Advertisement

Dhoomam: ಧೂಮಂ, ಹಂಟ್‌ ಫಾರ್‌ ವೀರಪ್ಪನ್‌: ಓಟಿಟಿ ಶೋಗಳ ಹಂಗಾಮ

03:09 PM Aug 07, 2023 | Team Udayavani |

ಇದೀಗ ಚಿತ್ರಮಂದಿರಗಳಂತೆ ಒಟಿಟಿ ವೇದಿಕೆಯು ಬಹಳಷ್ಟು ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡಿದೆ. ಹಲವು ವೇದಿಕೆಗಳಲ್ಲಿ ವಾರ ವಾರ ಹೊಸ ಹೊಸ ಕಂಟೆಂಟ್ ಬರುತ್ತಲೇ ಇರುತ್ತದೆ. ಇದೀಗ ಕನ್ನಡ ಪ್ರೇಕ್ಷಕರಿಗೆ ಎರಡು ಹೊಸ ಶೋಗಳು ಬಂದಿದೆ.

Advertisement

ನೆಟ್‌ಫ್ಲಿಕ್ಸ್‌ ನಲ್ಲಿ ಹಂಟ್‌ ಫಾರ್‌ ವೀರಪ್ಪನ್‌

ಕಾಡುಗಳ್ಳ ವೀರಪ್ಪನ್‌ ಬಗ್ಗೆ ಇಂದಿಗೂ ಬಹುತೇಕರಿಗೆ ಸಾಕಷ್ಟು ಕುತೂಹಲವಿದೆ. ವೀರಪ್ಪನ್‌ ಜೀವನ, ಆತನ ಕುಟುಂಬ, ಮಾಡಿರುವ ಪಾತಕ ಕೃತ್ಯಗಳು, ದಾರುಣ ಅಂತ್ಯ ಹೀಗೆ ಕುರಿತಾಗಿ ಅನೇಕ ವಿಷಯಗಳು ಈಗಲೂ ಆಗಾಗ್ಗೆ ಸುದ್ದಿಯಾಗುತ್ತಳೆ ಇರುತ್ತವೆ. ಇನ್ನು ಈಗಾಗಲೇ ವೀರಪ್ಪನ್‌ ಕುರಿತು ಹಲವು ಸಿನಿಮಾಗಳು ಬೇರೆ ಬೇರೆ ಭಾಷೆಗಳಲ್ಲೂ ಬಂದಿವೆ.

ಈಗ ಅವೆಲ್ಲದರ ಮುಂದುವರೆದ ಭಾಗ ಎಂಬಂತೆ ವೀರಪ್ಪನ್‌ ಕುರಿತಾದ “ಹಂಟ್‌ ಫಾರ್‌ ವೀರಪ್ಪನ್‌’ ಎಂಬ ವೆಬ್‌ ಸೀರಿಸ್‌ ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಈ ವೆಬ್‌ ಸೀರಿಸ್‌ ಓಟಿಟಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಅಮೇಜಾನ್‌ ಪ್ರೈಂ ನಲ್ಲಿ ‘ಧೂಮಂ’

Advertisement

ಇದೇ ಜೂನ್‌ ತಿಂಗಳ ಕೊನೆಯಲ್ಲಿ ಥಿಯೇಟರ್‌ನಲ್ಲಿ ಬಿಡುಗಡೆಯಾಗಿದ್ದ “ಧೂಮಂ’ ಸಿನಿಮಾ ಈಗ ಅಮೇಜಾನ್‌ ಪ್ರೈಂ ಮೂಲಕ ಕಿರಿತೆರೆಗೂ ಬಂದಿದೆ.

“ಲೂಸಿಯಾ’ ಖ್ಯಾತಿಯ ಪವನ್‌ ಕುಮಾರ್‌ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಸಿನಿಮಾದಲ್ಲಿ ಫ‌ಹಾದ್‌ ಫಾಸಿಲ್‌, ಅನುಪಮಾ ಬಾಲಮುರಳಿ, ದೇವ್‌ ಮೋಹನ್‌, ವಿನೀತ್‌, ಅಚ್ಯುತ ಕುಮಾರ್‌ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, “ಹೊಂಬಾಳೆ ಫಿಲಂಸ್‌’ ಸಂಸ್ಥೆ ಈ ಸಿನಿಮಾವನ್ನು ನಿರ್ಮಿಸಿದೆ. ಥಿಯೇಟರ್‌ನಲ್ಲಿ ಹೇಳಿಕೊಳ್ಳದ ಯಶಸ್ಸು ಕಾಣದ “ಧೂಮಂ’ ಸಿನಿಮಾ ಇದೇ ಆಗಸ್ಟ್‌ 4ರಂದು ಅಮೇಜಾನ್‌ ಪ್ರೈಂ ನಲ್ಲಿ ರಿಲೀಸ್‌ ಆಗಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next