ಮಹಾನಗರ: ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಉಂಟಾದ ಕಾರಣದಿಂದಾಗಿ ನಗರದಲ್ಲಿ ಬುಧವಾರ ಬೆಳಗ್ಗಿನಿಂದಲೇ ಮೋಡಮುಸುಕಿದ ವಾತಾ ವರಣವಿದ್ದು, ಬಿಟ್ಟು ಬಿಟ್ಟು ಮಳೆಯಾಗಿದೆ. ಸುರಿದ ಮಳೆಯಿಂದಾಗಿ ಬೆಳಗ್ಗಿನ ವೇಳೆ ನಗರದ ಕೆಲವು ಕಡೆಗಳಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸವಾರರು ಕಷ್ಟಪಟ್ಟರು.
ಪಣಂಬೂರು, ತಣ್ಣೀರುಬಾವಿ ಬೀಚ್‌ಗಳಲ್ಲಿ ಅಲೆಗಳ ಅಬ್ಬರ ಜೋರಾಗಿತ್ತು. ಪ್ರವಾಸಿಗರನ್ನು ನೀರಾಟವಾಡಲು ಬಿಡುತ್ತಿರಲಿಲ್ಲ. ಮಳೆಯಿಂದಾಗಿ ಕದ್ರಿಯಲ್ಲಿರುವ ಸಂಗೀತ ಕಾರಂಜಿ ಶೋವನ್ನು ಎರಡು ದಿನಗಳಿಂದ ಸ್ಥಗಿತಗೊಳಿಸಲಾಗಿದೆ.
ಸವಾರರಿಗೆ ಸಂಕಷ್ಟ
ಕೆಲವು ಪ್ರದೇಶಗಳಲ್ಲಿ ಮಣ್ಣು ಅಗೆದ ಪರಿಣಾಮ, ಮಳೆಯಿಂದಾಗಿ ಮಣ್ಣು ರಸ್ತೆಗೆ ಬಂದಿತ್ತು. ಇನ್ನು, ಬೆಳಗ್ಗಿನ ವೇಳೆ ಸುರಿದ ಜೋರಾದ ಮಳೆಗೆ ರಸ್ತೆ ಮೇಲೆ ನೀರು ನಿಂತು ವಾಹನ ಸವಾರರು ಕಷ್ಟಪಡುವಂತಾಯಿತು.
ಕೆಲವೊಂದು ಕಡೆಗಳಲ್ಲಿ ಒಳಚರಂಡಿ ಕೆಲಸಗಳು ನಡೆಯುತ್ತಿವೆ. ಜೈಲ್ ರೋಡ್‌ನಿಂದ ಬಿಜೈ ಮಾರುಕಟ್ಟೆ ಸಂಪರ್ಕ ರಸ್ತೆಯಲ್ಲಿ ಕಳೆದ ಕೆಲ ದಿನಗಳಿಂದ ಒಳಚರಂಡಿ ಕೆಲಸ ನಡೆಯುತ್ತಿದ್ದು, ಮಳೆಗಾಲ ಆರಂಭವಾದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಇನ್ನು, ನಗರದ ಅನೇಕ ಕಡೆಗಳಲ್ಲಿ ಚರಂಡಿ ಸೇರಿದಂತೆ ರಸ್ತೆ ಕೆಲಸಗಳು ಮಳೆಯ ನಡುವೆಯೇ ನಡೆಯುತ್ತಿವೆ.
ಹವಾಮಾನ ಇಲಾಖೆಯ ಮುನ್ಸೂ ಚನೆಯ ಪ್ರಕಾರ ಜೂ. 13ರಂದು ಮುಂಗಾರು ರಾಜ್ಯ ಕರಾವಳಿ ತೀರಕ್ಕೆ ಅಪ್ಪಳಿಸ ಲಿದ್ದು, ಜಿಲ್ಲೆಯಲ್ಲಿ ಭಾರೀ ಗಾಳಿ ಜತೆ ಮಳೆ ಸುರಿಯುವ ಸಂಭವವಿದೆ.