Advertisement

Hunsur Wheeling ; ಇನ್ಸ್‌ಪೆಕ್ಟರ್ ಮೇಲೆ ಆಟೋ ಹತ್ತಿಸಲು ಯತ್ನ!: ಆರೋಪಿ ಬಂಧನ

11:12 AM Aug 18, 2023 | Team Udayavani |

ಹುಣಸೂರು: ಅಪಾಯಕಾರಿಯಾಗಿ ಆಟೋ ವೀಲಿಂಗ್ ಮಾಡುತ್ತಿದ್ದವನನ್ನು ಪ್ರಶ್ನಿಸಲು ಹೋದ ಪೊಲೀಸ್ ಇನ್ಸ್‌ಪೆಕ್ಟರ್ ಮೇಲೆಯೇ ಆಟೋ ಹತ್ತಿಸಲು ಯತ್ನಿಸಿ, ಪೊಲೀಸ್ ಜೀಪಿಗೆ ಢಿಕ್ಕಿ ಹೊಡೆದು ಪರಾರಿಯಾಗುತ್ತಿದ್ದ ಆರೋಪಿಯನ್ನು ಸಾರ್ವಜನಿಕರ ನೆರವಿನೊಂದಿಗೆ ಹೆಡೆಮುರಿಕಟ್ಟಿರುವ ನಗರ ಠಾಣೆ ಪೊಲೀಸರು ಆಟೋ ವಶಕ್ಕೆ ಪಡೆದಿದ್ದಾರೆ.ಹುಣಸೂರಿನ ಟಿಪ್ಪುನಗರದ ಜಮೀರ್‌ಅಹಮ್ಮದ್ ಪುತ್ರ ಆಟೋ ಚಾಲಕ ರೋಷನ್(23) ಬಂಧಿತ ಆರೋಪಿ.

Advertisement

ಸ್ವಾತಂತ್ರ್ಯೋವದಂದು ಸಂಜೆ ರತ್ನಪುರಿ ರಸ್ತೆಯಲ್ಲಿ ಗಸ್ತು ನಡೆಸುತ್ತಿದ್ದ ವೇಳೆ ಪ್ಯಾಸೆಂಜರ್ ಆಟೋವನ್ನು ಐ.ಕೆ.ರಸ್ತೆ ಕಡೆಯಿಂದ ಅಪಾಯಕಾರಿಯಾಗಿ ವೀಲಿಂಗ್ ಮಾಡಿಕೊಂಡು ಬರುತ್ತಿದ್ದ ಆಟೋವನ್ನು ತಡೆಯಲು ಹೋದ ವೇಳೆ ಹೋ ಎಂದು ಕೂಗುತ್ತಾ, ಪೊಲೀಸರನ್ನೇ ಅಣಕಿಸುತ್ತಾ, ಇನ್ಸ್ಪೆಕ್ಟರ್ ದೇವೇಂದ್ರರ ಮೇಲೆಯೇ ಆಟೋ ಹತ್ತಿಸಲು ಯತ್ನಿಸಿದ ವೇಳೆ ಪಕ್ಕಕ್ಕೆ ಹಾರಿ ತಪ್ಪಿಸಿಕೊಂಡರೆ, ಜೀಪಿನ ಮುಂಭಾಗಕ್ಕೆ ಢಿಕ್ಕಿ ಮಾಡಿ ಜಖಂಗೊಳಿಸಿದ ಚಾಲಕ ರೋಷನ್ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಸುಮಾರು 2 ಕಿಮೀನಷ್ಟು ಹಿಂಬಾಲಿಸಿಕೊಂಡು ಹೋದರೂ ಆಟೋವನ್ನು ಅಪಾಯಕಾರಿಯಾಗಿ ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಪರಾರಿಯಾಗಲೆತ್ತಿಸಿದ ವೇಳೆ ಸಾರ್ವಜನಿಕರ ಸಹಾಯದಿಂದ ಸಲೀಂ ಪ್ಯಾಲೆಸ್ ಬಳಿ ಆಟೋ ಸಹಿತ ಆರೋಪಿಯನ್ನು ಬಂಧಿಸಿದ್ದಾರೆ.

ಈ ಸಂಬಂಧ ನಗರ ಠಾಣೆಯಲ್ಲಿ ಇನ್ಸ್ಪೆಕ್ಟರ್ ದೇವೇಂದ್ರರವರು ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಠಾಣಾಧಿಕಾರಿ ಕುಮಾರ್ ಕರ್ತವ್ಯಕ್ಕೆ ಅಡ್ಡಿ, ಸಮವಸ್ತ್ರದಲ್ಲಿದ್ದ ಪೊಲೀಸರು ಕಾನೂನು ಪಾಲನೆ ಸೂಚಿಸಿದರೂ ನಿರ್ಲಕ್ಷ ಹಾಗೂ ಆಟೋದಿಂದ ಡಿಕ್ಕಿ ಮಾಡಿ ಪ್ರಾಣ ಹಾನಿ ಮಾಡಲು ಯತ್ನಿಸಿದ್ದಲ್ಲದೆ. ಇಲಾಖೆ ಜೀಪ್ ಜಖಂಗೊಂಡಿಸಿದ್ದರ ವಿರುದ್ದ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next