Advertisement

Hunsur: ವಿಷ್ಣುವರ್ಧನ್ 73ನೇ ಹುಟ್ಟುಹಬ್ಬ ಆಚರಣೆ

10:13 PM Sep 20, 2023 | Team Udayavani |

ಹುಣಸೂರು: ನಗರದ ಹಳೇ ಬಸ್ ನಿಲ್ದಾಣದ ಸಮೀಪ ಹುಣಸೂರಿನ ವಿಷ್ಣು ಅಭಿಮಾನಿ ಬಳಗದವತಿಯಿಂದ ಕಲಾ ರತ್ನ ಡಾ.ವಿಷ್ಣುವರ್ಧನ್ ರವರ 73 ನೇ ಹುಟ್ಟು ಹಬ್ಬದ ಅಂಗವಾಗಿ ದಿ.ವಿಷ್ಣುವರ್ಧನ್ ಅವರ ಬೃಹತ್ ಭಾವಚಿತ್ರಕ್ಕೆ ಕ್ಷೀರಾಭಿಷೇಕ ನಡೆಸುವ ಮೂಲಕ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು.

Advertisement

ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಲಕ್ಷ್ಮೀ ನಾರಾಯಣ್ ಮಾತನಾಡಿ ಕಳೆದ 20 ವರ್ಷಗಳಿಂದ ದಿ.ಡಾ.ವಿಷ್ಣುವರ್ಧನ್ ರವರ ಹುಟ್ಟು ಹಬ್ಬವನ್ನು ಬಳಗದ ವತಿಯಿಂದ ಮಾಡುತ್ತಿರುವುದಾಗಿ ಅವರ ಕಲಾಸೇವೆಯನ್ನು ಸ್ಮರಿಸಿದರು. ಇದೇ ಸಂದರ್ಭದಲ್ಲಿ ಬಳಗದ ಕಾರ್ಯಕ್ರಮಗಳಿಗೆ ನೆರವಾಗುತ್ತಿರುವ ಜೋಗಿ ಮುರುಗೇಶ್‌ರನ್ನು ಸನ್ಮಾನಿಸಲಾಯಿತು.

ವಿಷ್ಣುವರ್ಧನ್ ನಟಿಸಿರುವ ಹಾಡುಗಳಿಗೆ ಅಭಿಮಾನಿಗಳು ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ವಿಷ್ಣು ಅಭಿಮಾನಿ ಬಳಗದ ಕಾರ್ಯದರ್ಶಿ ವೆಂಕಟೇಶ್, ಶಶಿಧರ್, ಸಾದಿಕ್, ಜೋಗಿ ಮುರುಗೇಶ್, ವಾಚ್ ಮಹೇಶ್, ಹರಿ ಮುಂತಾದವರು ಸಂಭ್ರಮದಿಂದ ಪಾಲ್ಗೊಂಡಿದ್ದರು. ಸಿಹಿ ವಿತರಿಸಿ, ಅನ್ನದಾನ ನಡೆಸಲಾಯಿತು. ಸಾಕಷ್ಟು ಸಂಖ್ಯೆಯಲ್ಲಿ ವಿಷ್ಣುವರ್ಧನ್ ಅವರ ಅಭಿಮಾನಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next