Advertisement

ಕೃಷ್ಣಮೃಗಗಳ ಬೇಟೆ : ಇಬ್ಬರ ಬಂಧನ

05:37 PM May 24, 2021 | Team Udayavani |

ಗದಗ : ಕೃಷ್ಣಮೃಗ ಬೇಟೆಯಾಡಿ, ಮಾಂಸ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮತ್ತೋರ್ವ ಪರಾರಿಯಾಗಿ ದ್ದಾನೆ. ತಾಲೂಕಿನ ಕಣಗಿನಹಾಳ ಗ್ರಾಮದ ರಾಮಚಂದ್ರ ಹನಮಪ್ಪ ಹರಣಶಿಕಾರಿ ಹಾಗೂ ಮಲ್ಲಿಕಾರ್ಹು ಕಾಯಪ್ಪ ಹಾತಲಗೇರಿ ಎಂದು ಗುರುತಿಸಲಾಗಿದೆ.

Advertisement

ಕಣಗಿನಹಾಳ ಗ್ರಾಮದ ಹೊರವಲಯದಲ್ಲಿ ರವಿವಾರ ಕಾಡು ಪ್ರಾಣಿಗಳ ಬೇಟೆ ಹಾಗೂ ಮಾಂಸ ಮಾರಾಟದ ಕುರಿತು ಸುಳಿವು ಪಡೆಯುತ್ತಿದ್ದಂತೆ ಗದಗ ಗ್ರಾಮೀಣ ಠಾಣೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರ ಪೈಕಿ ರಾಮಚಂದ್ರಪ್ಪ ಹಾಗೂ ಪರಾರಿಯಾಗಿರುವ ಮತ್ತೋರ್ವ ಆರೋಪಿ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದು, ಮಾರಕಾಸ್ತ್ರಗಳನ್ನು ಬಳಸಿ, ಒಂದು ಗಂಡು ಮತ್ತು ಒಂದು ಹೆಣ್ಣು ಕೃಷ್ಣಮೃಗಗಳನ್ನು ಬೇಟೆಯಾಡಿದ್ದರು. ಮಾಂಸ ಖರೀದಿಗೆ ಆಗಮಿಸಿದ್ದ ಮಲ್ಲಿಕಾರ್ಜು ಹಾತಲಗೇರಿ ಅವರನ್ನೂ ಬಂಧಿಸಲಾಗಿದೆ ಎಂದು ಗದಗ ವಲಯ ಅರಣ್ಯಾಧಿಕಾರಿ ರಾಜು ಗೊಂದಕರ್ ಮಾಹಿತಿ ನೀಡಿದರು.

ಈ ಕುರಿತು ಅರಣ್ಯ ಪ್ರಾಣಿಗಳ ಬೇಟೆ ನಿಷೇಧ ಕಾಯ್ದೆಯಡಿ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next