Advertisement

ಹಂಟರ್‌ ಶೂಟಿಂಗ್‌ನಲ್ಲಿ ಬಿಝಿ

03:02 PM Apr 15, 2023 | Team Udayavani |

ನಟ ನಿರಂಜನ್‌ ಸುಧೀಂದ್ರ ನಾಯಕನಾಗಿ ಅಭಿ ನಯಿ ಸುತ್ತಿರುವ ಎರಡನೇ ಸಿನಿಮಾ “ಹಂಟರ್‌’ ಸದ್ಯ ಶೂಟಿಂಗ್‌ನಲ್ಲಿ ಬಿಝಿಯಾಗಿದೆ. ಈಗಾಗಲೇ ಸದ್ದಿಲ್ಲದೆ ಶೇ. 70ರಷ್ಟು “ಹಂಟರ್‌’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೇ ವೇಳೆ ಸಿನಿಮಾದ ಎರಡು ಪ್ರಮುಖ ಪಾತ್ರಗಳಿಗೆ ದಕ್ಷಿಣ ಭಾರತದ ಇಬ್ಬರು ಖ್ಯಾತ ನಟರಾದ ಶರತ್‌ ಕುಮಾರ್‌ ಮತ್ತು ಸುಮನ್‌ ಎಂಟ್ರಿಯಾಗಿದ್ದಾರೆ.

Advertisement

ಸದ್ಯ ಬೆಂಗಳೂರಿನ ಹೊರವಲಯದಲ್ಲಿರುವ ಮೋಹನ್‌ ಬಿ. ಕೆರೆ ಸ್ಟುಡಿಯೋದಲ್ಲಿ ನಡೆಯುತ್ತಿರುವ ಶೂಟಿಂಗ್‌ನಲ್ಲಿ ನಾಯಕ ನಟ ನಿರಂಜನ್‌, ನಾಯಕಿ ಸೌಮ್ಯ ಮೆನನ್‌ ಭಾಗಿಯಾಗಿದ್ದು, ಈಗ ಈ ತಂಡಕ್ಕೆ ಇಬ್ಬರು ಖ್ಯಾತ ನಾಮ ನಟರಾದ ಶರತ್‌ ಕುಮಾರ್‌ ಮತ್ತು ಸುಮನ್‌ ಕೂಡ ಸೇರಿಕೊಂಡಿದ್ದಾರೆ.

“ಹಂಟರ್‌’ ಸಿನಿಮಾಕ್ಕಾಗಿ ಮೋಹನ್‌ ಬಿ. ಕೆರೆ ಸ್ಟುಡಿಯೋದಲ್ಲಿ ಹಾಕಲಾಗಿದ್ದ ವಿಶೇಷ ಪೊಲೀಸ್‌ ಸ್ಟೇಷನ್‌ ಸೆಟ್‌ನಲ್ಲಿ ನಟ ನಿರಂಜನ್‌, ಶರತ್‌ ಕುಮಾರ್‌ ಮತ್ತು ಸುಮನ್‌ ಅವರು ಭಾಗಿಯಾಗಿದ್ದ ಪ್ರಮು ಖ ದೃಶ್ಯಗಳನ್ನು ನಿರ್ದೇಶಕ ವಿನಯ್‌ ಕೃಷ್ಣ ನಿರ್ದೇಶನದಲ್ಲಿ ಛಾಯಾಗ್ರಹಕ ಜೈ ಆನಂದ್‌ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿಯುತ್ತಿದ್ದರು. ಇದೇ ವೇಳೆ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಮಾಧ್ಯಮಗಳನ್ನು ಆಹ್ವಾನಿಸಿದ್ದ ಚಿತ್ರತಂಡ ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿಯನ್ನು ನೀಡಿತು.

ಮೊದಲಿಗೆ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ನಟ ಶರತ್‌ ಕುಮಾರ್‌, “ಬಹು ಸಮಯದ ನಂತರ ಮತ್ತೂಂದು ಕನ್ನಡ ಸಿನಿಮಾದಲ್ಲಿ ಅಭಿನಯಿಸು ತ್ತಿರುವುದಕ್ಕೆ ಖುಷಿಯಾಗುತ್ತಿದೆ. ಇದರಲ್ಲಿ ಎರಡು- ಮೂರು ಶೇಡ್‌ ಇರುವಂಥ ಪಾತ್ರ ನನ್ನದಾಗಿದೆ. ಇಡೀ ಚಿತ್ರತಂಡ ತುಂಬ ವೃತ್ತಿಪರವಾಗಿ ಸಿನಿಮಾದ ಕೆಲಸಗಳನ್ನು ಮಾಡುತ್ತಿದೆ. ಯುವನಟ ನಿರಂಜನ್‌ ಸಿನಿಮಾದಲ್ಲಿ ತುಂಬ ಚೆನ್ನಾಗಿ ಕಾಣುತ್ತಿದ್ದಾರೆ. ತುಂಬ ನಿರೀಕ್ಷೆ ಇಟ್ಟುಕೊಳ್ಳಬಹುದಾದ ಸಿನಿಮಾ ಇದಾಗಲಿದೆ’ ಎಂದರು.

ನಟ ಸುಮನ್‌ ಮಾತನಾಡಿ, “ತುಂಬ ವರ್ಷಗಳ ನಂತರ ನಾನು ಮತ್ತು ಶರತ್‌ ಕುಮಾರ್‌ ಮತ್ತೂಮ್ಮೆ ಒಂದೇ ಸಿನಿಮಾದಲ್ಲಿ ಅಭಿನಯಿಸುವ ಅವಕಾಶವನ್ನು “ಹಂಟರ್‌’ ಸಿನಿಮಾ ಕೊಟ್ಟಿದೆ. ಈ ಸಿನಿಮಾದಲ್ಲಿ ನಾನು ಹೆಡ್‌ ಕಾನ್ಸಸ್ಟೇಬಲ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ತುಂಬ ದೊಡ್ಡ ಮಟ್ಟದಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಎಲ್ಲ ಥರದ ಆಡಿಯನ್ಸ್‌ಗೂ ಇಷ್ಟವಾಗುವಂಥ ಸಿನಿಮಾ ಇದಾಗಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು. ನಿರ್ಮಾ ಪಕ ತ್ರಿವಿಕ್ರಮ್‌ ಸಾಫ‌ಲ್ಯ ಮತ್ತಿತರರು ಮಾತನಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next