Advertisement

Hunsur: ತಂಬಾಕು ಬೆಳೆಗಾರರ ರಕ್ಷಣೆಗೆ ಬದ್ದ: ಸಂಸದ ಯದುವೀರ್ ಒಡೆಯರ್

12:04 PM Oct 16, 2024 | Team Udayavani |

ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಡಿ. ದೇವರಾಜು ಅರಸು  ತಂಬಾಕು ಹರಾಜು ಮಾರುಕಟ್ಟೆಗೆ ಅ.15ರ ಮಂಗಳವಾರ ಸಂಸದ ಕೃಷ್ಣರಾಜ ದತ್ತ ಯದುವೀರ್ ಒಡೆಯರ್ ಭೇಟಿ ನೀಡಿ ಹೊಗೆಸೊಪ್ಪು ಬೆಳೆಗಾರ ಸಮಸ್ಯೆ ಆಲಿಸಿದರು.

Advertisement

ನಂತರ ಮಾತನಾಡಿದ ಅವರು, ದಸರಾ ನವರಾತ್ರಿಯ ಹಿನ್ನೆಲೆಯಲ್ಲಿ ಹರಾಜು ಮಾರುಕಟ್ಟೆ ಪ್ರಾರಂಭದ ದಿನ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮಂಗಳವಾರ ತಂಬಾಕು ಹರಾಜು ಪ್ರಕ್ರಿಯೆ ಮಾರುಕಟ್ಟೆಯಲ್ಲಿ ರೈತರಿಗೆ ಸಿಗುತ್ತಿರುವ ದರ ಪರಿಶೀಲನೆ ಮಾಡಿ ನಂತರ ಮಾತನಾಡಿದರು.

ರೈತರ ಸಮಸ್ಯೆಗಳ ಸವಾಲುಗಳು ಜನ ಪ್ರತಿನಿಧಿಗಳಿಗೆ ಇವೆ. ಅವುಗಳನ್ನು ಎದುರಿಸುವ ಕೆಲಸ ಮಾಡಬೇಕು ಎಲ್ಲರಿಗೂ ಪರಿಹಾರ ಸಿಗುವ ರೀತಿ ರೈತರ ಜೊತೆ ಕೈಜೋಡಿಸುತ್ತೇನೆ ಎಂದು ಹೇಳಿದರು.

ಆಂಧ್ರಪ್ರದೇಶದಲ್ಲಿ ರೈತರಿಗೆ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳು ನೀಡುತ್ತವೆ. ಅಲ್ಲಿನ ಸರ್ಕಾರ ಹಾಗೂ ಮಂಡಳಿಗಳು ರೈತರ ಪರ ನಿಲ್ಲುತ್ತವೆ. ಆದರೆ ಕರ್ನಾಟಕದಲ್ಲಿ ಮೂಲಭೂತ ಸೌಕರ್ಯವಿಲ್ಲದೆ ರೈತರು ಕಂಗಾಲಾಗಿದ್ದಾರೆ  ಎಂಬ ಪ್ರಶ್ನೆಗೆ ಸದ್ಯದಲ್ಲೇ ಅಧಿಕಾರಿಗಳ ಜೊತೆ ರೈತರ ಸಮಸ್ಯೆಗಳ ಬಗ್ಗೆ ಶೀಘ್ರ ಚರ್ಚಿಸುತ್ತೇನೆ ಎಂದರು.

