಲಿ ಮುಳುಗುವ ಸ್ಥಿತಿಯಲ್ಲಿದ್ದಾರೆ. ಅವರಿಗೆ ಆಹಾರವನ್ನು ಪೂರೈಸಲು ಭಾರತೀಯ ರಾಯಭಾರ ಕಚೇರಿ ಯತ್ನಿಸಿತಾದರೂ, ಅದಕ್ಕೆ ಅಮೆರಿಕ ಕರಾವಳಿ ರಕ್ಷಕ ಪಡೆ ಅವಕಾಶ ನೀಡಲಿಲ್ಲ. ರಕ್ಷಣಾ ಕಾರ್ಯಾಚರಣೆಗೆ ಬೋಟ್‌ಗಳ ಕೊರತೆಯ ನೆಪ ಹೇಳುತ್ತಿದ್ದಾರೆ ಎಂದೂ ಸಚಿವೆ ಸುಷ್ಮಾ ಹೇಳಿದ್ದಾರೆ. ಇದೇ ವೇಳೆ, ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರು ಮಂಗಳವಾರ ಪ್ರವಾಹ ಪೀಡಿತ ಟೆಕ್ಸಾಸ್‌ಗೆ ಭೇಟಿ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next