Advertisement

ರೈತರ ಹಲವು ಬೇಡಿಕೆಗಳಾದ ವಿದೇಶಿ ಮಾರುಕಟ್ಟೆಯ ಬೈಯರ್ ಗಳನ್ನು ಕರೆ ತರುವ ವಿಚಾರ ಮುಂದೆ ಇದೆ ಇದಕ್ಕೆ ಮತ್ತಷ್ಟು ಚುರುಕುಗೊಳಿಸುವ ಕೆಲಸ ಮಾಡುತ್ತೇನೆ. ಮಾರುಕಟ್ಟೆ ಪ್ರಾರಂಭ ವಿಳಂಬವಾಗಿರುವುದರಿಂದ ರೈತರಿಗೆ ಬ್ಯಾಂಕ್ ಬಡ್ಡಿ ಹಾಗೂ ಕೆಲವು ಸಮಸ್ಯೆ ಉಂಟಾಗಿದೆ. ಹಿಂದಿನ ಹಲವು ಉಪ ಕ್ರಮಗಳನ್ನು ಕೈಬಿಡುವುದಿಲ್ಲ. ಮುಂದುವರೆಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಅನಧಿಕೃತ ತಂಬಾಕು ಬೆಳೆಗಾರರಿಗೆ ಕಾರ್ಡ್ ಗೆ ಲೈಸೆನ್ಸ್ ನೀಡುವ ಬಗ್ಗೆ ವಾಣಿಜ್ಯ ಮಂತ್ರಿಗಳೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳುವ ಬಗೆ ಮಾತನಾಡುತ್ತೇನೆ. ಹರಾಜು ಮಾರುಕಟ್ಟೆಯೊಳಗೆ ಲೇಬರ್ ಹಾಗೂ ರೈತರ ಮಧ್ಯ ಬಹಳಷ್ಟು ಸಮಸ್ಯೆಯಿದ್ದು, ಅಧಿಕಾರಿಗಳು ಮತ್ತು ರೈತರ ಜೊತೆ ನೇರ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು ಎಂದರು.

ಬೆಂಗಳೂರಿನಲ್ಲಿರುವ ನಿರ್ದೇಶಕರ ಕಚೇರಿಯನ್ನು ಮೈಸೂರಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದ್ದು, ಮೈಸೂರಿನಲ್ಲಿರುವ ಆರ್.ಎಂ .ಒ  ಕಚೇರಿಯನ್ನು ಹುಣಸೂರು ಉಪ ವಿಭಾಗಕ್ಕೆ ಸ್ಥಳಾಂತರಿಸುವ ಬಗೆ ಈಗಾಗಲೇ ಚರ್ಚಿಸಲಾಗಿದೆ ಎಂದ ಅವರು, ಈ ಬಾರಿ ಅಧಿಕಾರಿಗಳು, ಕಂಪನಿಗಳು ರೈತರ ನೆರವಿಗೆ ನಿಲ್ಲಬೇಕು. ಬೆಲೆ ಏರಿಳಿತವಾಗದಂತೆ ನೋಡಿಕೊಳ್ಳಬೇಕು. ರೈತರ ಹಿತ ಕಾಪಾಡುವ ಜವಾಬ್ದಾರಿ ನನ್ನ ಮೇಲಿದೆ ಎಂದು ಹೇಳಿದರು.

ಈ ವೇಳೆ ಮಾಜಿ ಶಾಸಕ ಬಸವರಾಜು, ತಂಬಾಕು ಮಂಡಳಿಯ ಸದಸ್ಯ ಹಬ್ಬನಕುಪ್ಪೆ ದಿನೇಶ್, ವಿಕ್ರಂರಾಜೇ ಅರಸು, ಜಿ.ಪಂ. ಮಾಜಿ ಸದಸ್ಯ ನಾಗರಾಜ್ ಮಲ್ಲಾಡಿ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರ್ ಕುಮಾರ್, ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಣ್ಣ, ಗೌರವಾಧ್ಯಕ್ಷ ಚಂದ್ರೇಗೌಡ, ಪ್ರಧಾನ ಕಾರ್ಯದರ್ಶಿ ರಾಮೇಗೌಡ, ಪದಾಧಿಕಾರಿಗಳಾದ ಮಹದೇವ್, ಜಯಣ್ಣ, ರವಿ, ವಿಷಕಂಠಪ್ಪ, ರಾಮಕೃಷ್ಣೇಗೌಡ, ಸತೀಶ್, ಹಾರಂಗಿ ಮಹಾಮಂಡಲದ ಉಪಾಧ್ಯಕ್ಷ ಮಂಜುನಾಥ್, ನಿರ್ದೇಶಕ ಕಿರಣ್ ಕುಮಾರ್, ಮುಖಂಡರಾದ ಬಿಳಿಕೆರೆ ಪ್ರಸನ್ನ, ಹಿರೀಕ್ಯಾತನ ಹಳ್ಳಿ ಸತೀಶ್, ಹರಾಜು ಮಾರುಕಟ್ಟೆಯ ಅಧೀಕ್ಷಕರುಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next